Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ನಿಮ್ಮನ್ನು ನನ್ನ ಅಣ್ಣನಾಗಿ ಪಡೆದಿರುವುದು ನನ್ನ ಸೌಭಾಗ್ಯ': ದರ್ಶನ್‌ಗೆ ಅಭಿಷೇಕ್ ಹೀಗೆ ಹೇಳಿದ್ದೇಕೆ?
ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರ ಅಣ್ಣ ಯಾರು ಎಂದರೆ ಥಟ್ ಎಲ್ಲರಿಗೂ ನೆನಪಾಗುವುದು ಡಿ ಬಾಸ್ ದರ್ಶನ್. ಅಂಬರೀಶ್ ಅವರನ್ನು ಅಪ್ಪಾಜಿಯಂದು ಕಾಣುತ್ತಿದ್ದ ದರ್ಶನ್, ಅಭಿಷೇಕ್ ಅವರನ್ನು ಸಹೋದರನಂತೆ ಪರಿಗಣಿಸಿರುವುದು ಗೊತ್ತಿರುವ ಸಂಗತಿ.
Recommended Video
ಅಭಿಷೇಕ್ ಸಹ ದರ್ಶನ್ ಅವರ ಮೇಲೆ ಅಷ್ಟೇ ಗೌರವ, ಪ್ರೀತಿ ಇಟ್ಟಿದ್ದಾರೆ. ಇಂಡಸ್ಟ್ರಿಯಲ್ಲಿ ದರ್ಶನ್ ಅವರ ಸಲಹೆ ಇಲ್ಲದೆ ಅಭಿಷೇಕ್ ಯಾವ ಕೆಲಸವೂ ಮಾಡಲ್ಲ ಎಂದು ಆಪ್ತರು ಹೇಳುತ್ತಾರೆ. ಇಂತಹ 'ದರ್ಶನ್ ಅವರನ್ನು ನಾನು ಅಣ್ಣನಾಗಿ ಪಡೆದಿರುವುದು ನನ್ನ ಸೌಭಾಗ್ಯ' ಎಂದು ಅಭಿಷೇಕ್ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ದರ್ಶನ್ ಅವರ ಬಗ್ಗೆ ಅಭಿಷೇಕ್ ಅಂಬರೀಶ್ ಹೀಗೆ ಬರೆದುಕೊಳ್ಳಲು ಕಾರಣವೇನು? ಮುಂದೆ ಓದಿ...

23ನೇ ವರ್ಷದ ಸಂಭ್ರಮದಲ್ಲಿ ಡಿ ಬಾಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿ ಆಗಸ್ಟ್ 11ಕ್ಕೆ ಸರಿಯಾಗಿ 23 ವರ್ಷ ಆಗಲಿದೆ. ಹೀಗಾಗಿ ಡಿ ಬಾಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ '#23YearsOfBossism' ಎಂಬ ಹ್ಯಾಷ್‌ಟ್ಯಾಗ್ ಬಳಸಿ ಸಂಭ್ರಮಿಸುತ್ತಿದ್ದಾರೆ. ಅಭಿಮಾನಿಗಳ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ಗಳ ಸಹ ಕೈಜೋಡಿಸಿದ್ದಾರೆ.
ಚಾಲೆಂಜಿಂಗ್
ಸ್ಟಾರ್
ದರ್ಶನ್
ಅಭಿಮಾನಿಗಳ
ಜತೆ
ಬೌನ್ಸರ್ಗಳ
ಕಿರಿಕ್

