For Quick Alerts
  ALLOW NOTIFICATIONS  
  For Daily Alerts

  ಗೆಲುವಿನ ಹೊಸ್ತಿಲಲ್ಲಿ ಸುಮಲತಾ : ಅಭಿಷೇಕ್ ಮೊದಲ ಪ್ರತಿಕ್ರಿಯೆ

  |

  ಮಂಡ್ಯ ಲೋಕಸಭಾ ಚುನಾವಣೆಯ ಫಲಿತಾಂಶ ಅಂತಿಮ ಹಂತಕ್ಕೆ ಬರುತ್ತಿದೆ. ನಟಿ ಸುಮಲತಾ ಅಂಬರೀಶ್ ಗೆಲುವಿನ ಹೊಸ್ತಿಲಲ್ಲಿ ಇದ್ದಾರೆ. ನಿಖಿಲ್ ಕುಮಾರ್ ವಿರುದ್ಧ 50 ರಿಂದ 55 ಸಾವಿರ ಮತಗಳ ಮುನ್ನಡೆಯಲ್ಲಿ ಸುಮಲತಾ ಇದ್ದಾರೆ.

  ಲೋಕಸಭೆ ಚುನಾವಣೆ 2019 ಫಲಿತಾಂಶ LIVE : ಶತ್ರುಘ್ನ ಸಿನ್ಹಾಗೆ ಹೀನಾಯ ಸೋಲು

  ಸುಮಲತಾ ಅವರ ಭಾರಿ ಮುನ್ನಡೆಯ ಬಗ್ಗೆ ಪುತ್ರ ಅಭಿಷೇಕ್ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ. ''ಲೀಡ್ ಜಾಸ್ತಿ ಇದೆ. ಆದರೂ ಇನ್ನು ಮತ ಎಣಿಕೆ ಬಾಕಿ ಇದೆ. ನಮ್ಮ ಹೋರಾಟಕ್ಕೆ ಜನ ಆಶೀರ್ವಾದ ಮಾಡಿದ್ದಾರೆ.'' ಎಂದು ಸಂತಸ ಹಂಚಿಕೊಂಡಿದ್ದಾರೆ.

  ''ನಮ್ಮ ಕೈಲಾದ ಪ್ರಯತ್ನ ಮಾಡಿದ್ವಿ. ಜನ ಮತ್ತು ದೇವರನ್ನು ನಂಬಿದ್ದೇವು. ಗೆದ್ದರೆ ಸಾಕು ಎಂದುಕೊಂಡಿದ್ವಿ. ಆದರೆ, ಲೀಡ್ ಕೂಡ ಚೆನ್ನಾಗಿದೆ.'' ಎಂದು ತಮ್ಮ ಗೆಲುವನ್ನು ಜನರಿಗೆ ಹಾಗೂ ದೇವರಿಗೆ ಅರ್ಪಿಸಿದ್ದಾರೆ.

  ಇಷ್ಟು ಮಾತನಾಡಿದರುವ ಅಭಿಷೇಕ್ ಗೆಲುವು ಅಧಿಕೃತವಾಗಿ ಘೋಷಣೆ ಮಾಡಿದ ನಂತರ ಇನ್ನಷ್ಟು ವಿಚಾರ ಹಂಚಿಕೊಳ್ಳುತ್ತೇನೆ ಎಂದರು. ಈಗಾಗಲೇ ಅಭಿಮಾನಿಗಳು ಹಾಗೂ ಸ್ನೇಹಿತರು ಫೋನ್ ಕರೆ ಮೂಲಕ ಅಭಿಷೇಕ್ ಅವರಿಗೆ ಅಭಿನಂದಿಸುತ್ತಿದ್ದಾರಂತೆ.

  ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಸ್ಪರ್ಧೆ ಮಾಡಿದ್ದು, ಸಿ ಎಂ ಪುತ್ರ ನಿಖಿಲ್ ಕುಮಾರ್ ಅವರ ಎದುರಾಳಿ ಆಗಿದ್ದರು.

  English summary
  Lok sabha elections results 2019 : Abhishek Ambareesh first reaction about mandya election result. Sumalatha has gets 50000 vote lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X