»   » ಮಹಿಳಾಮಣಿಗಳ ವಿರುದ್ಧ ನಿಂತ ಅಚ್ಯುತ್ ಕುಮಾರ್

ಮಹಿಳಾಮಣಿಗಳ ವಿರುದ್ಧ ನಿಂತ ಅಚ್ಯುತ್ ಕುಮಾರ್

Posted By:
Subscribe to Filmibeat Kannada

ಕನ್ನಡ ಚಿತ್ರಗಳಲ್ಲಿ ಭರಪೂರ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ನಟ ಅಚ್ಯುತ್ ಕುಮಾರ್ ಅವರು ಇದೀಗ ಮಹಿಳಾ ಪ್ರಧಾನ ಚಿತ್ರವಾದ 'ಉರ್ವೀ'ಯಲ್ಲಿ ಖಡಕ್ ಖಳನಟನಾಗಿ ಪ್ರೇಕ್ಷಕರಿಗೆ ಮೋಡಿ ಮಾಡಲಿದ್ದಾರೆ.

ಈ ಹಿಂದೆ ಹಲವಾರು ಸಿನಿಮಾಗಳಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದರೂ ಕೂಡ ಪೂರ್ಣ ಪ್ರಮಾಣದ ನಟನಾಗಿ ಮಿಂಚಿರಲಿಲ್ಲ. ಇದೀಗ ನಿರ್ದೇಶಕ ಪ್ರದೀಪ್ ವರ್ಮಾ ಅವರ 'ಉರ್ವೀ' ಚಿತ್ರದಲ್ಲಿ ಪ್ರಮುಖ ಖಳನಟನಾಗಿ ಮಿಂಚಲಿದ್ದಾರೆ.

ನಿರ್ದೇಶಕನಾಗಬೇಕೆಂದು ಕನಸು ಹೊತ್ತು ಬಂದು 'ಗುಲಾಬಿ ಸ್ಟ್ರೀಟ್' ಸಿನಿಮಾ ಮಾಡಿ ವಿವಾದಗಳಿಂದ ಕೈ ಸುಟ್ಟುಕೊಂಡಿದ್ದ ನಿರ್ದೇಶಕ ಪ್ರದೀಪ್ ವರ್ಮಾ ಅವರು ಇದೀಗ ಎರಡನೇ ಬಾರಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.

ಹಲವಾರು ವಿಶೇಷತೆಗಳಿರುವ 'ಉರ್ವೀ' ಚಿತ್ರದಲ್ಲಿ ಒಬ್ಬಿಬ್ಬರಲ್ಲ, ಐವರು ನಾಯಕಿಯರು ಮಿಂಚಿದ್ದಾರೆ. ಯಾವ-ಯಾವ ನಾಯಕಿಯರು ಮಿಂಚಿದ್ದಾರೆ ಹಾಗೂ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ಕಿಸಿ...

'ಉರ್ವೀ' ಎಂದರೇನು?

'ಉರ್ವೀ' ಎಂದರೆ ಕಾಳಿ ಮಾತೆ ಎಂದರ್ಥ (ಕಾಳಿ ದೇವಿಯ ಇನ್ನೊಂದು ಹೆಸರು). ವಿಶೇಷವಾಗಿ ಈ ಚಿತ್ರಕ್ಕಾಗಿ ಅಂತಾನೇ ತಾವರೆಕೆರೆಯ ಬಳಿ ಸುಮಾರು 16 ಲಕ್ಷ ವೆಚ್ಚದಲ್ಲಿ ಭೂತ ಬಂಗಲೆಯಂತಹ ಸೆಟ್ ಹಾಕಲಾಗಿದೆ.

ಹೊಡೆದಾಟ ಇಲ್ಲ, ಆದ್ರೂ ಖಳನಟ

ಈ ಚಿತ್ರದಲ್ಲಿ ನಟ ಅಚ್ಯುತ್ ಕುಮಾರ್ ಅವರು ಯಾವುದೇ ಹೊಡೆದಾಟ-ಬಡಿದಾಟಗಳಲ್ಲಿ ಪಾಲ್ಗೊಳ್ಳುತ್ತಿಲ್ಲ, ಆದರೂ ಖಳನಟ. ಬಹಳ ವಿಭಿನ್ನವಾಗಿ ಕಾಣಿಸಿಕೊಂಡಿರುವ ಅಚ್ಯುತ್ ಕುಮಾರ್ ಅವರು ಚಿತ್ರದ ನಾಯಕಿಯರು ಸೇರಿದಂತೆ ಅನ್ಯರ ಕಷ್ಟಗಳನ್ನು ನೋಡಿ ನಗುವ ಮನಸ್ಥಿತಿಯವರಾಗಿರುತ್ತಾರೆ. ಒಂಥರಾ ಹಾಲಿವುಡ್ ಬ್ಯಾಟ್ ಮನ್ ಚಿತ್ರದಲ್ಲಿ ಬರುವ ಜೋಕರ್ ಪಾತ್ರದ ಶೇಡ್ ನಲ್ಲಿ ಅಚ್ಯುತ್ ಅವರು ಮಿಂಚುತ್ತಿದ್ದಾರೆ.

ನಟಿ ಭವಾನಿ ಪ್ರಕಾಶ್ ಖಳನಟಿ

'ಅರುಂಧತಿ', 'ದೇವಿ' ಮುಂತಾದ ಧಾರಾವಾಹಿಗಳಲ್ಲಿ ಮಿಂಚಿದ್ದ ನಟಿ ಭವಾನಿ ಪ್ರಕಾಶ್ ಅವರು ಕೂಡ 'ಉರ್ವೀ' ಚಿತ್ರದಲ್ಲಿ ಪ್ರಮುಖ ಖಳ ನಾಯಕಿಯಾಗಿ ಅಭಿನಯಿಸಿದ್ದಾರೆ.

ಘಟಾನುಘಟಿ ನಾಯಕಿಯರು

ಚಿತ್ರದಲ್ಲಿ 'ಯು-ಟರ್ನ್' ಯಶಸ್ಸಿನಲ್ಲಿರುವ ನಟಿ ಶ್ರದ್ಧಾ ಶ್ರೀನಾಥ್, ನಟಿ ಶ್ರುತಿ ಹರಿಹರನ್, ನಟಿ ಶ್ವೇತಾ ಪಂಡಿತ್, ನಟಿ ಭವಾನಿ ಪ್ರಕಾಶ್ ಮತ್ತು ನಟಿ ಜಾಹ್ನವಿ ಮುಂತಾದ ಘಟಾನುಘಟಿ ನಟಿಮಣಿಯರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಪುರುಷ ಸಮಾಜದ ವಿರುದ್ಧ 'ಉರ್ವೀ' ಸಮರ

ಒಟ್ನಲ್ಲಿ ಮಹಿಳಾ ಮಣಿಗಳನ್ನು ಹಾಕಿಕೊಂಡು ಮಾಡುತ್ತಿರುವ 'ಉರ್ವೀ' ಚಿತ್ರದಲ್ಲಿ ಪುರುಷ ಪ್ರಧಾನ ಸಮಾಜದ ವಿರುದ್ಧ ದನಿ ಎತ್ತುವ ಅಪರೂಪದ ಕಾರ್ಯ ಮಾಡುತ್ತಿದ್ದಾರೆ ನಿರ್ದೇಶಕ ಪ್ರದೀಪ್ ವರ್ಮಾ ಅವರು.

ಕೊನೆಯ ಹಂತದಲ್ಲಿದೆ 'ಉರ್ವೀ'

ಈಗಾಗಲೇ ಚಿತ್ರೀಕರಣ ಪೂರ್ತಿಯಾಗಿದ್ದು, ಚಿತ್ರಕ್ಕೆ ಎಡಿಟಿಂಗ್ ಟಚ್ ಕೊಡುವಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಇದೇ ವಾರಾಂತ್ಯಕ್ಕೆ ಡಬ್ಬಿಂಗ್ ಕಾರ್ಯಗಳು ಆರಂಭವಾಗಲಿವೆ.

English summary
Kannada Actor Achyuth Kumar to be play villain in Kannada Movie 'Urvi'. Kannada Actress Sruthi Hariharan, Actress Shraddha Srinath, Actress Shweta Pandit in the lead role. The movie is directed by Pradeep Varma.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada