For Quick Alerts
  ALLOW NOTIFICATIONS  
  For Daily Alerts

  ಪ್ರೇಯಸಿ ಅವಿವಾ ಜೊತೆ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ; ಫೋಟೊಗಳು ವೈರಲ್

  |

  ಕನ್ನಡ ಚಲನಚಿತ್ರರಂಗದ ಲೆಜೆಂಡರಿ ನಟ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಖ್ಯಾತ ವಸ್ತ್ರ ವಿನ್ಯಾಸಕ ಪ್ರಕಾಶ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಮದುವೆಯಾಗಲಿದ್ದು, ಕೆಲವೇ ದಿನಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

  ಇಂದು ( ಡಿಸೆಂಬರ್ 11 ) ಅಭಿ‍ಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ನಿಶ್ಚಿತಾರ್ಥ ನಡೆಯಲಿದೆ ಎಂಬ ಸುದ್ದಿ ನಿನ್ನೆಯೇ ವೈರಲ್ ಆಗಿತ್ತಾದರೂ ಈ ವಿಷಯವನ್ನು ಮಾಧ್ಯಮಗಳಿಂದ ಮುಚ್ಚಿಡಲಾಗಿತ್ತು. ಹೀಗೆ ಗಾಸಿಪ್ ಎಂದೇ ಹರಿದಾಡಿದ್ದ ಈ ಸುದ್ದಿ ಈಗ ನಿಜವಾಗಿದೆ. ಬೆಂಗಳೂರಿನ ಐಷಾರಾಮಿ ಹೊಟೇಲ್ ಫೋರ್ ಸೀಸನ್ಸ್‌ನಲ್ಲಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ನಿಶ್ವಿತಾರ್ಥ ಕಾರ್ಯಕ್ರಮ ಜರುಗಿದೆ.

  ಇನ್ನು ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಕೇವಲ ಆಪ್ತರಿಗಷ್ಟೇ ಆಮಂತ್ರಣವನ್ನು ನೀಡಲಾಗಿದ್ದು, ಚಿತ್ರರಂಗದ ಕೆಲ ನಟ - ನಟಿಯರು, ನಿರ್ಮಾಪಕ, ನಿರ್ದೇಶಕರು ಹಾಗೂ ತಂತ್ರಜ್ಞರು ಭಾಗಿಯಾಗಿದ್ದಾರೆ. ಸಚಿವ ಅಶ್ವತ್ಥ್ ನಾರಾಯಣ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅತ್ತ ಫ್ಯಾಷನ್ ಡಿಸೈನರ್ ಆಗಿರುವ ಅವಿವಾ ಬಿಡ್ಡಪ್ಪ ಅವರ ಕುಟುಂಬಸ್ಥರೂ ಸಹ ಆಪ್ತರನ್ನಷ್ಟೇ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.

  ಫೋಟೊ ಹಂಚಿಕೊಂಡ ಅಯೋಗ್ಯ ಮಹೇಶ್

  ಫೋಟೊ ಹಂಚಿಕೊಂಡ ಅಯೋಗ್ಯ ಮಹೇಶ್

  ಅಭಿಷೇಕ್ ಅಂಬರೀಶ್ ಅಭಿನಯಿಸಲಿರುವ ಇನ್ನೂ ಹೆಸರಿಡದ ಮುಂದಿನ ಚಿತ್ರವೊಂದಕ್ಕೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ಅಯೋಗ್ಯ ಮಹೇಶ್ ಕೂಡ ಈ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಜೋಡಿ ಜತೆಗಿನ ತಮ್ಮ ಫೋಟೊವನ್ನು ಹಂಚಿಕೊಂಡು ನಿಶ್ಚಿತಾರ್ಥದ ಶುಭಾಶಯ ಕೋರಿದ್ದಾರೆ. ಹೀಗೆ ಅಯೋಗ್ಯ ಮಹೇಶ್ ಹಂಚಿಕೊಂಡ ಈ ಒಂದು ಪೋಟೊದಿಂದ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ನಿಶ್ಚಿತಾರ್ಥ ಮಾಡಿಕೊಂಡಿರುವುದು ಖಾತರಿಯಾಗಿದೆ.

