For Quick Alerts
  ALLOW NOTIFICATIONS  
  For Daily Alerts

  ನಟ ಅಂಬರೀಶ್ ವಿಕ್ರಂ ಆಸ್ಪತ್ರೆಗೆ ದಾಖಲು

  By Bharath Kumar
  |

  ನಟ ಹಾಗೂ ಶಾಸಕ ಅಂಬರೀಶ್ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಂತ ಗಾಬರಿ ಪಡುವಂಥದ್ದು ಏನು ಇಲ್ಲ. ಆರೋಗ್ಯ ತಪಾಸಣೆಗಾಗಿ ಅವರು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ.

  ಅಂಬರೀಶ್ ಅವರು ತಿಂಗಳಿಗೊಮ್ಮೆ ವಿಕ್ರಂ ಆಸ್ಪತ್ರೆಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಸುವುದು ಅವಶ್ಯಕ. ಅದರಂತೆ ಆರೋಗ್ಯ ತಪಾಸಣೆಗಾಗಿ ಇಂದು ವಿಕ್ರಂ ಆಸ್ಪತ್ರೆಗೆ ಅಂಬರೀಶ್ ತೆರಳಿದ್ದಾರೆ.

  ಈ ಸಂದರ್ಭದಲ್ಲಿ ಸ್ವಲ್ಪ ಬಳಲಿದಂತೆ ಕಂಡ ಕಾರಣಕ್ಕಾಗಿ ಸಂಜೆ ತನಕ ಇಲ್ಲೇ ವಿಶ್ರಾಂತಿ ತೆಗೆದುಕೊಳ್ಳಿ ಎಂದು ವೈದ್ಯರು ಸೂಚಿಸಿದ್ದಾರಂತೆ. ಹೀಗಾಗಿ ಸಂಜೆ ಹೊತ್ತಿಗೆ ಅಂಬಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬಹುದು ಅಥವಾ ಇಂದು ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆದುಕೊಂಡು ನಾಳೆ ಡಿಸ್ಚಾರ್ಜ್ ಆಗಬಹುದು ಎಂದು ವೈದ್ಯ ಮೂಲಗಳು ತಿಳಿಸಿವೆ.

  English summary
  For General Health Check-up Rebel Star Ambareesh got admitted to Vikram Hospital, Bengaluru. After Scanning and other tests, Ambareesh might get discharge Tomorrow (July 21)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X