»   » ಅಂಬಿ ಚೇತರಿಕೆಗೆ ಕಾಂಗ್ರೆಸ್ ಶುಭಾಶಯಗಳು

ಅಂಬಿ ಚೇತರಿಕೆಗೆ ಕಾಂಗ್ರೆಸ್ ಶುಭಾಶಯಗಳು

Posted By:
Subscribe to Filmibeat Kannada

ನಟ ಅಂಬರೀಶ್ ಅವರ ಆರೋಗ್ಯ ಸ್ಥಿರವಾಗಿದೆ. ಅವರ ಬಗ್ಗೆ ಯಾವುದೇ ಆತಂಕ ಬೇಡ. ಉಸಿರಾಟದ ತೊಂದರೆ ನಿಯಂತ್ರಣದಲ್ಲಿದೆ. ಈಗಾಗಲೆ ಎಕ್ಸ್ ರೇ ಹಾಗೂ ಸಿಟಿ ಸ್ಕ್ಯಾನಿಂಗ್ ಮಾಡಲಾಗಿದೆ. ಅವರನ್ನು ಇನ್ನೂ ಎರಡು ದಿನ ವೆಂಟಿಲೇಟರ್ ನಲ್ಲೇ ಇರಬೇಕು ಎಂದು ವಿಕ್ರಂ ಆಸ್ಪತ್ರೆ ವೈದ್ಯ ಡಾ.ಸತೀಶ್ ಸೋಮವಾರ (ಫೆ.24) ಚುಟುಕು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ಅಂಬರೀಶ್ ಅವರ ಶ್ವಾಸಕೋಶದ ಸೋಂಕು ಶೇ.50ರಷ್ಟು ನಿಯಂತ್ರಣಕ್ಕೆ ಬಂದಿದೆ. ಶ್ವಾಸಕೋಶದ ನೋವು ಗೊತ್ತಾಗದಂತೆ ನೋವು ನಿವಾರಕ ಔಷಧಿಗಳನ್ನು ಕೊಡಬೇಕಾಗಿದೆ ಎಂದು ವೈದ್ಯರು ತಿಳಿಸಿದರು. ಈ ಸಂದರ್ಭದಲ್ಲಿ ವೈದ್ಯಕೀಯ ಸಚಿವ ಯುಟಿ ಖಾದರ್ ಖಾನ್ ಅವರು ಉಪಸ್ಥಿತರಿದ್ದರು.

Ambarish Sumalatha

ಏತನ್ಮಧ್ಯೆ ಅಂಬರೀಶ್ ಅವರ ಅಭಿಮಾನಿಗಳ ಆತಂಕ ಮಾತ್ರ ಕಡಿಮೆಯಾಗಿಲ್ಲ. ವೈದ್ಯರು, ಗಣ್ಯರು ಮಾತ್ರ ಅವರ ಆರೋಗ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಅಂಬರೀಶ್ ಮನೆಯವರು ಯಾರೂ ಮಾತನಾಡುತ್ತಿಲ್ಲವಲ್ಲಾ ಎಂಬುದೇ ಅವರ ಆತಂಕಕ್ಕೆ ಕಾರಣವಾಗಿರುವ ಅಂಶ.

ಈಗಾಗಲೆ ಅಂಬರೀಶ್ ಅವರು ಆಸ್ಪತ್ರೆಗೆ ದಾಖಲಾಗಿ ಎರಡು ದಿನಗಳ ಮೇಲಾಗಿದೆ. ಈಗ ಇನ್ನೂ ಎರಡು ದಿನಗಳ ವೆಂಟಿಲೇಟರ್ ನಲ್ಲೇ ಇರಬೇಕು. ಅಲ್ಲಿಂದ ಅವರು ವಾರ್ಡ್ ಗೆ ಶಿಫ್ಟ್ ಆಗಿ ಮಾತನಾಡಲು ಏನಿಲ್ಲಾ ಎಂದರೂ ನಾಲ್ಕೈದು ದಿನಗಳ ಮೇಲಾಗುತ್ತದೆ. ಅಲ್ಲಿಯವರೆಗೂ ಅಭಿಮಾನಿಗಳಿಗೆ ಉತ್ತರ ಕೊಡುವವರು ಯಾರು? (ಒನ್ಇಂಡಿಯಾ ಕನ್ನಡ)

Wishing a speedy recovery to our beloved leader Sri Ambareesh. @divyaspandana @krishnabgowda @PriyankKharge pic.twitter.com/j5oJLoxqSu
— Karnataka Congress (@Congress_Kar) February 24, 2014

English summary
Karnataka housing minister and actor Rebel Star Ambareesh health bulletin. The actor is stable and recover soon, he is in ventilator supply for two more days and lung infection has reduced 50 percent said the Vikram hospital doctors.
Please Wait while comments are loading...