»   » ದುನಿಯಾ ವಿಜಿ 'ಮಾಸ್ತಿ ಗುಡಿ' ವಿಲನ್ ಬಗ್ಗೆ ನಿಮಗೆಷ್ಟು ಗೊತ್ತು?

ದುನಿಯಾ ವಿಜಿ 'ಮಾಸ್ತಿ ಗುಡಿ' ವಿಲನ್ ಬಗ್ಗೆ ನಿಮಗೆಷ್ಟು ಗೊತ್ತು?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಸೂಪರ್ ಸ್ಟಾರ್ ದುನಿಯಾ ವಿಜಯ್ ಮತ್ತು ನಿರ್ದೇಶಕ ನಾಗಶೇಖರ್ ಅವರ ಜುಗಲ್ ಬಂದಿಯಲ್ಲಿ ಮೂಡಿಬರುತ್ತಿರುವ 'ಮಾಸ್ತಿ ಗುಡಿ' ಸಿನಿಮಾ ಸೆಟ್ಟೇರಿ, ಚಿತ್ರದ ಶೂಟಿಂಗ್ ಕೂಡ ಭರ ಭರನೇ ಸಾಗುತ್ತಿದೆ.

ಇದೀಗ ಚಿತ್ರಕ್ಕೆ ಹೊಸ ಸದಸ್ಯರೊಬ್ಬರು ಎಂಟ್ರಿಯಾಗಿದ್ದಾರೆ. ಹೌದು ದುನಿಯಾ ವಿಜಿ ಅವರ ಕನಸಿನ ಚಿತ್ರ 'ಮಾಸ್ತಿ ಗುಡಿ'ಗೆ ವಿಲನ್ ರೋಲ್ ಮಾಡೋದು ಯಾರು ಅನ್ನೋ ಎಲ್ಲರ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ.[ಬರ್ತ್ ಡೇ ಬಾಯ್ ವಿಜಿಗೆ 'ಮಾಸ್ತಿ ಗುಡಿ' ಟೀಸರ್ ಗಿಫ್ಟ್]


ಅಂದಹಾಗೆ ವಿಜಿ ಅವರ ವಿಭಿನ್ನ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಮಿಂಚಲು ಬರುತ್ತಿರುವವರು ಬೇರಾರು ಅಲ್ಲ, ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಅವರ ಪರಮಾಪ್ತ ನಟ ಕಮ್ ನಿರ್ಮಾಪಕ ಅನಿಲ್ ಕುಮಾರ್ ಅವರು.


ಈಗಾಗಲೇ ಚಿತ್ರರಂಗದಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸಲು ಸಿದ್ಧರಾಗಿರುವ ನಟ ಅನಿಲ್ ಕುಮಾರ್ ಅವರು ವಿಜಿ ಅವರ 'ಮಾಸ್ತಿ ಗುಡಿ' ಚಿತ್ರದಲ್ಲಿ ಖಳನಟನ ಪಾತ್ರದಲ್ಲಿ ಮಿಂಚಲು ಈಗಿನಿಂದಲೇ ತಯಾರಿ ನಡೆಸಿದ್ದು, ಅನಿಲ್ ಅವರ ಫೊಟೋ ಶೂಟ್ ಕೂಡ ನಡೆಸಲಾಗಿದೆ.[ಚಿತ್ರಗಳು: ವಿಜಿ 'ಮಾಸ್ತಿ ಗುಡಿ'ಗೆ ಅಮ್ಮಂದಿರಿಂದ ಮುಹೂರ್ತ]


ಅಷ್ಟಕ್ಕೂ ಈ ಅನಿಲ್ ಕುಮಾರ್ ಯಾರು?, ಅವರ ಕಟ್ಟುಮಸ್ತಾದ ದೇಹಕ್ಕೆ ತರಬೇತಿ ನೀಡಿದವರಾರು? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೆಳಗಿನ ಸ್ಲೈಡುಗಳಲ್ಲಿ....


