»   » ಕಿಚ್ಚ ಸುದೀಪ್ ಜೊತೆ ಅನಂತ್ ನಾಗ್, 'ಮಾರಿಬಿಡಿ' ಅಂದ್ರು!!

ಕಿಚ್ಚ ಸುದೀಪ್ ಜೊತೆ ಅನಂತ್ ನಾಗ್, 'ಮಾರಿಬಿಡಿ' ಅಂದ್ರು!!

Posted By:
Subscribe to Filmibeat Kannada

ಕನ್ನಡದ ಎವರ್ ಗ್ರೀನ್ ನಟ ಅನಂತ್ ನಾಗ್ ಅವರು ಕಿಚ್ಚ ಸುದೀಪ್ ಅವರ ಜೊತೆ ನಟಿಸುತ್ತಿದ್ದಾರಂತೆ!. ವಾವ್ ಎಂತಹ ಸುದ್ದಿ ಅಂತ ಫುಲ್ ಖುಷ್ ಆದ್ರ!. ಹೌದು ಸ್ವಾಮಿ ಇವರಿಬ್ಬರು ಒಟ್ಟಿಗೆ ನಟಿಸೋದು ನಿಜ ಆದರೆ ಸಿನಿಮಾದಲ್ಲಿ ಅಲ್ಲ ಬದ್ಲಾಗಿ ಜಾಹೀರಾತಿನಲ್ಲಿ ಒಂದಾಗಿದ್ದಾರೆ.

ನಿರ್ದೇಶಕ ಗಡ್ಡಾ ವಿಜಿ ಅವರ 'ಪ್ಲಸ್' ಚಿತ್ರದಲ್ಲಿ ಡಿಫರೆಂಟ್ ರೋಲ್ ಮಾಡಿದ ಮೇಲೆ ಈಗೇನ್ಮಾಡ್ತೀದ್ದಾರೆ, ಅನ್ನೋ ಪ್ರೇಕ್ಷಕರ ಪ್ರಶ್ನೆಗೆ ಅನಂತ್ ನಾಗ್ ಜಾಹೀರಾತು ಮೂಲಕ ವೀಕ್ಷಕರ ಎದುರು ಬಂದು ಉತ್ತರ ನೀಡಿದ್ದಾರೆ.

ಟಿವಿಯಲ್ಲಿ ಬರುತ್ತಿದ್ದ 'OLX' ನಲ್ಲಿ ಮಾರಿಬಿಡಿ ಅಂತ ಸುದೀಪ್ ಡೈಲಾಗ್ ಹೇಳ್ತಾ ಇದ್ದಾಗ ನಿಮಗೆಲ್ಲರಿಗೂ ನಗು ಬರುತ್ತಿತ್ತು ಅಲ್ವಾ, ಇದೀಗ ನಿಮ್ಮೆಲ್ಲರನ್ನು ನಗಿಸಲು ಸುದೀಪ್ ಜೊತೆ ಮತ್ತೊಬ್ಬರು ಸೇರಿಕೊಂಡಿದ್ದಾರೆ. ಅವರೇ ನಮ್ಮ ಅನಂತ್ ನಾಗ್.

Actor Anant Nag Joins Actor Sudeep in Advertisement

ಹೌದು ನಟ ಅನಂತ್ ನಾಗ್ ಅವರು ಇದೀಗ ಹೊಸದಾಗಿ ಬಂದಿರುವ 'OLX' ಜಾಹೀರಾತಿನ ನ್ಯೂ ಅಂಬಾಸಿಡರ್. ಯಾವಾಗಲೂ ಕಿಚ್ಚ ಸುದೀಪ್ ಅವರು ನಿಮ್ಮ ಮಸ್ತುಗಳನ್ನು 'OLX' ನಲ್ಲಿ ಮಾರಿಬಿಡಿ ಅಂತ ಹೇಳುತ್ತಿದ್ದರು. ತದನಂತರ 'ರನ್ನ' ಚಿತ್ರ ಬಿಡುಗಡೆಯಾದ ನಂತರ ಕಾಮಿಡಿ ನಟ ಸಾಧುಕೋಕಿಲ ಅವರು ಸುದೀಪ್ ಅವರೊಂದಿಗೆ ಜಾಯೀನ್ ಆದರು.

ಇದೀಗ ಹಿರಿಯ ನಟ ಅನಂತ್ ನಾಗ್ ಸರದಿ. ಕಿಚ್ಚ ಸುದೀಪ್ ಹಾಗೂ ನಟ ಅನಂತ್ ನಾಗ್ ಅವರು ಒಟ್ಟಾಗಿ 'OLX' ಜಾಹೀರಾತಿನಲ್ಲಿ ಮಿಂಚಿದ್ದು, ನೂತನ ಜಾಹೀರಾತಿನ ಚಿತ್ರೀಕರಣ ಸೋಮವಾರ (ನವೆಂಬರ್ 2) ನಡೆದಿದೆ.

ಅಂದಹಾಗೆ ಅನಂತ್ ನಾಗ್ ಅವರಿಗೆ ಜಾಹೀರಾತು ಪ್ರಪಂಚ ಹೊಸದೇನಲ್ಲ. ಈ ಮೊದಲು ಖ್ಯಾತ ಹಿಂದಿ ಕಂಪೆನಿಯೊಂದರ ಇನ್ಯುಶೂರೆನ್ಸ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಕಿಚ್ಚ ಸುದೀಪ್ ಜೊತೆಗೂಡಿ 'OLX' ನಲ್ಲಿ ಮಾರಿಬಿಡಿ ಅಂತ ಹೇಳೋಕೆ ಹೊರಟಿದ್ದಾರೆ.

English summary
Veteran actor Anant Nag is part of the new OLX advertisement. Sudeep has been the regular in the OLX advertisement for sometime now. Nag and Sudeep shot for the new advertisement on Monday (November 2).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada