For Quick Alerts
  ALLOW NOTIFICATIONS  
  For Daily Alerts

  ನಟ ಅಂಬರೀಶ್ ಈಗ ಸಿಂಗಪುರದಲ್ಲಿ ಹೇಗಿದ್ದಾರೆ?

  By ಉದಯರವಿ
  |

  ನಟ, ವಸತಿ ಸಚಿವ ಅಂಬರೀಶ್ ಅವರು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲಾಗಿರುವುದು ಗೊತ್ತೇ ಇದೆ. ಕಳೆದ 15 ದಿನಗಳಿಂದ ಅವರಿಗೆ ವೆಂಟಿಲೇಟರ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.

  ಇದೀಗ ಅಂಬರೀಶ್ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಬಂದಿದ್ದು, ಅವರಿಗೆ ಹಾಕಿದ್ದ ವೆಂಟಿಲೇಟರನ್ನು ವೈದ್ಯರು ತೆಗೆದಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರನ್ನು ಜನರಲ್ ವಾರ್ಡ್ ಗೆ ಸ್ಥಳಾಂತರಿಸಲಾಗುತ್ತದೆ ಎಂದು ಮೌಂಟ್ ಎಲಿಜಬೆತ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. [ನಟ ಅಂಬರೀಶ್ ಆರೋಗ್ಯದ ಬಗ್ಗೆ ಮುಚ್ಚಿಟ್ಟ ಸತ್ಯಗಳು]

  ಚಿಕಿತ್ಸೆಗೆ ಅಂಬಿ ಸ್ಪಂದಿಸುತ್ತಿದ್ದಾರೆ. ಸಂಜ್ಞೆ ಮೂಲಕ ಅವರು ಪ್ರತಿಕ್ರಿಯಿಸುತ್ತಿದ್ದಾರೆ. ಅವರ ಉಸಿರಾಟ ಸಹಜ ಸ್ಥಿತಿಗೆ ಮರಳಿದೆ. ಶ್ವಾಸಕೋಶದ ಸೋಂಕು ಗಣನೀಯವಾಗಿ ಕಡಿಮೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

  ಇದೇ ಸಂದರ್ಭದಲ್ಲಿ ಅಂಬಿ ಅವರ ಪತ್ನಿ ಸುಮಲತಾ ಅವರು ಮಾತನಾಡುತ್ತಾ, ಅಭಿಮಾನಿಗಳು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ. ಅವರು ಆದಷ್ಟು ಬೇಗ ನಿಮ್ಮಲ್ಲರ ಮುಂದೆ ಮತ್ತೆ ಬರುತ್ತಾರೆ ಎಂದಿದ್ದಾರೆ.

  ವೆಂಟಿಲೇಟರ್ ತೆಗೆದರೆ ಏನಾಗುತ್ತದೋ ಏನೋ, ಅಂಬಿ ಉಸಿರಾಡಲು ಸಾಧ್ಯವಾಗುತ್ತದೋ ಇಲ್ಲವೋ ಎಂಬ ಅನುಮಾನಗಳು ಅಭಿಮಾನಿಗಳನ್ನು ಕಾಡುತ್ತಿದ್ದವು. ಈಗ ಅಂಬಿಗೆ ಹಾಕಿದ್ದ ವೆಂಟಿಲೇಟರ್ ತೆಗೆಯುವ ಮೂಲಕ ಅವರ ಎಲ್ಲಾ ಅನುಮಾನಗಳಿಗೆ ತೆರೆಬಿದ್ದಿದೆ.

  English summary
  How is the conditon of Rebel Star Ambareesh at Mount Elizabeth Hospital in Singapore? Doctors says that, he is stable and doing well, ventilator also removed. Sumalatha Ambareesh, the actor's wife, had requested media and his supporters not to listen to any sort of rumours about his health condition. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X