For Quick Alerts
  ALLOW NOTIFICATIONS  
  For Daily Alerts

  ಪಾರ್ಥಿವ ಶರೀರ ರವಾನೆ ಬಗ್ಗೆ ಅಂಬಿ ನಿಧನದ ದಿನ ಸಿಎಂ ಹೇಳಿದ್ದೇನು?

  |
  ಸುಳ್ಳು ಹೇಳಿ ತಗಲಾಕೊಂಡ್ತಾ ಸಿ ಎಂ..?

  ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಪಾರ್ಥೀವ ಶರೀರದ ರವಾನೆ ವಿಷಯ ರಾಜಕೀಯವಾಗಿ ಭಾರಿ ಎಳೆದಾಡಲಾಗುತ್ತಿತ್ತು. ಪ್ರಚಾರದ ವೇಳೆ 'ರೆಬೆಲ್ ಸ್ಟಾರ್ ಅಂಬರೀಶ್ ಪಾರ್ಥೀವ ಶರೀರವನ್ನು ಮಂಡ್ಯಗೆ ಕರೆತರಲು ಹೇಳಿದ್ದು ನಾನೆ' ಎಂದು ಸಿ ಎಂ ಕುಮಾರಸ್ವಾಮಿ ಹೇಳುವ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು.

  ಏಪ್ರಿಲ್ 16ರಂದು ನಡೆದ ಬಹಿರಂಗ ಸಭೆಯಲ್ಲಿ ಸಿಎಂ ಮಾತಿಗೆ ತಿರುಗೇಟು ನೀಡಿದ್ದ ನಟ ಅಭಿಷೇಕ್ ಅಂಬರೀಶ್ "ಅಪ್ಪನ ಪಾರ್ಥಿವ ಶರೀರವನ್ನು ಮಂಡ್ಯಗೆ ಕರೆದುಕೊಂಡು ಹೋಗಲು ಹೇಳಿದ್ದು ನಾನೆ. ಅಪ್ಪನ ಮೇಲೆ ಆಣೆ ಮಾಡಿ ಹೇಳುತ್ತೇನೆ" ಎಂದು ಬಹಿರಂಗ ಸಭೆಯಲ್ಲಿ ಮಂಡ್ಯ ಜನರ ಮುಂದೆ ಕೂಗಿ ಕೂಗಿ ಹೇಳಿದ್ದರು.

  'ಅಂಬಿ ಪಾರ್ಥಿವ ಶರೀರ ಮಂಡ್ಯಗೆ ತನ್ನಿ' ಎಂದಿದ್ದು ನಾನೇ: ಅಭಿಷೇಕ್

  ಅಂಬರೀಶ್ ನಿಧನದ ದಿನ ನಿಜಕ್ಕು ಏನು ನಡೆದಿತ್ತು ಎನ್ನುವುದರ ಬಗ್ಗೆ ಅಂಬಿ ನಿಧನದ ದಿನ ಸಿ ಎಂ ಕುಮಾರಸ್ವಾಮಿ ಮಾದ್ಯಮದ ಜೊತೆ ಮಾತನಾಡಿದ್ದ ವೀಡಿಯೋ ಈಗ ವೈರಲ್ ಆಗುತ್ತಿದೆ. "ಅಂಬರೀಶ್ ಪಾರ್ಥೀವ ಶರೀರವನ್ನು ಮಂಡ್ಯಗೆ ಕೆರೆದುಕೊಂಡು ಹೋಗಬೇಕು ಎನ್ನುವುದು ಅಭಿಷೇಕ್ ಅವರ ಆಸೆಯಾಗಿದೆ. ಅಂಬರೀಶ್ ಅವರಿಗೆ ಅಪಾರ ಪ್ರೀತಿ ನೀಡಿದ ಮಂಡ್ಯಗೆ ಅಂಬರೀಶ್ ಪಾರ್ಥೀವ ಶರೀರ ತೆಗೆದುಕೊಂಡು ಹೋಗುವುದು ಅಭಿಷೇಕ್ ಒತ್ತಾಯವಾಗಿದೆ. ಆದರೆ ಭದ್ರತೆ ದೃಷ್ಟಿಯಿಂದ ಸಾಧ್ಯವಾಗುತ್ತಿಲ್ಲ. ಮಂಡ್ಯದ ಜನ ಬೆಂಗಳೂರಿಗೆ ಬಂದು ಅಂತಿಮ ದರ್ಶನ ಪಡೆಯಿರಿ" ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದರು.

  ಈ ವೀಡಿಯೋ ಈಗ ಎಲ್ಲಾ ಕಡೆ ಹರಿದಾಡುತ್ತಿದ್ದು, ಸಿಎಂ ಮಾತುಗಳೀಗ ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಕುಮಾರಸ್ವಾಮಿ ನಿಜಕ್ಕು ಸುಳ್ಳು ಹೇಳಿದ್ರಾ ಎನ್ನುವ ಅನುಮಾನ ಮಂಡ್ಯ ಜನರನ್ನು ಕಾಡುತ್ತಿದೆ.

  English summary
  Actor abhishek told kannada actor rebel star ambareesh body was shiftng to mandya. c m kumaraswamy said ambareesh death day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X