  ಚಪ್ಪಾಳೆ ತಟ್ಟಿ ಸಂಭ್ರಮಿಸಿದ ಕುಟುಂಬಸ್ಥರು

  ಚಪ್ಪಾಳೆ ತಟ್ಟಿ ಸಂಭ್ರಮಿಸಿದ ಕುಟುಂಬಸ್ಥರು

  ಇನ್ನು ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಪರಸ್ಪರ ಉಂಗುರ ತೊಡಿಸಿದ ಸಂದರ್ಭದಲ್ಲಿ ನೆರೆದಿದ್ದ ಎರಡೂ ಕುಟುಂಬಗಳ ಸದಸ್ಯರು ಹಾಗೂ ಬಂಧುಗಳು ಚಪ್ಪಾಳೆ ತಟ್ಟುವುದರ ಮೂಲಕ ಸಂಭ್ರಮಿಸಿದ್ದಾರೆ ಹಾಗೂ ಶುಭ ಕೋರಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ನಗು ನಗುತ್ತಾ ಉಂಗುರ ಬದಲಿಸಿಕೊಂಡು ಫೋಟೊಗೆ ಪೋಸ್ ನೀಡಿದ್ದಾರೆ.

  ಶುಭಕೋರಿದ ಅಭಿಮಾನಿ ಬಳಗ

  ಶುಭಕೋರಿದ ಅಭಿಮಾನಿ ಬಳಗ

  ಇನ್ನು ಅನೇಕ ಅಂಬರೀಶ್, ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅಂಬರೀಶ್ ಅಭಿಮಾನಿಗಳ ಪಾಲಿಗೆ ಈ ಸುದ್ದಿ ಸರ್‌ಪ್ರೈಸ್ ಎನಿಸಿದರೆ ತಪ್ಪಾಗಲಾರದು. ಇದಕ್ಕೆ ಕಾರಣ ಈ ಬಗ್ಗೆ ಅಂಬರೀಶ್ ಕುಟುಂಬಸ್ಥರು ಒಂದೇ ಒಂದು ಬಾರಿ ಕೂಡ ಮಾಹಿತಿಯನ್ನು ಹೊರಗೆ ಬಿಟ್ಟುಕೊಡದೇ ಇದ್ದದ್ದು. ಹೌದು, ಕಳೆದ ಕೆಲ ದಿನಗಳ ಹಿಂದಷ್ಟೇ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥದ ವಿಚಾರ ಕೇಳಿದಾಗಲೂ ಸುಮಲತಾ ನೀವೇ ಹುಡುಗಿಯನ್ನು ಹುಡುಕಿ ಎಂದು ಉತ್ತರ ನೀಡುವ ಮೂಲಕ ನಿಶ್ಚಿತಾರ್ಥದ ಯೋಜನೆ ಸದ್ಯಕ್ಕಿಲ್ಲ ಎನ್ನುವಂತೆ ಮಾತನಾಡಿದ್ದರು. ಆದರೆ ಇದೀಗ ನಿಶ್ಚಿತಾರ್ಥ ಮಾಡಿ ಮುಗಿಸಿ ಸರ್‌ಪ್ರೈಸ್ ನೀಡಿದ್ದಾರೆ ಹಾಗೂ ನಿಶ್ಚಿತಾರ್ಥದ ಫೋಟೊ ಹಾಗೂ ವಿಡಿಯೊಗಳನ್ನು ಕಂಡ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರುತ್ತಿದ್ದಾರೆ.

  English summary
  Abhishek Ambareesh and Aviva Biddappa engagement held in a private hotel at Bengaluru
  Sunday, December 11, 2022, 11:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X