ಬೀಡಾ ಅಂಗಡಿಯಲ್ಲಿ ಕೆಲಸ

ಸಿನಿಮಾ ಇಂಡಸ್ಟ್ರಿಯಲ್ಲಿ ಖಳನಾಯಕ ಅಂತ ಸದ್ಯಕ್ಕೆ ಗುರುತಿಸಿಕೊಂಡಿರುವ ನಟ ಅನಿಲ್ ಕುಮಾರ್ ಅವರು ಮೊದಲು ಬೀಡಾ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದವರು. ತದನಂತರ 800 ರೂಪಾಯಿಗೆ ಟರ್ನರ್ ಕೆಲಸ ಕೂಡ ಮಾಡಿದರು. ಕೊನೆಗೆ ಗಾಡಿಗಳನ್ನು ಸೀಜ್ ಮಾಡುವ ಕೆಲಸಕ್ಕೆ ಕೈ ಹಾಕಿದಾಗ ಬದುಕಿನ ದಿಕ್ಕೇ ಬದಲಾಯಿತು. ಅಲ್ಲಿವರೆಗೂ ಸ್ಟಾರ್ ಗಳನ್ನು ಪರದೆ ಮೇಲೆ ನೋಡುತ್ತಿದ್ದ ಅನಿಲ್ ಗೆ ಅದೇ ಸ್ಟಾರ್ ಗಳು ಬರುಬರುತ್ತಾ ಹತ್ತಿರವಾದರು.[75ರ ಮುದುಕನ ಪಾತ್ರದಲ್ಲಿ ದುನಿಯಾ ವಿಜಿ ಮಿಂಚಿಂಗು]


ಸಿನಿಮಾ ಬದುಕಿಗೆ ಎಂಟ್ರಿ ಆಕಸ್ಮಿಕ

ಕಟ್ಟುಮಸ್ತಾದ ದೇಹವನ್ನು ಹೊಂದಿರುವ ಅನಿಲ್ ಕುಮಾರ್ ಅವರು ಸಿನಿಮಾ ಜಗತ್ತಿಗೆ ಕಾಲಿಡುತ್ತೇನೆ ಎಂದು ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲವಂತೆ. ಆಕಸ್ಮಿಕವಾಗಿ ಎಂಟ್ರಿ ಕೊಟ್ಟು ಇದೀಗ ಬರೋಬ್ಬರಿ 25 ಸಿನಿಮಾಗಳನ್ನು ಮುಗಿಸಿರುವ ಅನಿಲ್ ಇದೀಗ ಹೊಸ ಚಿತ್ರಕ್ಕೆ ತಮ್ಮ ದೇಹವನ್ನು ಮತ್ತಷ್ಟು ಫಿಟ್ಟಾಗಿಸಿ ತಯಾರಿ ನಡೆಸುತ್ತಿದ್ದಾರೆ. ನಟ ಅನಿಲ್ ಕುಮಾರ್ ಹುಟ್ಟಿದ್ದು, ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. 'ದುನಿಯಾ' ಚಿತ್ರದಿಂದ ಆರಂಭವಾದ ಇವರ ಸಿನಿಪಯಣ ಇದೀಗ 25 ಚಿತ್ರಗಳು ಕಂಪ್ಲೀಟ್ ಆಗುವ ಮೂಲಕ ನಿಂತ ನೀರಾಗದೆ, ಭೋರ್ಗರೆಯುವ ನದಿಯಾಗಿದೆ.['ಮಾಸ್ತಿ ಗುಡಿ'ಯಲ್ಲಿ ದುನಿಯಾ ವಿಜಯ್ ಜೊತೆ ಅಮೂಲ್ಯ ಬೇಬಿ?]


10 ತಿಂಗಳಿಂದ ತಯಾರಿ

'ಮಾಸ್ತಿ ಗುಡಿ' ಸಿನಿಮಾ ದುನಿಯಾ ವಿಜಿ ಅವರ ಸಿನಿ ಜರ್ನಿಯಲ್ಲಿ ಒಂದು ವಿಭಿನ್ನ ಸಿನಿಮಾವಾಲಿದೆ ಅನ್ನೋದು, ವಿಜಿ ಅವರ 4 ವಿಭಿನ್ನ ಗೆಟಪ್ ಹಾಗೂ ಟೀಸರ್ ನಿಂದ ಈಗಾಗಲೇ ಬಹಿರಂಗಗೊಂಡಿದೆ. ಇದು ಅನಿಲ್ ಅವರ ಜೀವನದಲ್ಲೂ ಟರ್ನಿಂಗ್ ಪಾಯಿಂಟ್ ಆಗಲಿದೆ. ಇದಕ್ಕಾಗಿ ಅನಿಲ್ ಅವರು ಕೂಡ 'ಮಾಸ್ತಿ ಗುಡಿ'ಗೆ ಖಳನಾಯಕನಾಗಲು ಸುಮಾರು 10 ತಿಂಗಳುಗಳಿಂದ ಭರ್ಜರಿ ತಯಾರಿ ಕೂಡ ಮಾಡಿಕೊಂಡಿದ್ದರು.


