»   » ಕನ್ನಡ ಚಿತ್ರರಂಗದ ಲೇಡಿ ಟೈಗರ್ ಮಾಲಾಶ್ರೀ ಈಗೇನ್ಮಾಡ್ತಿದ್ದಾರೆ

ಕನ್ನಡ ಚಿತ್ರರಂಗದ ಲೇಡಿ ಟೈಗರ್ ಮಾಲಾಶ್ರೀ ಈಗೇನ್ಮಾಡ್ತಿದ್ದಾರೆ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಲೇಡಿ ಟೈಗರ್, ಕನ್ನಡದ ಕಿರಣ್ ಬೇಡಿ, ಅಕ್ಕಾ ಬಾಂಡ್ ಅಂತಾನೇ ಖ್ಯಾತಿ ಗಳಿಸಿರುವ ನಟಿ ಮಾಲಾಶ್ರಿ ಅವರು ಈಗೇಲ್ಲಿದ್ದಾರೆ, ಅನ್ನೋದು ಗಾಂಧಿನಗರದ ಮಂದಿಯ ಪ್ರಶ್ನೆ.

'ಘರ್ಷಣೆ', 'ಮಹಾಕಾಳಿ' ಹಾಗೂ 'ರಾಜಕೀಯ', ಚಿತ್ರದ ನಂತರ ನಟಿ ಮಾಲಾಶ್ರೀ ಅವರು ಎಲ್ಲಿ ಹೋಗಿದ್ದಾರೆ? ಏನು ಮಾಡುತ್ತಿದ್ದಾರೆ ಅನ್ನೋ ವಿಚಾರ ಯಾರಿಗೂ ಗೊತ್ತಿಲ್ಲ.['ಗಂಗಾ' ಪರಾಕ್ರಮ ನೋಡಿ ಮೆಚ್ಚಿದ್ರಾ ವಿಮರ್ಶಕರು?]

ಮೊದ ಮೊದಲು ಹಲವಾರು ಸಿನಿಮಾಗಳನ್ನು ಕೈಯಲ್ಲಿ ಹಿಡಿದು ಓಡಾಡುತ್ತಿದ್ದ ಮಾಲಾಶ್ರೀ ಅವರು ಬರ್ತಾ ಬರ್ತಾ ಸೈಲೆಂಟ್ ಆಗಿದ್ದೇಕೆ?. ಅವರಿಗೆ ಅವಕಾಶ ಸಿಗುತ್ತಿಲ್ಲವೋ ಅಥವಾ ಇವರೇ ಬೇಡ ಅಂತ ಒಪ್ಪಿಕೊಳ್ಳುತ್ತಿಲ್ಲವೋ ಅನ್ನೋದರ ಬಗ್ಗೆಯೂ ಮಾಹಿತಿ ಇಲ್ಲ ಬಿಡಿ.['ಮಹಾಕಾಳಿ' ಮಾಲಾಶ್ರೀ ಘರ್ಜನೆ ಬಗ್ಗೆ ವಿಮರ್ಶಕರು ಏನಂತಾರೆ?]

ಹಾಗಾದ್ರೆ ಒಂದು ಕಾಲದ ಲೇಡಿ ಟೈಗರ್ ಮಾಲಾಶ್ರೀ ಅವರು ಈಗೆಲ್ಲಿದ್ದಾರೆ?, ಏನು ಮಾಡುತ್ತಿದ್ದಾರೆ ಅನ್ನೋದರ ಬಗ್ಗೆ ಮಾಹಿತಿ ಕೊಡ್ತೀವಿ. ನೋಡಲು ಸ್ಲೈಡ್ಸ್ ಕ್ಲಿಕ್ ಮಾಡಿ...

ಕೊನೆಯದಾಗಿ ಮಿಂಚಿದ್ದು 'ಗಂಗಾ' ಚಿತ್ರದಲ್ಲಿ

ನಟಿ ಮಾಲಾಶ್ರೀ ಅವರು ಕೊನೆಯದಾಗಿ ತೆರೆಯ ಮೇಲೆ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದು, 'ಗಂಗಾ' ಚಿತ್ರದಲ್ಲಿ. ಈ ಚಿತ್ರದಲ್ಲಿ ಮಾಲಾಶ್ರೀ ಅವರು ಎರಡು ಶೇಡ್ ನಲ್ಲಿ ಮಿಂಚಿದ್ದರು. ತದನಂತರ ಯಾವುದೇ ಚಿತ್ರಕ್ಕೂ ಮಾಲಾಶ್ರೀ ಬಣ್ಣ ಹಚ್ಚಿಲ್ಲ.[ದಸರಾ ಹಬ್ಬಕ್ಕೆ ಮಾಲಾಶ್ರೀ 'ಗಂಗಾ' ರಿಲೀಸ್]

ಆಟೋ ಡ್ರೈವರ್ ಆಗಿದ್ದ ಮಾಲಾಶ್ರೀ

ಯಾವಾಗಲೂ ಖಾಕಿ ಧರಿಸಿ ಅಪರಾದಿಗಳ ಬೆಂಡೆತ್ತುತ್ತಿದ್ದ ಮಾಲಾಶ್ರೀ ಅವರು 'ಗಂಗಾ' ಸಿನಿಮಾದಲ್ಲಿ ತಮ್ಮ ಹಳೇ ಸ್ಟೈಲ್ ಲಂಗ-ದಾವಣಿಗೆ ಮರಳಿದ್ದರು. ಜೊತೆಗೆ ಆಟೋ ಡ್ರೈವರ್ ಆಗಿ ಫೈಟ್ ಕೂಡ ಮಾಡಿದ್ದರು.[ಆಟೋ ಡ್ರೈವರ್ ಆಗಿ ಮಿಂಚಲಿರುವ ಲೇಡಿ ಟೈಗರ್]

ಮಾಲಾಶ್ರೀ ಈಗೆಲ್ಲಿ?

ಸಿನಿಮಾನೂ ಮಾಡ್ತಿಲ್ಲ, ಬೇರೆ ಪ್ರಾಜೆಕ್ಟ್ ಕೂಡ ಒಪ್ಪಿಕೊಂಡಿಲ್ಲ ಅಂದರೆ ಮಾಲಾಶ್ರೀ ಅವರು ಈಗೆಲ್ಲಿ? ಅನ್ನೋ ಪ್ರಶ್ನೆ ಬರುತ್ತದೆ. ಸದ್ಯದಲ್ಲಿಯೇ ಮಾಲಾಶ್ರೀ ಕಿರುತೆರೆ ಲೋಕಕ್ಕೆ ಕಾಲಿಡಲಿದ್ದಾರೆ.

ಕಿರುತೆರೆಯಲ್ಲಿ ಮಾಲಾಶ್ರೀ

ಸುವರ್ಣ ವಾಹಿನಿಯಲ್ಲಿ ಹೊಸದಾಗಿ ಆರಂಭವಾಗುತ್ತಿರುವ 'ಆಕ್ಷನ್ ಸ್ಟಾರ್' ಎಂಬ ಹೊಸ ರಿಯಾಲಿಟಿ ಶೋ ಒಂದಕ್ಕೆ ಸ್ಪೆಷಲ್ ಗೆಸ್ಟ್ ಆಗಿ ನಟಿ ಮಾಲಾಶ್ರೀ ಅವರು ಆಗಮಿಸುತ್ತಿದ್ದಾರೆ.

ರಘು ಮುಖರ್ಜಿ ನಿರೂಪಣೆ

'ಆಕ್ಷನ್ ಸ್ಟಾರ್' ಎಂಬ ರಿಯಾಲಿಟಿ ಶೋಗೆ ಮಿಸ್ಟರ್ ಇಂಡಿಯಾ ಹಾಗೂ ಮಿಸ್ಟರ್ ಇಂಟರ್ ನ್ಯಾಷನಲ್ ಖ್ಯಾತಿಯ ರಘು ಮುಖರ್ಜಿ ಸಾರಥ್ಯ ವಹಿಸಿಕೊಂಡಿದ್ದಾರೆ. ಹೆಣ್ಮಕ್ಕಳೇ ಸ್ಟ್ರಾಂಗ್ ಎನ್ನುವ ಈ ಸ್ಟಂಟ್ ರಿಯಾಲಿಟಿ ಶೋ ನಲ್ಲಿ ರಘು ಮುಖರ್ಜಿ ನಿರೂಪಣೆ ಮಾಡಲಿದ್ದಾರೆ.[ಕನ್ನಡ ಕಿರುತೆರೆಗೆ ಕಾಲಿಟ್ಟ ಹ್ಯಾಂಡ್ಸಮ್ ಹೀರೋ ರಘು ಮುಖರ್ಜಿ]

ಯಾವಾಗ ಪ್ರಸಾರ

ಜನಪ್ರಿಯ ಚಾನೆಲ್ ಸುವರ್ಣ ವಾಹಿನಿಯಲ್ಲಿ ಯುವ ಸಾಹಸಿಯರ ಸ್ಟಂಟ್ ರಿಯಾಲಿಟಿ ಶೋ 'ಆಕ್ಷನ್ ಸ್ಟಾರ್' ಮಾರ್ಚ್ 19 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

English summary
Action Star inaugural Episod: Actress Malashri as Special Guest. Kannada Entertainment Channel Suvarna has come up with a new stunt reality show called 'Action Star' exclusively for Women. Kannada Actor Raghu Mukherjee is roped into host the show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada