»   » ಕನ್ನಡದ ಹಾರರ್ ಚಿತ್ರಕ್ಕೆ ಸನ್ನಿ ನಾಯಕಿ: ಹೀರೋ ಆಗಲಿರುವ 'ಸ್ಟಾರ್' ಯಾರು.?

ಕನ್ನಡದ ಹಾರರ್ ಚಿತ್ರಕ್ಕೆ ಸನ್ನಿ ನಾಯಕಿ: ಹೀರೋ ಆಗಲಿರುವ 'ಸ್ಟಾರ್' ಯಾರು.?

Posted By:
Subscribe to Filmibeat Kannada
Sunny Leone to act in a Kannada Horror movie with a Star Hero | Filmibeat Kannada

ಬೇರಾವ ಹೀರೋಯಿನ್ ಗೆ ಅಷ್ಟು ಬೇಡಿಕೆ ಇದ್ಯೋ, ಇಲ್ವೋ ಗೊತ್ತಿಲ್ಲ. ಆದ್ರೆ, ನೀಲಿ ಚಿತ್ರಗಳ ರಾಣಿ ಸನ್ನಿ ಲಿಯೋನ್ ಗೆ ಮಾತ್ರ ಉತ್ತರದಿಂದ ಹಿಡಿದು ದಕ್ಷಿಣದವರೆಗೂ ಅಷ್ಟು ಬೇಡಿಕೆ ಇದೆ.

ತಮ್ಮ ಚಿತ್ರದ ಒಂದು ಹಾಡಿನಲ್ಲಾದರೂ ಸೊಂಟ ಬಳುಕಿಸಿದರೆ ಸಾಕು ಎಂದು ಸನ್ನಿ ಕಾಲ್ ಶೀಟ್ ಗಾಗಿ ಕ್ಯೂ ನಿಲ್ಲುವ ನಿರ್ಮಾಪಕರು ಲೆಕ್ಕವಿಲ್ಲದಷ್ಟು. ಅಂಥದ್ರಲ್ಲಿ, ಕನ್ನಡದ ನಿರ್ಮಾಪಕರೊಬ್ಬರು ಸನ್ನಿ ಲಿಯೋನ್ ಕಾಲ್ ಶೀಟ್ ಪಡೆದುಕೊಂಡು ಬಂದಿದ್ದಾರೆ. ಹಾಗಂತ, ಯಾವುದೋ ಐಟಂ ಸಾಂಗ್ ಗೆ ಇರ್ಬೇಕು ಎಂದುಕೊಳ್ಳಬೇಡಿ. ಪೂರ್ಣ ಪ್ರಮಾಣದ ನಾಯಕಿ ಆಗಿ ಕನ್ನಡ ಸಿನಿಮಾದಲ್ಲಿ ನಟಿಸಲು ಸನ್ನಿ ಲಿಯೋನ್ ಒಪ್ಪಿಕೊಂಡಿದ್ದಾರೆ.

ಕನ್ನಡ ಸಿನಿಮಾದಲ್ಲಿ ನಾಯಕಿ ಆಗಲಿದ್ದಾರೆ ಬಾಲಿವುಡ್ ನಟಿ ಸನ್ನಿ ಲಿಯೋನ್

ಕನ್ನಡದ 'ನಿನ್ನದೇ ಹೆಜ್ಜೆ.ಕಾಂ' ಚಿತ್ರದಲ್ಲಿ ಸನ್ನಿ ಲಿಯೋನ್ ನಾಯಕಿ ಆಗಲಿರುವ ಸುದ್ದಿಯನ್ನ ಮೊನ್ನೆಯಷ್ಟೇ ನಾವೇ ವರದಿ ಮಾಡಿದ್ವಿ. ಇದೀಗ ಅದೇ ಸುದ್ದಿ ಖಚಿತವಾಗಿದೆ. 'ನಿನ್ನದೇ ಹೆಜ್ಜೆ.ಕಾಂ' ಚಿತ್ರದಲ್ಲಿ ಸನ್ನಿ ಲಿಯೋನ್ ಹೀರೋಯಿನ್ ಆಗುವುದು ಪಕ್ಕಾ ಆಗಿದೆ. ಜೊತೆಗೆ ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಬಹಿರಂಗ ಆಗಿದೆ. ಅದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