ನಿಮ್ಮನ್ನು ನನ್ನ ಅಣ್ಣನಾಗಿ ಪಡೆದಿರುವುದು ನನ್ನ ಸೌಭಾಗ್ಯ
#23YearsOfBossism ಪ್ರಯುಕ್ತ ಅಭಿಷೇಕ್ ಅಂಬರೀಶ್ ಇನ್ಸ್ಟಾಗ್ರಾಂನಲ್ಲಿ ಡಿ ಬಾಸ್ ಕುರಿತು ಬರೆದುಕೊಂಡಿದ್ದಾರೆ. 'ನಿಮ್ಮನ್ನು ನನ್ನ ಅಣ್ಣನಾಗಿ ಪಡೆದಿರುವುದು ನನ್ನ ಸೌಭಾಗ್ಯ. 23 ವರ್ಷಗಳಲ್ಲಿ ನೀವು ಮಾಡಿದ ಅತ್ಯುತ್ತಮ ಕೆಲಸ, ಸಾಧನೆಗೆ ಅಭಿನಂದನೆಗಳು. ನಿಮ್ಮನ್ನು ಅಣ್ಣಾ ಎಂದು ಕರೆಯುವುದು ಗೌರವ ಮತ್ತು ಹೆಮ್ಮೆ ತಂದುಕೊಡುತ್ತೆ. ಇಂದಿನ ಸಂಭ್ರಮ ನಿಮ್ಮ ಎಲ್ಲ ಅಭಿಮಾನಿಗಳಿಗೆ ಖುಷಿ ನೀಡಿದೆ. ನಿಮ್ಮಂತ ಸೀನಿಯರ್ ಇನ್ನೊಬ್ಬರು ಇಲ್ಲ' ಎಂದು ಅಭಿಷೇಕ್ ಹೇಳಿಕೊಂಡಿದ್ದಾರೆ.

23 ವರ್ಷ ಸುಲಭ ಸಾಧನೆಯಲ್ಲ
'ಉದ್ಯಮದಲ್ಲಿ 23 ವರ್ಷ ಪೂರೈಸುವುದು ಸುಲಭ ಸಾಧನೆಯಲ್ಲ. ನಿಮ್ಮ ಸಾಧನೆಗೆ ಅಭಿನಂದನೆಗಳು ಭಾಯಿಜಾನ್ ದರ್ಶನ್'' ಎಂದು ನಟ ನೆನಪಿರಲಿ ಪ್ರೇಮ್ ಟ್ವೀಟ್ ಮಾಡಿದ್ದಾರೆ. ನಿರ್ದೇಶಕರ ತರುಣ್ ಸುಧೀರ್ ನೆನಪಿರಲಿ ಪ್ರೇಮ್ ಅವರ ಟ್ವೀಟ್ ಮಾಡಿದ್ದಾರೆ. ನಿರ್ಮಾಪಕ ಶೈಲಜಾ ನಾಗ್ ಸಹ ಡಿ ಬಾಸ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಶಿವಮೊಗ್ಗಕ್ಕೆ
ಚಾಲೆಂಜಿಂಗ್
ಸ್ಟಾರ್
ದರ್ಶನ್,
ಚಿಕ್ಕಣ್ಣ
ಭೇಟಿ:
ಭದ್ರಾ
ಅಭಯಾರಣ್ಯದಲ್ಲಿ
ಸಂಚಾರ

ದರ್ಶನ್ ಮೊದಲ ಸಿನಿಮಾ 'ಮಹಾಭಾರತ'
ದರ್ಶನ್ ನಾಯಕನಟನಾಗುವುದಕ್ಕೂ ಮುಂಚೆ ಪೋಷಕ ನಟನಾಗಿ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಎಸ್ ನಾರಾಯಣ್ ನಿರ್ದೇಶನ 'ಮಹಾಭಾರತ' ಚಿತ್ರದಲ್ಲಿ ದರ್ಶನ್ ಮೊದಲ ಬಾರಿಗೆ ನಟಿಸಿದ್ದರು. ಈ ಸಿನಿಮಾ 1997 ಆಗಸ್ಟ್ 11 ರಂದು ಬಿಡುಗಡೆಯಾಗಿತ್ತು. ನಾಳೆಗೆ ಈ ಚಿತ್ರ ರಿಲೀಸ್ ಆಗಿ 23 ವರ್ಷ ಆಗಲಿದೆ. 'ಮಹಾಭಾರತ' ಬಳಿಕ 'ದೇವರ ಮಗ', 'ಎಲ್ಲರ ಮನೆ ದೋಸೆನೂ'. 'ಮಿ.ಹರಿಶ್ಚಂದ್ರ', 'ಭೂತಯ್ಯನ ಮಕ್ಕಳು' ಚಿತ್ರಗಳಲ್ಲಿ ಸಣ್ಣಪುಟ್ಟ ಸಿನಿಮಾ ಮಾಡಿದ್ದರು. ಬಳಿಕ, 2002ರಲ್ಲಿ ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕ ನಟನಾಗಿ ಪ್ರವೇಶ ಮಾಡಿದರು.