For Quick Alerts
  ALLOW NOTIFICATIONS  
  For Daily Alerts

  ಟಾಲಿವುಡ್, ಕಾಲಿವುಡ್ ನಲ್ಲಿ 'ಆ ಕರಾಳ ರಾತ್ರಿ'ಯ ಅನಾವರಣ

  By Pavithra
  |

  ಬಿಗ್ ಬಾಸ್ ಸ್ಪರ್ಧಿಗಳನ್ನು ಒಟ್ಟಾಗಿ ಸೇರಿಸಿಕೊಂಡು 'ಆ ಕರಾಳ ರಾತ್ರಿ' ಎನ್ನುವ ಹೆಸರಿನಲ್ಲಿ ಸಿನಿಮಾ ಮಾಡಿ ಯಶಸ್ಸು ಕಂಡ ದಯಾಳ್ ಪದ್ಮನಾಭನ್ ಟಾಲಿವುಡ್, ಕಾಲಿವುಡ್ ನಲ್ಲಿಯೂ ಸದ್ದು ಮಾಡುತ್ತಿದ್ದಾರೆ. 'ಆ ಕರಾಳ ರಾತ್ರಿ' ಕನ್ನಡ ಪ್ರೇಕ್ಷಕರು ಮಾತ್ರವಲ್ಲದೇ ಸಿನಿಮಾರಂಗವೂ ಚಿತ್ರವನ್ನು ನೋಡಿ ಮೆಚ್ಚಿಕೊಂಡಿತ್ತು.

  ಕಥೆ, ಚಿತ್ರಕಥೆ ಹಾಗೂ ತಾಂತ್ರಿಕ ವಿಚಾರದಲ್ಲಿಯೂ 'ಆ ಕರಾಳ ರಾತ್ರಿ' ಸಿನಿಮಾ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸಕ್ಸಸ್ ಆದ 'ಆ ಕರಾಳ ರಾತ್ರಿ' ಚಿತ್ರದ ತೆಲುಗು ಮತ್ತು ತಮಿಳು ರೀಮೇಕ್ ಹಕ್ಕು ಉತ್ತಮ ಬೆಲೆಗೆ ಮಾರಾಟವಾಗಿದೆ.

  'ಆ ಕರಾಳ ರಾತ್ರಿ' ನೋಡಿ ಏನ್ ಹೇಳಿದ್ರು ವಿಮರ್ಶಕರು? 'ಆ ಕರಾಳ ರಾತ್ರಿ' ನೋಡಿ ಏನ್ ಹೇಳಿದ್ರು ವಿಮರ್ಶಕರು?

  ರೋಲಿಂಗ್ ರಾಕ್ಸ್ ಎನ್ನುವ ಹೈದ್ರಾಬಾದ್ ಸಂಸ್ಥೆ ಎರಡು ಭಾಷೆಯ ರೀಮೇಕ್ ಹಕ್ಕನ್ನು ಖರೀದಿ ಮಾಡಿರುವ ಬಗ್ಗೆ ಸಿನಿಮಾತಂಡ ಸಂತೋಷವನ್ನು ಹಂಚಿಕೊಂಡಿದೆ. 'ಆ ಕರಾಳ ರಾತ್ರಿ' ಸಿನಿಮಾವನ್ನು ದಯಾಳ್ ಪದ್ಮನಾಭನ್ ನಿರ್ದೇಶನ ಮಾಡಿದ್ದು ಜೆಕೆ ಹಾಗೂ ಅನುಪಮ ಗೌಡ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

   Aa Karala Ratri kannada movie Tamil and Telugu remake rights have been sold

  ಒಟ್ಟಾರೆ ಕನ್ನಡ ಸಿನಿಮಾಗಳ ಬೇರೆ ಭಾಷೆಯಲ್ಲಿ ರೀಮೇಕ್ ಆಗಿ ತೆರೆ ಕಾಣುವುದು ಕನ್ನಡ ಸಿನಿಮಾ ಅಭಿಮಾನಿಗಳಿಗೆ ಖುಷಿಯ ವಿಚಾರವೇ ಸರಿ. ಇದೇ ಖುಷಿಯಲ್ಲಿ ನಿರ್ದೇಶಕರು ಪುಟ109 ಸಿನಿಮಾದ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

  English summary
  Kannada 'Aa Karala Ratri' kannada movie Tamil and Telugu remake rights have been sold. Hyderabad based company Rolling Rocks has purchased a two-language remake rights .

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X