»   »  2016 ರಾಜ್ಯ ಪ್ರಶಸ್ತಿ: ಸಂತಸ ಹಂಚಿಕೊಂಡ ನಟ ಅಚ್ಯುತ್ ಕುಮಾರ್, 'ಅಮರಾವತಿ' ನಿರ್ದೇಶಕ

2016 ರಾಜ್ಯ ಪ್ರಶಸ್ತಿ: ಸಂತಸ ಹಂಚಿಕೊಂಡ ನಟ ಅಚ್ಯುತ್ ಕುಮಾರ್, 'ಅಮರಾವತಿ' ನಿರ್ದೇಶಕ

Posted By:
Subscribe to Filmibeat Kannada

2016 ನೇ ಸಾಲಿನ ಪ್ರತಿಷ್ಠಿತ ರಾಜ್ಯ ಚಲನಚಿತ್ರ ಪ್ರಶಸ್ತಿ ಇಂದು(ಏಪ್ರಿಲ್ 11) ಪ್ರಕಟವಾಗಿದೆ. 'ಅಮರಾವತಿ' ಚಿತ್ರಕ್ಕೆ ಪ್ರಥಮ ಅತ್ಯುತ್ತಮ ಚಿತ್ರ ರಾಜ್ಯ ಪ್ರಶಸ್ತಿ ಲಭಿಸಿದೆ. 'ಕಿರಿಕ್ ಪಾರ್ಟಿ' ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ಗಳಿಸಿದೆ. 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರದ ಅಭಿನಯಕ್ಕಾಗಿ ಶ್ರುತಿ ಹರಿಹರನ್ ಅತ್ಯುತ್ತಮ ನಟಿಯಾಗಿ ಹೊರಹೊಮ್ಮಿದ್ದಾರೆ.[2016 ರಾಜ್ಯ ಪ್ರಶಸ್ತಿ: 'ಅಮರಾವತಿ' ಅತ್ಯುತ್ತಮ ಚಿತ್ರ, ಅಚ್ಯುತ್ ಕುಮಾರ್ ಅತ್ಯುತ್ತಮ ನಟ]

'ಅಮರಾವತಿ' ಚಿತ್ರದಲ್ಲಿಯ ಅಭಿನಯಕ್ಕಾಗಿ ಅಚ್ಯುತ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಮತ್ತು ಸಂಭಾಷಣೆಗಾಗಿ ಬಿ.ಎಂ.ಗಿರಿರಾಜು ಪ್ರಶಸ್ತಿಗೆ ಭಾಜನರಾಗಿದ್ದಾರೆ. 2016 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿರುವ ಅಚ್ಯುತ್ ಕುಮಾರ್ ಮತ್ತು ಬಿ.ಎಂ.ಗಿರಿರಾಜು ಸಂತೋಷ ವ್ಯಕ್ತಪಡಿಸಿದ್ದಾರೆ.

Achyutha Kumar and B.M.Giriraju Reaction for Wins 2016 State Film Award

ಅತ್ಯುತ್ತಮ ನಟ - ಅಚ್ಯುತ್ ಕುಮಾರ್ (ಅಮರಾವತಿ)

"ತುಂಬಾ ಸಂತೋಷ ಆಗ್ತಿದೆ. ನನಗೆ 'ಅಮರಾವತಿ' ಚಿತ್ರದ ಅಭಿನಯಕ್ಕೆ ಪ್ರಶಸ್ತಿ ಬರಬೇಕು ಅಂತ ಬಹಳ ದಿನಗಳಿಂದ ಚಿತ್ರದ ಸಂಭಾಷಣೆಕಾರ ಗಿರಿರಾಜು ಅವರು ಹೇಳ್ತಿದ್ರು. ಹಾಗೆಯೇ ಆಗಿದೆ. ಇನ್ನೊಂದು ವಿಶೇಷ ಅಂದ್ರೆ ನಾನು 'ಬ್ಯೂಟಿಫುಲ್ ಮನಸ್ಸುಗಳು', 'ಅಮರಾವತಿ' ಮತ್ತು 'ಕಿರಿಕ್ ಪಾರ್ಟಿ' ಮೂರು ಚಿತ್ರಗಳಲ್ಲಿಯೂ ನಟಿಸಿದ್ದೆ. ಆ ಮೂರು ಚಿತ್ರಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳು ಲಭಿಸಿರುವುದು ಖುಷಿ ತಂದುಕೊಟ್ಟಿದೆ" - ಅಚ್ಯುತ್ ಕುಮಾರ್, ನಟ

Achyutha Kumar and B.M.Giriraju Reaction for Wins 2016 State Film Award

ಅತ್ಯುತ್ತಮ ಸಂಭಾಷಣೆ - ಬಿ.ಎಂ.ಗಿರಿರಾಜು (ಅಮರಾವತಿ)

"ನಾನು ಅಚ್ಯುತ್ ಕುಮಾರ್ ಸರ್ ಗೆ ಬೆಸ್ಟ್ ಆಕ್ಟರ್ ಅವಾರ್ಡ್ ಬರಬೇಕು ಅಂತ ಆಸೆ ಪಟ್ಟಿದೆ. ಅದು ಬಂದಿದೆ. ಆದ್ರೆ ನನಗೆ ಸಂಭಾಷಣೆಗಾಗಿ ಪ್ರಶಸ್ತಿ ಬರುತ್ತೆ ಅಂತ ನಿರೀಕ್ಷೆ ಮಾಡಿರಲಿಲ್ಲ. ಸಂತೋಷ ಆಗ್ತಿದೆ. ಸೋ.. ತೀರ್ಪುಗಾರರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ"- ಬಿ.ಎಂ.ಗಿರಿರಾಜು, ಸಂಭಾಷಣೆಗಾರ

English summary
2016 State Film Awards were announced today (April 11th). Kannada Movie 'Amaravathi' Wins Best Movie Award. 'Amaravathi' movie director B.M.Giriraju wins Best Dialouge Writer and Achyutha Kumar wins best actor award for this movie. Here is their Reaction for wins 2016 State Film Award.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada