For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಮುಂದೆ ಅಂಬಿ ಪುತ್ರ ಅಭಿಷೇಕ್ ಯಾವುದಕ್ಕೂ ಕಮ್ಮಿ ಇಲ್ಲ.!

  By Harshitha
  |

  ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಚೊಚ್ಚಲ ಚಿತ್ರ 'ಅಮರ್' ಇನ್ನೂ ಸೆಟ್ಟೇರಿಲ್ಲ. ಸೆಟ್ಟೇರುವ ಮುನ್ನವೇ 'ಅಮರ್' ಸಿನಿಮಾದ ಬಗ್ಗೆ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸುದ್ದಿ ಆಗುತ್ತಿದೆ.

  ನಿರ್ದೇಶಕ ನಾಗಶೇಖರ್ ಹೆಣೆದಿರುವ 'ಅಮರ್' ಕಥೆಗೆ ಮಂಡ್ಯದ ಗಂಡು ಅಂಬರೀಶ್ ಹಾಗೂ ಪುತ್ರ ಅಭಿಷೇಕ್ ಕ್ಲೀನ್ ಬೌಲ್ಡ್ ಆಗಿದ್ದಾರಂತೆ. ಹೀಗಾಗಿ 'ಅಮರ್' ಚಿತ್ರಕ್ಕೆ ಇಬ್ಬರೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂಬುದು ನಿರ್ದೇಶಕ ನಾಗಶೇಖರ್ ಮಾತು.

  'ಅಮರ್' ಚಿತ್ರದ ಸ್ಕ್ರಿಪ್ಟ್ ವರ್ಕ್ ನಲ್ಲಿ ನಾಗಶೇಖರ್ ಬಿಜಿಯಾಗಿದ್ದಾರೆ. ಈ ನಡುವೆ ಸಿನಿಮಾದ ಫೋಟೋಶೂಟ್ ಕೂಡ ಮುಗಿಸಿ ಬಿಟ್ಟಿದ್ದಾರೆ. ಫೋಟೋ ಶೂಟ್ ಹೇಗೆ ಬಂದಿದೆ.? ಫೋಟೋಶೂಟ್ ನಲ್ಲಿ ಅಭಿಷೇಕ್ ಹೇಗೆ ಕಾಣ್ತಾರೆ.? ಅಂತ ಕೇಳಿದ್ರೆ ''ಪ್ರಭಾಸ್ ರೇಂಜ್ ನಲ್ಲಿ ಕಾಣ್ತಾರೆ'' ಅಂತಾರೆ ನಿರ್ದೇಶಕ ನಾಗಶೇಖರ್.

  ಅಂಬರೀಶ್ ಮಗನ ಚೊಚ್ಚಲ ಚಿತ್ರದ ಟೈಟಲ್ ಬಗ್ಗೆ ಹೊಸ ಸುದ್ದಿಅಂಬರೀಶ್ ಮಗನ ಚೊಚ್ಚಲ ಚಿತ್ರದ ಟೈಟಲ್ ಬಗ್ಗೆ ಹೊಸ ಸುದ್ದಿ

  ಅಲ್ಲಿಗೆ, 'ಬಾಹುಬಲಿ' ಪ್ರಭಾಸ್ ಲುಕ್ ಹಾಗೂ ಸ್ಟೈಲ್ ಗೆ ಹೋಲಿಸಿದ್ರೆ, ಅಭಿಶೇಕ್ ಯಾವುದರಲ್ಲೂ ಕಮ್ಮಿ ಇಲ್ಲ ಅಂತರ್ಥ.

  'ಅಮರ್' ಚಿತ್ರದ ಫಸ್ಟ್ ಲುಕ್ ಹಾಗೂ ಸಿನಿಮಾದ ಟೀಸರ್ ಅಂಬರೀಶ್ ರವರ ಹುಟ್ಟುಹಬ್ಬದಂದು ಬಿಡುಗಡೆ ಮಾಡಲು ನಿರ್ದೇಶಕ ನಾಗಶೇಖರ್ ನಿರ್ಧರಿಸಿದ್ದಾರೆ.

  ಅಂಬಿ ಮಗನನ್ನು ಕುಣಿಸಲು ಬಂದರು ಅರ್ಜುನ್ ಜನ್ಯಅಂಬಿ ಮಗನನ್ನು ಕುಣಿಸಲು ಬಂದರು ಅರ್ಜುನ್ ಜನ್ಯ

  ಅಂದ್ಹಾಗೆ, 'ಅಮರ್' ಸಿನಿಮಾದಲ್ಲಿ ಒಂದು ಸುಂದರ ಲವ್ ಸ್ಟೋರಿ ಇರಲಿದೆ. 'ಸಂಜು ವೆಡ್ಸ್ ಗೀತಾ' ಹಾಗೂ 'ಮೈನಾ' ಚಿತ್ರಗಳನ್ನೂ ಮೀರಿಸುವಂತಹ ದೃಶ್ಯ ಕಾವ್ಯವಾಗಲಿದ್ಯಂತೆ 'ಅಮರ್'.

  'ಅಮರ್' ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ಸದ್ಯ ನಾಯಕಿಯ ಹುಡುಕಾಟದಲ್ಲಿ ನಾಗಶೇಖರ್ ತೊಡಗಿದ್ದಾರೆ.

  English summary
  Director Nagashekar says Abhishek Ambareesh looks like Prabhas in Kannada Movie 'Amar' photo shoot.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X