»   » ಡಾಲಿ-ಸೂರಿಯ ಈ ಫೋಟೋ ಹಿಂದಿದೆ ರೋಚಕ ಕಥೆ.!

ಡಾಲಿ-ಸೂರಿಯ ಈ ಫೋಟೋ ಹಿಂದಿದೆ ರೋಚಕ ಕಥೆ.!

Posted By:
Subscribe to Filmibeat Kannada
ಡಾಲಿ-ಸೂರಿಯ ಈ ಫೋಟೋ ಹಿಂದಿದೆ ರೋಚಕ ಕಥೆ | Oneindia Kannada

'ಟಗರು' ಚಿತ್ರದ ಸೂಪರ್ ಸಕ್ಸಸ್ ನಂತರ ಧನಂಜಯ್ ಸದ್ಯ 'ಡಾಲಿ' ಹ್ಯಾಂಗೋವರ್ ನಲ್ಲಿದ್ದಾರೆ. ಹೋದಲ್ಲಿ, ಬಂದಲ್ಲಿ ಅಭಿಮಾನಿಗಳು ಡಾಲಿ....ಡಾಲಿ ಎಂದು ಅಪ್ಪಿಕೊಳ್ಳುತ್ತಿದ್ದಾರೆ. ಚಿತ್ರದ ವಿಲನ್ ಗೂ ಇಷ್ಟೊಂದು ದೊಡ್ಡ ಮಟ್ಟದ ಸ್ವಾಗತ ಸಿಗುತ್ತೆ ಎಂಬುದನ್ನ ಧನಂಜಯ್ ಮೂಲಕ ನಿಜವಾಗುತ್ತಿದೆ.

ಈಗ ವಿಷ್ಯ ಏನಪ್ಪಾ ಅಂದ್ರೆ, ಧನಂಜಯ್ ಅವರು ತಮ್ಮ ಫೇಸ್ ಬುಕ್ ನಲ್ಲಿ ಒಂದು ಫೋಟೋ ಹಾಕಿದ್ದಾರೆ. ಜಿಮ್ ನಲ್ಲಿ ನಿರ್ದೇಶಕ ಸೂರಿ ಮತ್ತು ಧನಂಜಯ್ ವರ್ಕೌಟ್ ಮಾಡ್ತಿರುವುದು. ಇದು ಹೊಸ ಫೋಟೋ. ಈ ಫೋಟೋ ಹಿಂದೆ ಒಂದು ಕುತೂಹಲಕಾರಿ ಕಥೆ ಇದೆ.

'ಡಾಲಿ' ಧನಂಜಯ್ ಕಷ್ಟದ ದಿನಗಳನ್ನ ಬಿಚ್ಚಿಟ್ಟ ಸ್ನೇಹಿತ 'ಸಿಂಹಾಜಿ'

ಇದೇ ರೀತಿ ಧನಂಜಯ್ ಮತ್ತು ದುನಿಯಾ ಸೂರಿ ಅವರು ಹಿಂದೊಮ್ಮೆ ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಧನಂಜಯ್ ಗೆ ಟಗರು ಸಿನಿಮಾದಲ್ಲಿ ಅಭಿನಯಿಸುವಂತೆ ಆಫರ್ ನೀಡಿದ್ದರಂತೆ. ಈಗ ಪೋಸ್ಟ್ ಮಾಡಿರುವ ಫೋಟೋದಲ್ಲಿರುವಂತೆ ಆ ದಿನ ಕೂಡ ಇಬ್ಬರು ಮಾತನಾಡಿದ್ದರು.

A story behind this photo

ದುನಿಯಾ ಸೂರಿ ಕೊಟ್ಟ ಅವಕಾಶವನ್ನ ಧನಂಜಯ್ ಕೂಡ ಒಪ್ಪಿಕೊಂಡಿದ್ದು ಅದೇ ಜಿಮ್ ನಲ್ಲಿ. ಈಗ ಸಿನಿಮಾ ಯಶಸ್ಸು ಕಂಡಿದೆ. ಡಾಲಿ ಸೂಪರ್ ಹಿಟ್ ಆಗಿದ್ದಾರೆ. ಸೂರಿ ಮತ್ತೊಮ್ಮೆ ಗೆಲುವು ಕಂಡಿದ್ದಾರೆ. ಈಗ ಮತ್ತೆ ಧನಂಜಯ್ ಮತ್ತು ಸೂರಿ ಜಿಮ್ ನಲ್ಲಿ ವರ್ಕೌಟ್ ಮಾಡ್ತಿದ್ದಾರೆ. ಹೀಗಾಗಿ, ಈ ಅದ್ಭುತ ಕ್ಷಣವನ್ನ ಡಾಲಿ ನೆನಪಿಸಿಕೊಂಡಿದ್ದಾರೆ.

ಶಿವಣ್ಣ ಫ್ಯಾನ್ಸ್ ಆಕ್ರೋಶದ ಬಳಿಕ 'ಡಾಲಿ' ಧನಂಜಯ್ ಹೇಳಿದ್ದೇನು.?

ಶಿವರಾಜ್ ಕುಮಾರ್ ನಾಯಕರಾಗಿದ್ದ ಟಗರು ಚಿತ್ರದಲ್ಲಿ ಧನಂಜಯ್, ವಸಿಷ್ಠ ಸಿಂಹ ಖಳನಾಯಕರಾಗಿದ್ದರು. ಮಾನ್ವಿತ ಹರೀಶ್, ಭಾವನಾ ನಾಯಕಿಯರಾಗಿದ್ದರು. ಚರಣ್ ರಾಜ್ ಸಂಗೀತ ನೀಡಿದ್ದರು. ಕೆ.ಪಿ.ಶ್ರೀಕಾಂತ್ ಬಂಡವಾಳ ಹಾಕಿದ್ದರು. ಫೆಬ್ರವರಿ 23 ರಂದು ತೆರೆಕಂಡಿದ್ದ ಟಗರು ಈಗಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

English summary
''It started from here, and surprisingly we were in gym at the same time and on the same treadmills where he offered me the role of ‘Daali'' says kannada actor dhananjay.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada