For Quick Alerts
  ALLOW NOTIFICATIONS  
  For Daily Alerts

  ''ನಮ್ಮ ತಂದೆ ರಾಜ್ ಕುಮಾರ್ ಅವರ ದೊಡ್ಡ ಫ್ಯಾನ್'' ಅಣ್ಣಾವ್ರ ಬಗ್ಗೆ ಅಭಿಷೇಕ್ ಮಾತು ಕೇಳಿ!

  |
  ಡಾ.ರಾಜ್ ಕುಮಾರ್ ಗುಣಗಾನ ಮಾಡಿದ ನಟ ಅಭಿಷೇಕ್ ಬಚ್ಚನ್ | Filmibeat Kannada

  ಅಮಿತಾಭ್ ಬಚ್ಚನ್ ಭಾರತ ಚಿತ್ರರಂಗ ಕಂಡ ಮಹಾನ್ ನಟರಲ್ಲಿ ಒಬ್ಬರು. ಲಕ್ಷಾಂತರ ಅಭಿಮಾನಿಗಳ ಪಾಲಿನ ಸೂಪರ್ ಹೀರೋ ಅಮಿತಾಭ್ ಬಚ್ಚನ್. ಹೀಗಿರುವಾಗ ಇಂತಹ ದೈತ್ಯ ನಟ ಫ್ಯಾನ್ ಆಗಿದ್ದು, ಕರುನಾಡ ಪುತ್ರ ರಾಜಣ್ಣನಿಗೆ.

  ರಾಜ್ ಕುಮಾರ್ ಕಲಾ ದೇವಿಯ ಪುತ್ರ. ಅವರ ಪ್ರತಿಭೆ ಬಗ್ಗೆ ಬರೆಯುವುದು ಹೇಗೆ..? ಅದನ್ನು ನೋಡಬೇಕು.. ಅನುಭವಿಸಬೇಕು. ರಾಜ್ ಕುಮಾರ್ ಅವರ ನಟನೆಯನ್ನು ತುಂಬ ಮೆಚ್ಚಿಕೊಂಡಿದ್ದ ನಟರಲ್ಲಿ ಅಮಿತಾಭ್ ಬಚ್ಚನ್ ಪ್ರಮುಖರು. ಇನ್ನು ಗಂಧದ ಗುಡಿಯಲ್ಲಿ ಇದ್ದ ರಾಜ್ ಅವರಿಗೂ, ಬಾಲಿವುಡ್ ನಲ್ಲಿ ಇದ್ದ ಬಚ್ಚನ್ ರಿಗೂ ಒಳ್ಳೆಯ ಸ್ನೇಹ ಇತ್ತು.

  ಸೂರ್ಯನೊಬ್ಬ, ಚಂದ್ರನೊಬ್ಬ, ರಾಜನೊಬ್ಬ : ಆಂಧ್ರಾವಾಲ ಕಂಡಂತೆ ರಾಜ್ ಸೂರ್ಯನೊಬ್ಬ, ಚಂದ್ರನೊಬ್ಬ, ರಾಜನೊಬ್ಬ : ಆಂಧ್ರಾವಾಲ ಕಂಡಂತೆ ರಾಜ್

  ಈ ವಿಷಯವನ್ನು ಮತ್ತೆ ಈ ನೆನಪು ಮಾಡಿದ್ದು ಬಚ್ಚನ್ ಪುತ್ರ. ನಟ ರಾಜ್ ಕುಮಾರ್ ಬಗ್ಗೆ ಅನೇಕ ವಿಷಯಗಳನ್ನು ಹಂಚಿಕೊಂಡರು ಮುಂದೆ ಓದಿ...

  ನಮ್ಮ ತಂದೆ ರಾಜ್ ಕುಮಾರ್ ಅವರ ದೊಡ್ಡ ಫ್ಯಾನ್

  ನಮ್ಮ ತಂದೆ ರಾಜ್ ಕುಮಾರ್ ಅವರ ದೊಡ್ಡ ಫ್ಯಾನ್

  ''ನನ್ನ ತಂದೆ ನನಗೆ ರಾಜ್ ಕುಮಾರ್ ಸರ್ ರನ್ನು ಪರಿಚಯ ಮಾಡಿಸಿದ್ದರು. ಆಗ ನಾನು ಸಣ್ಣ ಹುಡುಗನಾಗಿದ್ದೆ. 'ನಾನು ರಾಜ್ ಕುಮಾರ್ ಅವರ ದೊಡ್ಡ ಫ್ಯಾನ್' ಎಂದು ನನ್ನ ತಂದೆಯೇ ಹೇಳಿಕೊಂಡಿದ್ದಾರೆ. ರಾಜ್ ಕುಮಾರ್ ಅವರ ನಟನೆ ಅಂದರೆ ನಮ್ಮ ತಂದೆಗೆ ತುಂಬ ಇಷ್ಟ. ರಾಜ್ ಕುಮಾರ್ ಅವರ ಮಕ್ಕಳೂ ಸಹ ಒಳ್ಳೊಳ್ಳೆಯ ಸಿನಿಮಾ ಮಾಡುತ್ತಿದ್ದಾರೆ. ಎಲ್ಲೆಡೆ ಅಭಿಮಾನಿಗಳನ್ನು ಹೊಂದಿದ್ದಾರೆ. '' ಎಂದು ಅಭಿಷೇಕ್ ಬಚ್ಚನ್ ಮಾತಾಡಿದ್ದಾರೆ.

