Don't Miss!
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಭಿಷೇಕ್, ಅವಿವಾಗೆ ತೊಡಿಸಿದ ಉಂಗುರದ ಬೆಲೆ ಎಷ್ಟು ಲಕ್ಷ?
ಅಂಬರೀಶ್-ಸುಮಲತಾ ಪುತ್ರ, ಸ್ಯಾಂಡಲ್‌ವುಡ್‌ನ ಸ್ಟಾರ್ ಯುವನಟ ಅಭಿಷೇಕ್ ಅಂಬರೀಶ್ ನಿನ್ನೆಯಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಜನಪ್ರಿಯ ಉಡುಪು ವಿನ್ಯಾಸದ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಅವರೊಟ್ಟಿಗೆ ಅಭಿಷೇಕ್ ಉಂಗುರ ಬದಲಾಯಿಸಿಕೊಂಡಿದ್ದು ಶೀಘ್ರದಲ್ಲಿಯೇ ಇಬ್ಬರ ವಿವಾಹ ನಡೆಯಲಿದೆ.
ನಿನ್ನೆ ಬೆಂಗಳೂರಿನಲ್ಲಿಯೇ ಅದ್ಧೂರಿಯಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದೆ. ನಟ ಯಶ್, ದರ್ಶನ್ ಸೇರಿದಂತೆ ಹಲವು ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಅಭಿಷೇಕ್‌ರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಗಣ್ಯರು, ಆಪ್ತೇಷ್ಟ್ರ ಮುಂದೆ ತಮ್ಮ ಪ್ರೀತಿಯ ಹುಡುಗಿಗೆ ಅಭಿಷೇಕ್ ಉಂಗುರ ತೊಡಿಸಿದರು. ಅಂದಹಾಗೆ ಅಭಿಷೇಕ್, ಅವಿವಾಗೆ ತೊಡಿಸಿದ ಉಂಗುರದ ಬೆಲೆ ಎಷ್ಟು ಗೊತ್ತೆ?
ಅಭಿಷೇಕ್, ಅವಿವಾಗೆ ವಜ್ರದ ಉಂಗುರವನ್ನು ತೊಡಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಜ್ರದ ಉಂಗುರವನ್ನು ವಿಶೇಷವಾಗಿ ಪುಣೆಯಲ್ಲಿ ಮಾಡಿಸಿದರಂತೆ ಅಭಿಷೇಕ್ ಅಂಬರೀಶ್. ಈ ವಜ್ರದ ಉಂಗುರದ ಬೆಲೆ ಬರೋಬ್ಬರಿ 37 ಲಕ್ಷ ರುಪಾಯಿ.
ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಅವರದ್ದು ಹೊಸ ಪ್ರೇಮಕತೆಯಲ್ಲ ಅವರಿಬ್ಬರದ್ದೂ ತುಸು ಹಳೆಯ ಪ್ರೇಮಕತೆಯೇ. ಅಭಿಷೇಕ್ ಹಾಗೂ ಅವಿವಾ ಐದಾರು ವರ್ಷಗಳಿಂದಲೂ ಪರಿಚಿತರು ಮತ್ತು ಪ್ರೇಮಿಗಳು. ಇವರಿಬ್ಬರ ಪರಿಚಯ ಮೊದಲಿಗೆ ಆಗಿದ್ದು ವಿದೇಶದಲ್ಲಂತೆ. ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಅದುವೇ ಪ್ರೀತಿಗೆ ಪರಿವರ್ತನೆಗೊಂಡಿದೆ.
ಅಭಿಷೇಕ್ ಹಾಗೂ ಅವಿವಾರ ಪ್ರೇಮದ ವಿಷಯ ಅಂಬರೀಶ್ ಅವರಿಗೂ ತಿಳಿದಿತ್ತಂತೆ. ಸಿನಿಮಾಗಳಲ್ಲಿ ಯಶಸ್ವಿಯಾದ ಬಳಿಕವೇ ವಿವಾಹವಾಗುವುದು ಎಂದು ಅಭಿಷೇಕ್ ಮೊದಲೇ ನಿಶ್ಚಯ ಮಾಡಿದ್ದ ಕಾರಣ ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಮುಂದಿನ ಜೂನ್ ತಿಂಗಳಲ್ಲಿ ಅಭಿಷೇಕ್-ಅವಿವಾ ವಿವಾಹ ನಡೆಯಲಿದೆ. ಬೆಂಗಳೂರಿನಲ್ಲಿ ವಿವಾಹ ನಡೆಯಲಿದ್ದು, ಆರತಕ್ಷಕೆ ಕಾರ್ಯಕ್ರಮವನ್ನು ಮಂಡ್ಯದಲ್ಲಿ ನಡೆಸಲು ಸುಮಲತಾ ನಿಶ್ಚಯಿಸಿದ್ದಾರೆ.