For Quick Alerts
  ALLOW NOTIFICATIONS  
  For Daily Alerts

  ಹರೀಶ್ ರಾಜ್ ಜೊತೆ ಅಭಿನಯಶ್ರೀ 'ಮಧುಚಂದ್ರ'

  By Rajendra
  |

  ಇದೇನು ಕೇಡುಗಾಲ ಬಂತಪ್ಪಾ ಮದುವೆಗೂ ಮುಂಚೇನೇ ಮಧುಚಂದ್ರವೆ ಎಂದು ಕೇಳಬೇಡಿ. ಹರೀಶ್ ರಾಜ್ ಅವರ ಹೊಸ ಚಿತ್ರಕ್ಕೆ ಈ ರೀತಿ ಶೀರ್ಷಿಕೆ ಇಡಲಾಗಿದೆ ಅಷ್ಟೇ. ಕರಿಯ' ಚಿತ್ರದಲ್ಲಿ ದರ್ಶನ್ ಜೊತೆ ಕೆಂಚಾಲೋ ಮಂಚಾಲೋ ಎಂದು ಕುಣಿದ ಬೆಡಗಿ ಅಭಿನಯ ಶ್ರೀ ಚಿತ್ರದ ನಾಯಕಿ.

  ಇದೊಂದು ಪಕ್ಕಾ ಲವ್ ಮತ್ತು ಹಾರರ್ ಸಿನಿಮಾ ಎನ್ನುತ್ತಾರೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವ ನಿರ್ದೇಶಕ ಗುರು. ಸೋಮಶೇಖರ್ ಎಂಬುವವರು ನಿರ್ಮಿಸುತ್ತಿರುವ ಚೊಚ್ಚಲ ಚಿತ್ರವಿದು. ಚಿತ್ರದಲ್ಲಿ ಮತ್ತೊಬ್ಬ ನಾಯಕಿ ತನುರೈ ಕೂಡ ಅಭಿನಯಿಸುತ್ತಿದ್ದಾರೆ. ಜೂನ್ ಮೊದಲ ವಾರದಲ್ಲಿ ಚಿತ್ರ ಸೆಟ್ಟೇರಲಿದೆ.

  ಶೃಂಗೇರಿಯ ಸುತ್ತಮುತ್ತ ಒಟ್ಟು 20 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಮದುವೆ ಬಳಿಕ ಮಧುಚಂದ್ರಕೆ ಹೋಗುವ ಪ್ರೇಮಿಗಳಿಗೆ ಚಿತ್ರ ವಿಚಿತ್ರ ಘಟನೆಗಳು ಎದುರಾಗುತ್ತವಂತೆ. ಚಿತ್ರ ಕುತೂಹಲಕರವಾಗಿ ಸಾಗುತ್ತದೆ ಎನ್ನುತ್ತಾರೆ ಗುರು. ತೆಲುಗಿನ ದೇವೇಂದ್ರ ಎಂಬುವವರ ಸಂಗೀತ, ನಾಗೇಶ್ ಆಚಾರ್ಯ ಛಾಯಾಗ್ರಹಣ ಚಿತ್ರಕ್ಕಿರುತ್ತದೆ. (ಏಜೆನ್ಸೀಸ್)

  English summary
  After long gap actress Abhinaya Sri back to Kannada films. Her new film with Harish Raj titled as Madhuchandra (Honeymoon). The movie is being directed by Guru. Actress Tanurai also are in the cast. This is a love and horror flick.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X