For Quick Alerts
  ALLOW NOTIFICATIONS  
  For Daily Alerts

  ಹೆಸರಾಂತ ನಟ ನಿರ್ದೇಶಕ ಕಾಶಿನಾಥ್ ಆಸ್ಪತ್ರೆಗೆ ದಾಖಲು

  By Pavithra
  |
  ಕಾಶೀನಾಥ್, ಕನ್ನಡದ ಹಿರಿಯ ನಟ ನಿರ್ದೇಶಕ ವಿಧಿವಶ | Filmibeat Kannada

  ಕನ್ನಡದ ಹೆಸರಾಂತ ನಟ ಹಾಗೂ ನಿರ್ದೇಶಕ ಕಾಶಿನಾಥ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕಳೆದ ವರ್ಷ ನಟ ಕಾಶಿನಾಥ್ 'ಚೌಕ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಇದಾದ ನಂತರ 'ಓಳ್ ಮುನಿಸ್ವಾಮಿ' ಚಿತ್ರದಲ್ಲಿ ಕಾಶಿನಾಥ್ ಆಕ್ಟ್ ಮಾಡಿದ್ದರು .

  ಕಣ್ಮರೆಯಾದ ಕಲಾಯೋಗಿ ಕಾಶಿನಾಥ್ ಅಪರೂಪದ ಚಿತ್ರಸಂಪುಟ

  'ಚೌಕ' ಸಿನಿಮಾದ ಬಿಡುಗಡೆ ಸಮಯದಲ್ಲೇ ಅನಾರೋಗ್ಯದಿಂದ ಬಳಲುತ್ತಿದ್ದ ಕಾಶಿನಾಥ್ ಚಾಮಾರಾಜಪೇಟೆಯ ಶಂಕರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸಿನಿಮಾ ನಿರ್ದೇಶನ ಮಾಡುವುದರ ಜೊತೆಗೆ ನಟನೆಯನ್ನೂ ಮಾಡುತ್ತಾ ಕನ್ನಡ ಪ್ರೇಕ್ಷಕರ ಗಮನ ಸೆಳೆದಿದ್ದರು ನಟ ಕಾಶಿನಾಥ್.

  ಹೊಸ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಅವಕಾಶ ನೀಡುತ್ತಾ ಉಪೇಂದ್ರ, ವಿ ಮನೋಹರ್, ಸುನೀಲ್ ಕುಮಾರ್ ದೇಸಾಯಿ ಹೀಗೆ ಇನ್ನೂ ಅನೇಕರನ್ನ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಕಾಶಿನಾಥ್ ಅವರಿಗೆ ಸಲ್ಲುತ್ತದೆ. ಸಾಕಷ್ಟು ದಿನಗಳಿಂದ ಕಾಶಿನಾಥ್ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಸದ್ಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  English summary
  Kannada famous actor and director kashinath has been admitted to hospital .

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X