'ಹಾರರ್' ಸಿನಿಮಾದ ಹೀರೋಯಿನ್

ಸನ್ನಿ ಲಿಯೋನ್ ನಟಿಸಲು ಒಪ್ಪಿಕೊಂಡಿರುವ ಕನ್ನಡದ 'ನಿನ್ನದೇ ಹೆಜ್ಜೆ.ಕಾಂ' ಪಕ್ಕಾ ಹಾರರ್ ಥ್ರಿಲ್ಲರ್ ಸಿನಿಮಾ. ಎಂ.ಎನ್.ಸಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಯೊಬ್ಬನ ಸುತ್ತ ಸುತ್ತುವ ರೋಚಕ ಕಥೆ ಇದಂತೆ. ಚಿತ್ರದ ಸೆಕೆಂಡ್ ಹಾಫ್ ನಲ್ಲಿ ಹಾರರ್ ಅಂಶಗಳು ಇರುತ್ತಂತೆ.

ಸ್ಟಾರ್ ಹೀರೋ ಬರ್ತಾರೆ.!

'ನಿನ್ನದೇ ಹೆಜ್ಜೆ.ಕಾಂ' ಚಿತ್ರದಲ್ಲಿ ಸನ್ನಿ ಲಿಯೋನ್ ಹೀರೋಯಿನ್ ಅಂದ್ಮೇಲೆ, ಹೀರೋ ಕೂಡ ಹೆಸರಾಂತ ನಟರೇ ಆಗಿರುತ್ತಾರೆ ಎನ್ನುತ್ತಾರೆ ಚಿತ್ರತಂಡದವರು. ಆದ್ರೆ, 'ಆ' ಸ್ಟಾರ್ ಹೀರೋ ಯಾರು ಎಂಬ ಸಸ್ಪೆನ್ಸ್ ನ ಸದ್ಯಕ್ಕೆ ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

ಕಥೆ ಕೇಳಿ ಥ್ರಿಲ್ ಆಗಿದ್ದಾರೆ ಸನ್ನಿ

'ನಿನ್ನದೇ ಹೆಜ್ಜೆ.ಕಾಂ' ಚಿತ್ರದ ಕಥೆ ಕೇಳಿ ಸನ್ನಿ ಲಿಯೋನ್ ಥ್ರಿಲ್ ಆಗಿದ್ದಾರಂತೆ. ಹೀಗಾಗಿ ಹೆಚ್ಚು ಯೋಚನೆ ಮಾಡದೆ ಡಿಸೆಂಬರ್ ನಲ್ಲಿ ಕಾಲ್ ಶೀಟ್ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಶೂಟಿಂಗ್

ಚಿಕ್ಕಮಗಳೂರು ಸುತ್ತ-ಮುತ್ತ 'ನಿನ್ನದೇ ಹೆಜ್ಜೆ.ಕಾಂ' ಚಿತ್ರೀಕರಣ ನಡೆಯಲಿದ್ದು, ಕನ್ನಡದ ಜೊತೆಗೆ ತೆಲುಗು ಹಾಗೂ ತಮಿಳು ಭಾಷೆಗಳಲ್ಲೂ ನಿರ್ಮಾಣ ಮಾಡುವ ಯೋಚನೆ ಹಾಕಿಕೊಂಡಿದ್ದಾರೆ ನಿರ್ದೇಶಕ ಮೋಹನ್ ಹಾಸನ್.

English summary
According to the sources, A 'Star' hero to star opposite Sunny Leone in Kannada Movie 'Ninnade hejje.com'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada