»   » ಗಂಡ ಹೆಂಡತಿ ಪ್ರೀತಿಯಿಂದ ಚುಚ್ಚಿಸಿಕೊಂಡ ಹಚ್ಚೆ

ಗಂಡ ಹೆಂಡತಿ ಪ್ರೀತಿಯಿಂದ ಚುಚ್ಚಿಸಿಕೊಂಡ ಹಚ್ಚೆ

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಸುಖ ದಾಂಪತ್ಯಕ್ಕೆ ಹನ್ನೆರಡು ಸೂತ್ರಗಳಿರುವಂತೆ ಇನ್ನೊಂದು ಸೂತ್ರವನ್ನು ಈ ದಂಪತಿಗಳು ಕಂಡುಕೊಂಡಿದ್ದಾರೆ. ಅದೇನೆಂದರೆ ಒಬ್ಬರ ಹೆಸರನ್ನು ಇನ್ನೊಬ್ಬರ ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿರುವುದು. ಸಾಮಾನ್ಯವಾಗಿ ಮದುವೆಯಾದ ಒಂದು ವರ್ಷಕ್ಕೇ ದಂಪತಿಗಳು ಹಾವು ಮುಂಗಸಿಯಂತಾಗಿರುತ್ತಾರೆ. ಆದರೆ ಇವರಿಬ್ಬರು ಹಾಲು ಜೇನಿನಂತೆ ಅನ್ಯೋನ್ಯವಾಗಿರುದನ್ನು ಜಗತ್ತಿಗೆ ಸಾರಿದ್ದಾರೆ.

ಇಬ್ಬರೂ ನೊಗ ಹೊತ್ತರೇನೆ ಸಂಸಾರದ ಬಂಡಿ ಸರಾಗವಾಗಿ ಸಾಗುವುದು ಅಲ್ಲವೆ? ಇರಲಿ ನಾವಿಲ್ಲಿ ಮಾತನಾಡುತ್ತಿರುವುದು ತೆಲುಗು ನಟ ಅಲ್ಲು ಅರ್ಜುನ್ ಹಾಗೂ ಅವರ ಮನದನ್ನೆ ಸ್ನೇಹಾರೆಡ್ಡಿ ಬಗ್ಗೆ. ಇಬ್ಬರೂ ಒಬ್ಬರ ಹೆಸರನ್ನು ಇನ್ನೊಬ್ಬರ ಕೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.

ಅಲ್ಲೂ ಅರ್ಜುನ್ ತನ್ನ ಕೈ ಮೇಲೆ 'ಸ್ನೇಹಾ' ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ತನ್ನ ಉಂಗುರದ ಬೆರಳ ಮೇಲೆ 'ಅರ್ಜುನ್' ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ ಸ್ನೇಹಾ ರೆಡ್ಡಿ. ಈ ದಂಪತಿಗಳ ಆಲೋಚನೆ ಡಿಫರೆಂಟ್ ಆಗಿದೆ ಎಂಬ ಕಾಮೆಂಟ್ಸ್ ಕೇಳಿಬರುತ್ತಿವೆ.ಅಂದಹಾಗೆ ಇವರಿಬ್ಬರದ್ದೂ ಪ್ರೇಮ ವಿವಾಹ.

Actor Allu Arjun

ಇವರಿಬ್ಬರೂ ಮಾರ್ಚ್ 6, 2011ರಲ್ಲಿ ಮದುವೆಯಾದರು. ಆಂಧ್ರದಲ್ಲಿ ನಡೆದ ರಾಯಲ್ ಮದುವೆಗಳ ಸಾಲಿನಲ್ಲಿ ಇವರ ಮದುವೆಯೂ ನಿಲ್ಲುತ್ತದೆ. ಸಾಮಾನ್ಯವಾಗಿ ಸಿನಿಮಾ ತಾರೆಗಳ ನಡುವೆ ಈಗ ವಿಚ್ಛೇದನ ಮಾತುಗಳೇ ಹೆಚ್ಚಾಗಿ ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ಇವರಿಬ್ಬರೂ ಗಮನಸೆಳೆದಿದ್ದಾರೆ.

English summary
Allu Arjun tattooed Sneha's name on his hand. Sneha Reddy also tattooed Allu Arjun's name on his hand.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada