»   » ದುನಿಯಾ ವಿಜಯ್ ಈಗ ಕ್ಲಾಸ್ ಹೀರೋ ಅಂತೆ

ದುನಿಯಾ ವಿಜಯ್ ಈಗ ಕ್ಲಾಸ್ ಹೀರೋ ಅಂತೆ

By: ರವಿಕಿಶೋರ್
Subscribe to Filmibeat Kannada
ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಎಂದರೆ ಮಾಸ್ ಹೀರೋ ಎಂಬ ಮುದ್ರೆ ಇದೆ. ಈಗವರ ಮಾಸ್ ಇಮೇಜ್ ಗೆ ಕ್ಲಾಸ್ ಟಚ್ ನೀಡಲಾಗಿದೆ. ಅವರೀಗ ಮಾಸ್ ಅಲ್ಲ ಕ್ಲಾಸ್ ಹೀರೋ ಎಂದು ಚಿತ್ರ ವಿತರಕ ಪ್ರಸಾದ್ ಅವರು ಡಿಫರೆಂಟ್ ಟಚ್ ಕೊಟ್ಟಿದ್ದಾರೆ.

ವಿಜಿ ಅಭಿನಯದ ರಜಿನಿ ಕಾಂತ ಚಿತ್ರ (ವಿಮರ್ಶೆ ಓದಿ) ಮಾಸ್ ಪ್ರೇಕ್ಷಕರನ್ನು ಸೆಳೆಯದಿದ್ದರೂ ಮಹಿಳೆಯರು ಹಾಗೂ ಫ್ಯಾಮಿಲಿ ಪ್ರೇಕ್ಷಕರನ್ನು ಥಿಯೇಟರ್ ಗೆ ಕರೆತರುವಲ್ಲಿ ಯಶಸ್ವಿಯಾಗಿದೆಯಂತೆ. ಈ ಚಿತ್ರದಲ್ಲಿ ವಿಜಿ ದ್ವಿಪಾತ್ರಾಭಿನಯ ಮಾಡಿದ್ದು ಒಂದು ಕ್ಲಾಸ್ ಹಾಗೂ ಇನ್ನೊಂದು ಮಾಸ್ ಪಾತ್ರವನ್ನು ಪೋಷಿಸಿದ್ದಾರೆ.

ಅವರ ಮಾಸ್ ಪಾತ್ರಕ್ಕಿಂತಲೂ ಕ್ಲಾಸ್ ಪಾತ್ರವೇ ಜನಕ್ಕೆ ಇಷ್ಟವಾಗಿದೆ ಎಂದಿದ್ದಾರೆ ಪ್ರಸಾದ್. ಚಿತ್ರದಲ್ಲಿನ ಅಣ್ಣ ತಮ್ಮನ ಸಂಬಂಧ, ಫ್ಯಾಮಿಲಿ ಸೆಂಟಿಮೆಂಟು, ತಾಯಿ ಮಕ್ಕಳ ನಡುವಿನ ಪ್ರೀತಿ ವಾತ್ಸಲ್ಯ ಮಹಿಳಾ ಪ್ರೇಕ್ಷಕಕರಿಗೆ ಇಷ್ಟವಾಗಿದೆ.

ಆದರೆ ದುನಿಯಾ ವಿಜಯ್ ಅಭಿಮಾನಿಗಳು ಮಾತ್ರ ಅವರನ್ನು ಮಾಸ್ ಇಮೇಜ್ ನಲ್ಲೇ ನೋಡಲು ಇಷ್ಟಪಡುತ್ತಿದ್ದಾರಂತೆ. ಮತ್ತೆ ಅವರು ಪಕ್ಕಾ ಮಾಸ್ ಚಿತ್ರದಲ್ಲಿ ಅಭಿನಯಿಸಲಿ ಎಂದು ಬಯಸಿರುವುದಾಗಿ ಪ್ರಸಾದ್ ತಿಳಿಸಿದ್ದಾರೆ.

ಕೆ.ಮಂಜು ನಿರ್ಮಾಣದ ಈ ಚಿತ್ರದಲ್ಲಿ ಐಂದ್ರಿತಾ ರೇ ನಾಯಕಿ. ಒಟ್ಟಾರೆಯಾಗಿ ಚಿತ್ರದ ಪ್ರಮುಖ ಟಾರ್ಗೆಟ್ ಆಗಿದ್ದ ಫ್ಯಾಮಿಲಿ ಪ್ರೇಕ್ಷಕರನ್ನು ತಲುಪಿದೆ. ಚಿತ್ರವೋ ಚೆನ್ನಾಗಿದೆ. ದುನಿಯಾ ವಿಜಯ್ ಕೂಡ ಒಳ್ಳೆಯ ಅಭಿನಯ. ಆದರೆ ಹಾಕಿದ ಬಂಡವಾಳದಲ್ಲಿ ಎಷ್ಟು ಬಂತು? ಎಂಬುದು ಇನ್ನಷ್ಟೇ ಗೊತ್ತಾಗಬೇಕು. (ಏಜೆನ್ಸೀಸ್)

English summary
The response to the Duniya Vijay's film Rajani Kantha has been good, especially from women and family audiences. But what they all also pointed out was that the film may disappoint hardcore Vijay fans.
Please Wait while comments are loading...