For Quick Alerts
  ALLOW NOTIFICATIONS  
  For Daily Alerts

  'ಆಕ್ಟ್ 1978' ಚಿತ್ರಕ್ಕೆ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭ

  |

  ಬಹಳ ದಿನಗಳ ನಂತರ ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ತೆರೆಕಾಣುತ್ತಿದೆ. ಲಾಕ್‌ಡೌನ್ ಘೋಷಣೆಯಾದ ಕ್ಷಣದಿಂದ ಇಲ್ಲಿಯವರೆಗೂ ಯಾವುದೇ ಹೊಸ ಸಿನಿಮಾ ಚಿತ್ರಮಂದಿರದಲ್ಲಿ ತೆರೆಕಂಡಿಲ್ಲ.

  ಕನ್ನಡದಲ್ಲಿ ನವೆಂಬರ್ 20 ರಂದು ಮೊಟ್ಟ ಮೊದಲ ಚಿತ್ರ ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಮಂಸೋರೆ ನಿರ್ದೇಶನದ 'ಆಕ್ಟ್ 1978' ಈ ವಾರ ಬಿಡುಗಡೆಯಾಗುತ್ತಿದೆ.

  ಆಕ್ಟ್ 1978: ಕೇವಲ ಮನರಂಜನೆಯಲ್ಲ, ಕಾನೂನಿನ ತಿಳುವಳಿಕೆಆಕ್ಟ್ 1978: ಕೇವಲ ಮನರಂಜನೆಯಲ್ಲ, ಕಾನೂನಿನ ತಿಳುವಳಿಕೆ

  ಈ ಹಿನ್ನೆಲೆ 'ಆಕ್ಟ್ 1978' ಚಿತ್ರಕ್ಕೆ ಮುಂಗಡ ಟಿಕೆಟ್ ಬುಕ್ಕಿಂಗ್‌ಗೆ ಅವಕಾಶ ನೀಡಲಾಗಿದೆ. ಜೆಪಿ ನಗರದ ಸಿದ್ದೇಶ್ವರ, ಕಮಲ ನಗರದ ವೀರಭದ್ರೇಶ್ವರ, ಕೆಂಗೇರಿಯ ವೆಂಕಟೇಶ್ವರ ಚಿತ್ರಮಂದಿರಗಳಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‌ ತೆರೆದಿದೆ.

  ಇದರ ಜೊತೆಗೆ ರಾಜ್ಯಾದ್ಯಂತ ಸುಮಾರು 70ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಆಕ್ಟ್ 1978 ಸಿನಿಮಾ ಶುಕ್ರವಾರ ಬಿಡುಗಡೆಯಾಗುತ್ತಿದೆ.

  ಹರಿವು, ನಾತಿಚರಾಮಿ ಸಿನಿಮಾಗಳ ಬಳಿಕ ಮಂಸೋರೆ ಮಾಡಿರುವ ಚಿತ್ರ ಇದಾಗಿದ್ದು, ಸಹಜವಾಗಿ ಕುತೂಹಲ ಕೆರಳಿಸಿದೆ. ಮಂಸೋರೆ ಸಿನಿಮಾಗಳು ಅಂದ್ರೆ ಅಲ್ಲೊಂದು ವಿಶೇಷತೆ ಇದೆ. ಸಮಾಜದಲ್ಲಿ ಕ್ರಾಂತಿ ಸೃಷ್ಟಿಸುವಂತಹ ಅಂಶಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಅವರ ಸಿನಿಮಾಗಳಲ್ಲಿರುತ್ತದೆ.

  ವಿರೋಧಿಸುವವರಿಗೆ ಟಾಂಗ್ ಕೊಟ್ಟ Rachita Ram | Filmibeat Kannada

  ನಟಿ ಯಜ್ಞಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಿ. ಸುರೇಶ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ಶ್ರುತಿ, ದತ್ತಣ್ಣ, ಸಂಚಾರಿ ವಿಜಯ್, ಶರಣ್ಯಾ, ಶೋಭರಾಜ್, ಅವಿನಾಶ್, ರಾಘು ಶಿವಮೊಗ್ಗ ಮುಂತಾದವರು ತಾರಬಳಗದಲ್ಲಿದ್ದಾರೆ. ದೇವರಾಜ್ ಆರ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

  English summary
  Advance bookings for Act 1978 has commenced. This is the first new Kannada film releasing in theatres since March.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X