twitter
    For Quick Alerts
    ALLOW NOTIFICATIONS  
    For Daily Alerts

    ಮುರುಘಾಮಠ ಅತ್ಯಾಚಾರ ಪ್ರಕರಣ ಸಂತ್ರಸ್ಥ ಬಾಲಕಿಯರಿಗೆ ಚೇತನ್ ಅಹಿಂಸ ನೆರವು!

    By ಮೈಸೂರು ಪ್ರತಿನಿಧಿ
    |

    ಮುರುಘಾಮಠ ಅತ್ಯಾಚಾರ ಪ್ರಕರಣ ರಾಜ್ಯ ಮಾತ್ರವೇ ಅಲ್ಲದೆ ದೇಶದಾದ್ಯಂತ ಸುದ್ದಿ ಮಾಡಿತ್ತು. ಅಪ್ರಾಪ್ತ ಬಾಲಕಿಯರ ಮೇಲೆ ಸ್ವಾಮೀಜಿಗಳಿಂದ ಲೈಂಗಿಕ ದೌರ್ಜನ್ಯ ಆಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಆ ಸಂತ್ರಸ್ಥ ಬಾಲಕಿಯರಿಗೆ ನಟ ಚೇತನ್ ಅಹಿಂಸ ಮಾಡಿದ್ದ ನೆರವು ಇದೀಗ ಅವರಿಂದಲೇ ಬಹಿರಂಗವಾಗಿದೆ.

    ಇಂದು (ಜನವರಿ 20) ಮೈಸೂರು ನಗರದ ಹೊರ ವಲಯದಲ್ಲಿರುವ ಒಡನಾಡಿ ಸೇವಾ ಸಂಸ್ಥೆಗೆ ನಟ ಚೇತನ್ ಭೇಟಿ ನೀಡಿ, ಅಲ್ಲಿನ ವಾಸಿಗಳೊಟ್ಟಿಗೆ, ಸಿಬ್ಬಂದಿಯೊಡನೆ, ಮಕ್ಕಳೊಡನೆ ಕಾಲ ಕಳೆದರು.

    ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚೇತನ್ ಅಹಿಂಸ, ''ಕೇಸರಿ ತ್ಯಾಗದ ಸಂಕೇತ. ಅದು ಹಿಂದುತ್ವದ ಬಣ್ಣ ಆಗಲಾರದು ಎಂದು ಹೇಳಿದರು. ಹಸಿರು ಬಣ್ಣ ಕೂಡ ಒಂದು ವರ್ಗದ, ಒಂದು ಧರ್ಮದ ಬಣ್ಣ ಅಲ್ಲ. ಅದು ರೈತರ ಮತ್ತು ಪರಿಸರದ ಸಂಕೇತ. ಸಣ್ಣ ಸಣ್ಣದಕ್ಕೂ ತಪ್ಪು ಹುಡುಕುವುದು ಇವರ ಫ್ರೇಮ್ ವರ್ಕ್ ಆಗಿದೆ. ಇದನ್ನು ರಾಜಕೀಯಕ್ಕೆ ಬಳಸುತ್ತಿರುವುದು ಅವರ ವಿಚಾರದ ಕೊರತೆ ತೋರಿಸುತ್ತದೆ ಎಂದು ಹೇಳಿದರು.

    Actor And Social Worker Chetan Ahimsa Visit Mysore Odanadi Organization

    'ಪಠಾಣ್' ಸಿನಿಮಾದಲ್ಲಿ ಕೇಸರಿ ಬಿಕಿನಿ ವಿವಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ''ಕೇಸರಿಯನ್ನು ಬುದ್ಧ, ಬಸವಣ್ಣ ಸೇರಿ ಬಹಳ ಜನ ಬಳಸಿದ್ದಾರೆ. ದೇಶದ ತ್ರಿವರ್ಣ ಧ್ವಜದಲ್ಲಿಯೂ ಕೇಸರಿ ಇದೆ. ಆದರೆ ಅದನ್ನು ಯಾರೂ ಹೈಜಾಕ್ ಮಾಡಬಾರದು,'' ಎಂದು ಹೇಳಿದರು.

    ಹೆಚ್ಚು ಮಕ್ಕಳ ಮೇಲಿನ ದೌರ್ಜನ್ಯ ಗೊತ್ತಿಲ್ಲ

    ಒಡನಾಡಿ ಸೇವಾ ಸಂಸ್ಥೆಗೆ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ಭೇಟಿ ನೀಡಿದ್ದರು. ಮುರುಘಾಮಠದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆಗಿರುವ ಬಗ್ಗೆ ನನಗೆ ಗೊತ್ತಿಲ್ಲ. ಮುರುಘಾ ಮಠದಲ್ಲಿ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಅವರನ್ನು ಒಡನಾಡಿ ಸಂಸ್ಥೆಗೆ ಕಳುಹಿಸಿದ್ದು ನಾನೇ. ಸಂತ್ರಸ್ತ ಮಕ್ಕಳ ಮನಸ್ಥಿತಿ ಸುಧಾರಿಸಿದೆಯಂತೆ. ಸದ್ಯ ನಾನು ಮಕ್ಕಳನ್ನು ಮಾತನಾಡಿಸಲಿಲ್ಲ. ಅವರು ಶಾಲೆಗೆ ಹೋಗಿದ್ದಾರೆ ಎಂದು ಹೇಳಿದರು.

    ಚೇತನ್ ಅಹಿಂಸಾ ತಮ್ಮ ಉಗ್ರ ಎಡಪಂಥೀಯ ನಿಲುವಿನಿಂದ ಜನಪ್ರಿಯರು. ಆದಿವಾಸಿಗಳು, ಶೋಷಿತರು, ಸಂತ್ರಸ್ಥರ ಪರವಾಗಿ ಚೇತನ್ ಮೊದಲಿನಿಂದಲೂ ಮಾತನಾಡುತ್ತಲೇ ಬಂದಿದ್ದಾರೆ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷವನ್ನು ಟೀಕಿಸುತ್ತಲೇ ಬಂದಿದ್ದಾರೆ ಚೇತನ್. ಅವರ ಹೇಳಿಕೆಗಳು ಪ್ರಶಂಸೆಗೆ ಒಳಗಾಗುವ ಜೊತೆ-ಜೊತೆಗೆ ಟ್ರೋಲ್‌ಗೂ ಆಹಾರವಾಗುತ್ತವೆ.

    English summary
    Actor and social worker Chetan Ahimsa visits Mysore Odanadi Organization which helps girl children and other victims.
    Friday, January 20, 2023, 22:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X