For Quick Alerts
  ALLOW NOTIFICATIONS  
  For Daily Alerts

  ಅಭಿಷೇಕ್ ಅಂಬರೀಶ್ ಗೆ ದುನಿಯಾ ಸೂರಿ ನಿರ್ದೇಶನ: ಫಸ್ಟ್ ಲುಕ್ ಮತ್ತು ಟೈಟಲ್ ರಿವೀಲ್

  |

  ನಿರ್ದೇಶಕ ನಾಗಶೇಖರ್ ಸಾರಥ್ಯ 'ಅಮರ್' ಸಿನಿಮಾದ ಮೂಲಕ ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಭಿಷೇಕ್ ಅಮರ್ ಸಿನಿಮಾ ರಿಲೀಸ್ ಆಗಿ ವರ್ಷವಾಗಿದೆ. ಈಗ ಅಭಿ ಎರಡನೇ ಸಿನಿಮಾ ಅನೌನ್ಸ್ ಆಗಿದ್ದು, ಫಸ್ಟ್ ಲುಕ್ ಮತ್ತು ಟೈಟಲ್ ರಿಲೀಸ್ ಆಗಿದೆ.

  Recommended Video

  ದುನಿಯಾ ಸೂರಿ ಮುಂದಿನ ಸಿನಿಮಾ ಅಂಬಿ ಪುತ್ರನ ಜೊತೆ..? | Abhishek Ambaresh Next with Duniya Suri?

  ಅಭಿಷೇಕ್ ಎರಡನೇ ಸಿನಿಮಾಗೆ ದುನಿಯಾ ಸೂರಿ ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕೆ ಬ್ಯಾಡ್ ಮ್ಯಾನರ್ಸ್ ಅಂತ ಟೈಟಲ್ ಇಡಲಾಗಿದೆ. ಸದ್ಯ ಫಸ್ಟ್ ಲುಕ್ ರಿಲೀಸ್ ಮಾಡಿರುವ ಚಿತ್ರತಂಡ, ರೆಬೆಲ್ ಸ್ಟಾರ್ ಅಂಬರೀಷ್ ಹುಟ್ಟುಹಬ್ಬದ ಪ್ರಯುಕ್ತ ಇದೇ 29ಕ್ಕೆ ಈ ಚಿತ್ರದ ಮೋಷನ್ ಪೋಸ್ಟರ್ ನ ರಿಲೀಸ್ ಮಾಡಲು ಪ್ಲಾನ್ ಚಿತ್ರತಂಡ ಪ್ಲಾನ್ ಮಾಡಿದೆ.

  ದುನಿಯಾ ಸೂರಿ ನಿರ್ದೇಶನದ ಚಿತ್ರದಲ್ಲಿ ಅಭಿಷೇಕ್ ಅಂಬರೀಷ್?ದುನಿಯಾ ಸೂರಿ ನಿರ್ದೇಶನದ ಚಿತ್ರದಲ್ಲಿ ಅಭಿಷೇಕ್ ಅಂಬರೀಷ್?

  ಚಿತ್ರದ ಫಸ್ಟ್ ಲುಕ್ ನೋಡಿದ್ರೆ ಗೊತ್ತಾಗುತ್ತೆ ಇದು ಪಕ್ಕ ಮಾಸ್ ಸಿನಿಮಾ ಎನ್ನುವುದು. ಕ್ರೈಮ್ ಬೇಸ್ಡ್ ಸಿನಿಮಾ ಮಾಡುವುದ್ರಲ್ಲಿ ನಿರ್ದೇಶಕ ಸೂರಿ ಒಂದು ಕೈ ಮೇಲೆ. ರೊಮ್ಯಾಂಟಿಕ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಭಿಷೇಕ್ 'ಬ್ಯಾಡ್ ಮ್ಯಾನರ್ಸ್' ಮಾಸ್ ಸಿನಿಮಾದಲ್ಲಿ ಹೇಗೆ ಕಾಣಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ.

  ಅಂದ್ಹಾಗೆ ಬ್ಯಾಡ್ ಮ್ಯಾನರ್ಸ್ ಸ್ಟುಡಿಯೋ 18 ಬ್ಯಾನರ್ ನಡಿಯಲ್ಲಿ ಪಾಪ್ ಕಾರ್ನ್ ಮಂಕಿ‌ಟೈಗರ್ ಖ್ಯಾತಿಯ ಸುಧೀರ್ ಕೆ.ಎಂ ನಿರ್ಮಾಣ ಮಾಡ್ತಿದ್ದಾರೆ. ಚರಣ್ ರಾಜ್ ಸಂಗೀತ ಸಂಗೀತ ಚಿತ್ರಕ್ಕಿದೆ. ಔಟ್ ಅಂಡ್ ಔಟ್ ಕಮರ್ಷಿಯಲ್ ಮಾಸ್ ಕಥೆಯಾಗಿರೋ ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ಸುರೇಂದ್ರನಾಥ್ ಕಥೆ ಜೊತೆಗೆ, ಪಾಪ್ ಕಾರ್ನ್ ಮಂಕಿ‌ ಟೈಗರ್ ಗೆ ಕೆಲಸ ಮಾಡಿದ್ದ ಮೃತ ಭಾರ್ಗವ್ ಜೊತೆಯಾಗಿದ್ದಾರೆ.

  ದುನಿಯಾ ಸೂರಿ ಜತೆ 'ಬ್ಯಾಡ್ ಮ್ಯಾನರ್ಸ್': ಅಭಿಷೇಕ್ ಅಂಬರೀಷ್ ಹೇಳಿದ್ದೇನು?ದುನಿಯಾ ಸೂರಿ ಜತೆ 'ಬ್ಯಾಡ್ ಮ್ಯಾನರ್ಸ್': ಅಭಿಷೇಕ್ ಅಂಬರೀಷ್ ಹೇಳಿದ್ದೇನು?

  ವಿಶೇಷ ಅಂದರೆ ಆಲ್ಮೋಸ್ಟ್ ಎಲ್ಲಾ ಪಾಪ್ ಕಾರ್ನ್ ಮಂಕಿ ಟೈಗರ್ ಟೀಮ್ ಈ ಚಿತ್ರಕ್ಕೂ ಕೆಲಸ ಮಾಡ್ತಿದ್ದಾರೆ. ಪಾಪ್ ಕಾರ್ನ್ ಮಂಕಿ ಟೈಗರ್ ಯಶಸ್ಸಿನ ನಂತರ ಅಭಿಷೇಕ್ ಗೆ ನಿರ್ದೇಶನ ಮಾಡುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟಾಗಿದೆ.

  English summary
  Abhishek Ambareesh next movie with Duniya Suri title Bad Manners. Bad Manners First look released.
  Friday, May 29, 2020, 10:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X