»   » ಕನ್ನಡದ ಹೊಸ ಆಪಲ್ ಸುಂದರಿ ದಿಶಾ ಪೂವಯ್ಯ

ಕನ್ನಡದ ಹೊಸ ಆಪಲ್ ಸುಂದರಿ ದಿಶಾ ಪೂವಯ್ಯ

Posted By:
Subscribe to Filmibeat Kannada

ಈ ಫೋಟೋ ನೋಡಿದರೆ ಮತ್ತೆ ಕ್ರೇಜಿಸ್ಟಾರ್ ರವಿಚಂದ್ರನ್ ಹೂ, ಹಣ್ಣು, ದ್ರಾಕ್ಷಿ ಕೈಗೆತ್ತಿಕೊಂಡರೆ ಎಂಬ ಅನುಮಾನ ಸುಳಿದಾಡುತ್ತದೆ. ಕನ್ನಡ ಬೆಳ್ಳಿಪರದೆ ಮೇಲೆ ನಾಯಕಿಯರ ಮೈಮಾಟವನ್ನು ಹೂವು, ಹಣ್ಣುಗಳೊಂದಿಗೆ ಅಲಂಕರಿಸಿ ಪುಷ್ಪಾರ್ಚನೆ ಮಾಡಿಸಿದ ಖ್ಯಾತಿ ರವಿಮಾಮನಿಗೆ ಸಲ್ಲುತ್ತದೆ.

ಈಗ ರವಿಚಂದ್ರನ್ ಆ ರೀತಿಯ ಪ್ರಯೋಗಗಳನ್ನು ಮಾಡುತ್ತಿಲ್ಲ ಬಿಡಿ. ಆದರೆ ಅವರು ಹಾಕಿಕೊಟ್ಟ 'ರಸ'ದಾರಿಯಲ್ಲಿ ಈಗ ಅನೇಕ ನಿರ್ದೇಶಕರು ಹೆಜ್ಜೆ ಹಾಕುತ್ತಿದ್ದಾರೆ. ಇದು ಹೊಸಬರ 'ಆಶೀರ್ವಾದ' ಚಿತ್ರದ ಆಪಲ್ ನೋಟ. ಈ ಆಪಲ್ ಸುಂದರಿ ಹೆಸರು ದಿಶಾ ಪೂವಯ್ಯ.


ನಾಯಕಿಯರ ಸೊಂಟಕ್ಕೆ, ಅವರ ಚಕ್ರನಾಭಿಗೆ ವಿಶೇಷ ಸ್ಥಾನಮಾನವನ್ನು ತಂದುಕೊಟ್ಟ ಖ್ಯಾತಿ ರವಿಚಂದ್ರನ್ ಅವರದು. ಅದೆಲ್ಲಾ ಸರಿ ಈಗ 'ಆಶೀರ್ವಾದ' ಚಿತ್ರದ ವಿಚಾರಕ್ಕೆ ಬರೋಣ. ಈ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ನೀಡಿದೆ.

ವಿಷ್ಣು ಪ್ರಿಯನ್ ಅವರ ನಿರ್ದೇಶನದ ಈ ಚಿತ್ರದ ಅಡಿಬರಹ 'ಶುದ್ಧರಿಗೆ ನಮನ'. ಕ್ಲಾಪ್ ಬಾಯ್ ಆಗಿ ಚಿತ್ರರಂಗಕ್ಕೆ ಬಂದ ಈ ನಿರ್ದೇಶಕರಿಗೆ ಜನಪ್ರಿಯ ನಿರ್ದೇಶಕ, ನಟ ಉಪೇಂದ್ರ ಅವರೇ ಸ್ಫೂರ್ತಿ. ಭಾವನಾತ್ಮಕ ಸನ್ನಿವೇಶಗಳ ಜೊತೆಗೆ ಮನಸ್ಫೋಟಕ ಅಂಶಗಳನ್ನು ಚಿತ್ರದಲ್ಲಿ ಸೇರಿಸಿದ್ದಾರೆ ನಿರ್ದೇಶಕ ವಿಷ್ಣುಪ್ರಿಯನ್.

ಹಾರ್ಡ್ ವೇರ್ ವೃತ್ತಿಯಲ್ಲಿ ತೊಡಗಿಕೊಂಡಿರುವ ಸೂರ್ಯ ಮೋಹನ್ ಅವರು ಈ ಚಿತ್ರದ ನಾಯಕ ಹಾಗೂ ನಿರ್ಮಾಪಕರು. ಜನಪ್ರಿಯ ಸಂಗೀತ ನಿರ್ದೇಶಕ ವಿ ಮನೋಹರ್ ಅವರ ಸಂಗೀತವು ಈ ಚಿತ್ರದ ಜೀವಾಳ ಎನ್ನುತ್ತಾರೆ ನಿರ್ಮಾಪಕರು.

ಪ್ರೇಮ ಪ್ರೀತಿ ಪ್ರಣಯ ಒಳಗೊಂಡಿರುವ ಈ 'ಆಶೀರ್ವಾದ' ಚಿತ್ರದಲ್ಲಿ ದಿಶಾ ಪೂವಯ್ಯ ನಾಯಕಿ. ಮಮತಾ ರಾವತ್ ಅವರು ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಹೊಕ್ಕುಳಲ್ಲಿ ದ್ರಾಕ್ಷಿ ಹಾಕಿಕೊಂಡಿರುವವರನ್ನು ನೋಡಿರುತ್ತೀರಿ. ಈಗ ಹೊಸ ಪ್ರಯೋಗ ಆಪಲ್. (ಒನ್ಇಂಡಿಯಾ ಕನ್ನಡ)

English summary
Kannada film 'Aashirvaada' lead actress Disha Poovaiah raunchy look. Recently the movie clears censor and got 'A' certificate. The film is directed by Vishnu Priyan. Mamata Rawath doing item number in this film.
Please Wait while comments are loading...