  ಕೆಲವು ಕನ್ನಡ ಸಿನಿಮಾಗಳನ್ನು ನೋಡಿದ್ದೇನೆ

  ಕೆಲವು ಕನ್ನಡ ಸಿನಿಮಾಗಳನ್ನು ನೋಡಿದ್ದೇನೆ

  ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ಮಾತನಾಡಿರುವ ಅಭಿಷೇಕ್ ''ನಾನು ಚೆನೈನಲ್ಲಿ ಹೆಚ್ಚು ಇದ್ದೇ. ಅಲ್ಲಿ ನನಗೆ ಹೆಚ್ಚು ಫ್ಯಾನ್ಸ್ ಇದ್ದಾರೆ. ನಾನು ತಮಿಳು, ತೆಲುಗು, ಕನ್ನಡ ಹಾಗೂ ಮಲೆಯಾಳಂನ ಕೆಲವು ಸಿನಿಮಾಗಳನ್ನು ನೋಡಿದ್ದೇನೆ. ಎಲ್ಲರೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.'' ಎಂದು ಮೆಚ್ಚುಗೆ ಸೂಚಿಸಿದ್ದಾರೆ.

  ರಾಜ್ ಬಗ್ಗೆ ಅಮಿತಾಭ್ ಹೀಗಂದಿದ್ರು

  ರಾಜ್ ಬಗ್ಗೆ ಅಮಿತಾಭ್ ಹೀಗಂದಿದ್ರು

  ರಾಜ್ ಕುಮಾರ್ ಅವರ ಪ್ರತಿಭೆ ಬಗ್ಗೆ ಒಮ್ಮೆ ಮಾತನಾಡಿದ್ದ ಅಮಿತಾಭ್ ಬಚ್ಚನ್ ''ರಾಜ್ ಕುಮಾರ್ ಅವರು ಹಿಂದಿ ಚಿತ್ರರಂಗಕ್ಕೆ ಬರದೆ ಇದ್ದದ್ದು ಒಳ್ಳೆಯದಾಯಿತು. ಒಂದು ವೇಳೆ ಏನಾದರೂ ಅವರು ಹಿಂದಿಗೆ ಬಂದಿದ್ದರೆ ನಾವ್ಯಾರೂ ಈ ಮಟ್ಟಕ್ಕೆ ಏರಲು ಸಾಧ್ಯವಾಗುತ್ತಲೇ ಇರಲಿಲ್ಲ. ನಮಗೆ ಸಿನಿಮಾಗಳು ಸಿಗುತ್ತಿರಲಿಲ್ಲ." ಎಂಬ ಅದ್ಭುತ ಮಾತನ್ನು ಹೇಳಿದ್ದರು.

  ಬಚ್ಚನ್ ಚಿತ್ರವನ್ನು ಬೇಡ ಎಂದಿದ್ದರು ರಾಜ್

  ಬಚ್ಚನ್ ಚಿತ್ರವನ್ನು ಬೇಡ ಎಂದಿದ್ದರು ರಾಜ್

  ಅಮಿತಾಭ್ ಬಚ್ಚನ್ ಅಭಿನಯದ 'ಕೂಲಿ' ಚಿತ್ರದ ಒಂದು ಪಾತ್ರದಲ್ಲಿ ನಟಿಸಲು ಬಚ್ಚನ್ ಅವರೇ ರಾಜ್​ರನ್ನು ಕೇಳಿಕೊಂಡಿದ್ದರು. ಆದರೆ, ಕನ್ನಡದಲ್ಲಿ ಮಾತ್ರ ನಟಿಸಬೇಕು ಎಂಬ ಆಸೆ ಹೊಂದಿದ್ದ ರಾಜ್ ಈ ಅವಕಾಶವನ್ನು ನಯವಾಗಿ ತಿರಸ್ಕರಿಸಿದ್ದರು. ಕನ್ನಡ ಚಿತ್ರಗಳನ್ನು ಬಿಟ್ಟು ಬೇರೆ ಭಾಷೆಯಲ್ಲಿ ನಟಿಸಲು ಒಲ್ಲೆ ಎಂದು ಹೇಳಿದ್ದರು.

  ಜಾಹಿರಾತಿನಲ್ಲಿ ಶಿವಣ್ಣನ ಜೊತೆ ನಟನೆ

  ಜಾಹಿರಾತಿನಲ್ಲಿ ಶಿವಣ್ಣನ ಜೊತೆ ನಟನೆ

  ರಾಜ್ ಕುಮಾರ್ ರಿಗೆ ಆಪ್ತರಾಗಿದ್ದ ಬಿಗ್ ಬಿ, ಅವರ ಇಡೀ ಕುಟುಂಬದ ಜೊತೆಗೆ ಕೂಡ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದಾರೆ. ನಟ ಶಿವರಾಜ್ ಕುಮಾರ್ ಹಾಗೂ ಅಮಿತಾಭ್ ಬಚ್ಚನ್ ಒಂದು ಜಾಹಿರಾತಿನಲ್ಲಿ ಒಟ್ಟಿಗೆ ನಟಿಸಿದ್ದಾರೆ.

  English summary
  Bollywood actor Abhishek Bachchan spoke about Kannada actor Dr Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X