ಪಾನಿ ಪೂರಿ ಕಿಟ್ಟಿ ಟ್ರೈನ್ ಮಾಡಿದ್ದು

ಅನಿಲ್ ಅವರ ದೇಹ ಇಷ್ಟರಮಟ್ಟಿಗೆ ಫಿಟ್ ಆಗಲು ಕಾರಣ ಜಿಮ್ ಟ್ರೈನರ್ ಪಾನಿಪೂರಿ ಕಿಟ್ಟಿ. ಪಾನಿಪೂರಿ ಕಿಟ್ಟಿ ಅವರು ದುನಿಯಾ ವಿಜಯ್ ಅವರಿಗೂ ಜಿಮ್ ಟ್ರೈನರ್ ಆಗಿದ್ದರು. ಕಟ್ಟುಮಸ್ತಾದ ದೇಹ ಬರಲು ದಿನಾ 7 ಘಂಟೆ ವ್ಯಾಯಾಮ ಮಾಡುತ್ತಿದ್ದೆ. ಪ್ರೊಟೀನ್ ಹಾಗೂ ತರಕಾರಿ ಹೆಚ್ಚಾಗಿ ತಿನ್ನುತ್ತಿದ್ದೆ. ದಿನಕ್ಕೆ 6 ಬಾರಿ ಊಟ ಮಾಡಬೇಕಿತ್ತು. ನನ್ನ ದೇಹ ಇಷ್ಟು ಕಟ್ಟುಮಸ್ತಾಗಿ ರೂಪಿಸಿದ್ದು ಪಾನಿಪೂರಿ ಕಿಟ್ಟಿ. ದುನಿಯಾ ವಿಜಯ್ ರಂತೆ ನನಗೂ ಫಿಟ್ನೆಸ್ ಪಾಠ ಹೇಳಿಕೊಟ್ಟರು ಎಂದು ಅನಿಲ್ ಕುಮಾರ್ ನುಡಿಯುತ್ತಾರೆ.[ಫೇಸ್ ಬುಕ್ ನಲ್ಲಿ ಚರ್ಚೆ ಆಗುತ್ತಿರುವ 'ಪಾನಿ ಪೂರಿ' ಕಿಟ್ಟಿ ಯಾರು?]


'ಮಾಸ್ತಿ ಗುಡಿ'ಗೆ ಅನಿಲ್ ಅವರ ಫಸ್ಟ್ ಲುಕ್

ಶ್ರೀಮುರಳಿ ಅವರ 'ಉಗ್ರಂ' ಮತ್ತು 'ರಥಾವರ' ಚಿತ್ರಕ್ಕೆ ಕ್ಯಾಮರಾ ಕೈಚಳಕ ತೋರಿದ್ದ ಛಾಯಾಗ್ರಾಹಕ ಭುವನ್ ಗೌಡ ಅವರು ಅನಿಲ್ ಕುಮಾರ್ ಅವರ ಫೊಟೋ ಶೂಟ್ ಮಾಡಿದ್ದು, ಈ ಫೊಟೋಗಳು 'ಮಾಸ್ತಿ ಗುಡಿ' ಚಿತ್ರದ ಫಸ್ಟ್ ಲುಕ್ ಆಗಿದೆ. ಅನಿಲ್ ಕುಮಾರ್ ಅವರ ದೇಹದಂಡನೆಯ ಪ್ರತಿಯೊಂದು ಅಂಶಗಳು ಭುವನ್ ಅವರ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.


ಅನಿಲ್ ಸಿನಿಮಾಗೆ ಬರಲು ಕಾರಣ ದುನಿಯಾ ವಿಜಿ

ಅನಿಲ್ ಕುಮಾರ್ ಅವರು ಸಿನಿಮಾ ಕ್ಷೇತ್ರಕ್ಕೆ ಬರಲು ಮುಖ್ಯ ಕಾರಣ ದುನಿಯಾ ವಿಜಯ್ ಅವರು. ಒಮ್ಮೆ ಗಾಡಿಗಳನ್ನು ಸೀಜ್ ಮಾಡಲು ಹೋಗಿದ್ದಾಗ ಅಲ್ಲಿ ಸಿನಿಮಾದ ಫೈಟರ್ ಗಳನ್ನು ನೋಡಿ ಅವರನ್ನು ಪರಿಚಯ ಮಾಡಿಕೊಂಡರು. ತದನಂತರ ಕೃಷ್ಣರಾವ್ ಪಾರ್ಕ್ ನಲ್ಲಿ ಫೈಟಿಂಗ್ ತರಬೇತಿ ಕೂಡ ಸಿಕ್ಕಿತು. ಅಲ್ಲಿಗೆ ಬಂದಿದ್ದ ದುನಿಯಾ ವಿಜಯ್ ಅನಿಲ್ ಅವರನ್ನು ಪರಿಚಯ ಮಾಡಿಕೊಂಡರು.


ವಿಜಯ್ ಅವರ ಎಲ್ಲಾ ಸಿನಿಮಾಗಳಲ್ಲಿ ಅನಿಲ್ ಖದರ್

ವಿಜಯ್ ಅವರ ಪರಿಚಯ ಆಗುವಷ್ಟರಲ್ಲಿ ಕುಂಗ್ ಪು ಹಾಗೂ ಬಾಕ್ಸಿಂಗ್ ಕಲಿತಿದ್ದ ಅನಿಲ್ ಕುಮಾರ್ ವಿಜಿ ಅವರಿಗೆ ಇನ್ನಷ್ಟು ಹತ್ತಿರವಾದರು. ಅಷ್ಟೊತ್ತಿಗಾಗಲೇ ವಿಜಿ ಅವರ 'ದುನಿಯಾ' ಸಿನಿಮಾ ಸೆಟ್ಟೇರಿತ್ತು. ಅದರಲ್ಲಿ ಅನಿಲ್ ಗೆ ತಮ್ಮ ಖದರ್ ತೋರುವ ಅವಕಾಶ ಸಿಕ್ಕಿತು. ಮುಂದೆ ವಿಜಿ ಅವರ ಎಲ್ಲಾ ಸಿನಿಮಾಗಳಲ್ಲಿ ಅನಿಲ್ ಖಳನಟನಾಗಿ ಕಾಣಿಸಿಕೊಂಡರು.


ವಿಜಿ 'ಜಾಕ್ಸನ್' ಗೆ ನಿರ್ಮಾಪಕ

ಇವರು ಬರೀ ಖಳನಟ ಮಾತ್ರವಲ್ಲದೆ ಒಬ್ಬ ಚಿತ್ರ ನಿರ್ಮಾಪಕ ಕೂಡ ಹೌದು. ದುನಿಯಾ ವಿಜಿ ಅವರ 'ಜಾಕ್ಸನ್' ಚಿತ್ರದ ನಿರ್ಮಾಪಕರಲ್ಲಿ ಇವರು ಕೂಡ ಒಬ್ಬರು. ಇದೀಗ ತಾವೇ ಖಳನಾಯಕನಾಗಿ ಮಿಂಚುತ್ತಿರುವ 'ಮಾಸ್ತಿ ಗುಡಿ' ಚಿತ್ರಕ್ಕೂ ಅನಿಲ್ ಕುಮಾರ್ ಅವರು ಬಂಡವಾಳ ಹೂಡುತ್ತಿದ್ದಾರೆ.


ಹೆಸರು ತಂದು ಕೊಟ್ಟ ಸಿನಿಮಾ

ವಿಜಿ ಅವರ 'ಜಂಗ್ಲಿ', 'ವೀರಬಾಹು', ಯಶ್ ಅವರ 'ಮಾಸ್ಟರ್ ಪೀಸ್', 'ರಾಮಾಚಾರಿ' ಚಿತ್ರಗಳು ಸಾಕಷ್ಟು ಹೆಸರು ತಂದುಕೊಟ್ಟವು. ಇದೀಗ 'ಮಾಸ್ತಿ ಗುಡಿ' ಸೇರಿದಂತೆ ಪುನೀತ್ ಅವರ 'ರಾಜಕುಮಾರ', ಧ್ರುವ ಸರ್ಜಾ ಅವರ 'ಭರ್ಜರಿ', ಸುದೀಪ್ ಅವರ 'ಹೆಬ್ಬುಲಿ' ಮುಂತಾದ ಹೊಸ ಚಿತ್ರಗಳು ಅನಿಲ್ ಅವರ ಕೈಯಲ್ಲಿವೆ. ಸದ್ಯಕ್ಕೆ ರೇಸ್ ನಲ್ಲಿರುವ ಖ್ಯಾತ ಖಳನಟ ರವಿಶಂಕರ್, 'ಭಜರಂಗಿ' ಲೋಕೇಶ್, ಉದಯ್ ಮುಂತಾದವರ ಸಾಲಿಗೆ ಇದೀಗ ಅನಿಲ್ ಅವರು ಹೊಸ ಸೇರ್ಪಡೆಯಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ.


English summary
Duniya Vijay's upcoming movie 'Maasti Gudi' is getting interesting with each passing day. Directed by Sanju Weds Geetha & Mynaa director Nagashekar. Actor Anil Kumar will be playing villain opposite Duniya Vijay in Maasti Gudi'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada