»   » ವರಮಹಾಲಕ್ಷ್ಮಿ ಕೃಪೆಗಾಗಿ ಕಾದಿರುವ 'ಆಟಗಾರ' ದ್ವಾರಕೀಶ್!

ವರಮಹಾಲಕ್ಷ್ಮಿ ಕೃಪೆಗಾಗಿ ಕಾದಿರುವ 'ಆಟಗಾರ' ದ್ವಾರಕೀಶ್!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ 'ಕುಳ್ಳ' ಅಂತಾನೇ ಫೇಮಸ್ ಆಗಿರುವ ದ್ವಾರಕೀಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ 49ನೇ ಬಹುನಿರೀಕ್ಷಿತ ಚಿತ್ರ 'ಆಟಗಾರ' ತೆರೆಗೆ ಅಪ್ಪಳಿಸಲು ತಯಾರಾಗಿದೆ. ಇನ್ನೇನು ಎರಡು ವಾರಗಳಲ್ಲಿ ತೆರೆ ಕಾಣಬೇಕಿದ್ದ ಚಿತ್ರ, ಚಿತ್ರತಂಡದವರ ಕೆಲವು ಸೆಂಟಿಮೆಂಟ್ಸ್ ಗಳಿಂದ ಬಿಡುಗಡೆ ಕಾರ್ಯಕ್ರಮ ಪೋಸ್ಟ್ ಪೋನ್ ಆಗುತ್ತಿದೆ.

ಹೌದು ಕೆ.ಎಮ್ ಚೈತನ್ಯ ಆಕ್ಷನ್-ಕಟ್ ಹೇಳಿರುವ 'ಆಟಗಾರ' ಚಿತ್ರಕ್ಕೆ ಸದ್ಯಕ್ಕೆ ವರಮಹಾಲಕ್ಷ್ಮಿ ವ್ರತ ಆರಂಭವಾದಂತಿದೆ. ಈಗಾಗಲೇ ಬಿಡುಗಡೆ ಹಂತದಲ್ಲಿರುವ 'ಆಟಗಾರ' ಚಿತ್ರವನ್ನು ದ್ವಾರಕೀಶ್ ಚಿತ್ರತಂಡ ಆಗಸ್ಟ್ 28 ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆ ಮಾಡಲು ನಿರ್ಧರಿಸಿದೆ.


'Aatagara' Film realese: Yogish Dwarkish's Varamahalakshmi Sentiment

ಅಂದ ಹಾಗೆ ವಿಷ್ಯಾ ಏನಪ್ಪಾ ಅಂದ್ರೆ ಚಿತ್ರ ಬಿಡುಗಡೆ ಡಿಲೇ ಆಗಲು ಕಾರಣ ಇಷ್ಟೇ, 2004ರಲ್ಲಿ ವಿಷ್ಣುವರ್ಧನ್, ದ್ವಾರಕೀಶ್ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ಹಿಟ್ ಚಿತ್ರ 'ಆಪ್ತಮಿತ್ರ' ವರಮಹಾಲಕ್ಷ್ಮಿ ಹಬ್ಬದಂದೇ ಬಿಡುಗಡೆಯಾಗಿತ್ತು. ಆದ್ದರಿಂದ 'ಆಟಗಾರ' ನಿರ್ಮಾಪಕ ಯೋಗೀಶ್ ದ್ವಾರಕೀಶ್ ಅವರು ಈ ವರ್ಷದ ವರಮಹಾಲಕ್ಷ್ಮಿ ಹಬ್ಬದಂದೇ ಬಿಡುಗಡೆ ಮಾಡಲು ಡಿಸೈಡ್ ಮಾಡಿದ್ದಾರೆ.


ವಿಷ್ಣುವರ್ದನ್ ಬಗ್ಗೆ ಅಪಾರ ಪ್ರೀತಿ, ಗೌರವ ಇಟ್ಟುಕೊಂಡಿದ್ದ ಯೋಗೀಶ್ ದ್ವಾರಕೀಶ್ ಅವರು ತಮ್ಮ ಬಹುನಿರೀಕ್ಷೆಯ 'ಆಟಗಾರ' ಚಿತ್ರವನ್ನು ತಮ್ಮ ತಂದೆ ದ್ವಾರಕೀಶ್ ಹಾಗೂ ವಿಷ್ಣುವರ್ದನ್ ಅವರು ನಟಿಸಿದ್ದ ಆಪ್ತಮಿತ್ರ ಬಿಡುಗಡೆಯಾದ ದಿನದಂದೆ ತೆರೆಗೆ ತರಲಿದ್ದಾರೆ.


'Aatagara' Film realese: Yogish Dwarkish's Varamahalakshmi Sentiment

ಎಲ್ಲದಕ್ಕೂ ಕೇವಲ ಕೆಲವು ಸೆಂಟಿಮೆಂಟ್ಸ್ ಮತ್ತು ಹಬ್ಬದಂದು ಚಿತ್ರ ಬಿಡುಗಡೆಯಾದರೆ ಚಿತ್ರ ಯಶಸ್ಸು ಕಾಣಬಹುದು ಎನ್ನುವ ಕಾರಣಗಳಿಂದ ಮಾತ್ರ ಚಿತ್ರ ಬಿಡುಗಡೆ ಕಾರ್ಯಕ್ರಮವನ್ನು ಮುಂದಕ್ಕೆ ಹಾಕಲಾಗುತ್ತಿದೆ.


ಸ್ಯಾಂಡಲ್ ವುಡ್ ನ ಕೆಲವು 10 ಲೀಡ್ ಆಕ್ಟರ್ ಗಳು 'ಆಟಗಾರ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೇಘನಾ ರಾಜ್, ಚಿರಂಜೀವಿ ಸರ್ಜಾ, ಪಾರುಲ್ ಯಾದವ್, ರವಿಶಂಕರ್, ಅನಂತ್ ನಾಗ್, ಮುಂತಾದವರು ಮುಖ್ಯವಾಗಿ ಲೀಡ್ ರೋಲ್ ನಲ್ಲಿ ಮಿಂಚಿದ್ದಾರೆ.


ಇನ್ನುಳಿದಂತೆ ದ್ವಾರಕೀಶ್, ಅಚ್ಯುತ್ ಕುಮಾರ್, ಸಾಧುಕೋಕಿಲ, ಅನು ಪ್ರಭಾಕರ್, ಆರೋಹಿತ ಮುಂತಾದವರ ತಾರಾಗಣವಿದೆ. ಅನೂಪ್ ಸೀಳಿನ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.


ಒಟ್ನಲ್ಲಿ ಭಾರಿ ಕುತೂಹಲ ಕೆರಳಿಸಿರುವ 'ಆಟಗಾರ' ಪ್ರೇಕ್ಷಕರಿಗೆ ಎಷ್ಟರಮಟ್ಟಿಗೆ ಖುಷಿ ಕೊಡಬಹುದು ಅನ್ನೋದನ್ನ ನೋಡಲು ಚಿತ್ರ ತೆರೆ ಕಾಣುವವರೆಗೆ ಕಾದು ನೋಡಬೇಕು.

English summary
Kannada movie 'Aatagara' releasing on August 28. Producer yogish wants to release 'Aatagara' on Varamahalakshmi festival that year. 'Aatagara' features Kannada actor Chiranjeevi Sarja, Kannada actress Meghana Raj, actress Parul Yadav, Dwarakish, Anant Nag in the lead role. The movie is directed by KM Chaitanya of 'Aa Dinagalu' fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada