For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ ವೆಬ್ ಸೀರಿಸ್ ನಲ್ಲಿ ಆನಂದ್ ತುಮಕೂರು

  |

  ನಟ ಶಿವರಾಜ್ ಕುಮಾರ್ ಅವರ ಶ್ರೀಮುತ್ತು ಬ್ಯಾನರ್ ನಲ್ಲಿ ವೆಬ್ ಸೀರಿಸ್ ನಿರ್ಮಾಣ ಆಗುತ್ತಿದೆ. 'ಹನಿಮೂನ್' ಶಿವರಾಜ್ ಕುಮಾರ್ ನಿರ್ಮಾಣದ ಎರಡನೇ ವೆಬ್ ಸೀರಿಸ್ ಆಗಿದೆ.

  ಈ ವೆಬ್ ಸೀರಿಸ್ ನಲ್ಲಿ ಮೂರು ಮುಖ್ಯ ಪಾತ್ರಗಳು ಇರಲಿದೆ. ಗಂಡ, ಹೆಂಡತಿ ಹಾಗೂ ಸೋದರ ಮಾವ ಈ ಮೂರು ಪಾತ್ರಗಳು ಕಥೆಯಲ್ಲಿ ಹೆಚ್ಚು ಪ್ರಾಮುಖ್ಯತೆ ಹೊಂದಿದೆ. ಸೋದರ ಮಾವ ಪಾತ್ರದಲ್ಲಿ ನಟ ಆನಂದ್ ತುಮಕೂರು ನಟಿಸಿದ್ದಾರೆ.

  'ಒಂದಲ್ಲ ಎರಡಲ್ಲ' ಸಿನಿಮಾದ ಮೂಲಕ ದೊಡ್ಡ ಜನಪ್ರಿಯತೆ ಪಡೆದ ಈ ನಟ ಈಗ ಸಿಕ್ಕಾಪಟ್ಟೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ವೆಬ್ ಸೀರಿಸ್ ನಲ್ಲಿಯೂ ನಟಿಸಿದ್ದಾರೆ.

  ಬೆಂಗಳೂರಿನಲ್ಲಿ ವೆಬ್ ಸೀರಿಸ್ ಚಿತ್ರೀಕರಣ ಆಗಿದ್ದು, ಆನಂದ್ ತುಮಕೂರು ಪಾತ್ರದ ಶೂಟಿಂಗ್ ಮುಗಿದಿದೆ. ಇಡೀ ವೆಬ್ ಸೀರಿಸ್ ಸಿಕ್ಕಾಪಟ್ಟೆ ಕಾಮಿಡಿಯಾಗಿ ಇರಲಿದೆಯಂತೆ. ಮೊದಲು ಈ ಪಾತ್ರವನ್ನು ನೀನಾಸಂ ಅನಿಲ್ ಅವರು ಮಾಡಬೇಕಿತ್ತು. ಆದರೆ, ನಂತರ ಆನಂದ್ ತುಮಕೂರು ಅವರಿಗೆ ಅವಕಾಶ ಸಿಕ್ಕಿದೆ.

  ಸದ್ಯ, ಆನಂದ್ ತುಮಕೂರು ನಟನೆಯ 'ಸೂಜಿದಾರ', 'ರವಿ ಹಿಸ್ಟರಿ', 'ಚಂಬಲ್' ಸಿನಿಮಾಗಳು ಬಿಡುಗಡೆಯಾಗಿವೆ. ಮತ್ತೊಂದು ಕಡೆ 'ಸಾರ್ವಜನಿಕರಿಗೆ ಸುವರ್ಣವಕಾಶ', 'ರಂಗಮಂದಿರ', 'ಆನೆಬಲ', 'ಹಾಲಕ್ಕಿ' ಹೀಗೆ ಸಾಕಷ್ಟು ಅವಕಾಶಗಳು ಅವರ ಕೈನಲ್ಲಿ ಇವೆ. 'ಪಕೀರ' ಎಂಬ ಕಿರು ಚಿತ್ರದಲ್ಲಿ ಸಹ ಅಭಿನಯಿಸಿದ್ದಾರೆ.

  English summary
  Actor Anand Thumakuru played important role in 'Honeymoon' web series. Kannada actor Shiva Rajkumar production 2nd web series titled as Honeymoon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X