twitter
    For Quick Alerts
    ALLOW NOTIFICATIONS  
    For Daily Alerts

    ಪ್ರಧಾನಿ ನರೇಂದ್ರ ಮೋದಿಗೆ ಬೆಂಗಳೂರು ಬಗ್ಗೆ ನಟ ಅನಿರುದ್ಧ ಪತ್ರ!

    |

    ನಟ ಅನಿರುದ್ಧ್ ಸದ್ಯ ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಮನೆಮಾತಾಗಿದ್ದಾರೆ. ಆದರೆ ಸಿನಿಮಾ ಸೀರಿಯಲ್ ಬಿಟ್ಟು ಆಗಾಗ ಸಾಮಾಜಿಕ ಕಳಕಳಿಯ ವಿಚಾರಗಳಲ್ಲೂ ನಟ ಸುದ್ದಿ ಆಗುತ್ತಾ ಇರುತ್ತಾರೆ. ಸ್ವಚ್ಛತೆಯಲ್ಲಿ ನಾನು ಭಾಗಿ ಎನ್ನುವ ಅಭಿಯಾನದ ಮೂಲಕ ಅನಿರುದ್ಧ ಗಮನ ಸೆಳೆದಿದ್ದರು.

    ಈಗ ನಟ ಅನಿರುದ್ಧ್ ಬೆಂಗಳೂರಿನ ವಿಚಾರದಲ್ಲಿ ಸುದ್ದಿ ಆಗಿದ್ದಾರೆ. ಬೆಂಗಳೂರಿನ ವಿಚಾರವಾಗಿ ಅನಿರುದ್ಧ ಪ್ರಧಾನಿ ನರೇಂದ್ರ ಮೊದಿ ಅವರಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ತಮ್ಮ ಮನವಿ ಸಲ್ಲಿಸಿದ್ದಾರೆ.

    ಅಜ್ಜಿ ಕಾಲಿಗೆ ಬಿದ್ದರೇನು? ಕರಗಲಿಲ್ಲ ಗತ್ತು: ಸಂಸದೆ ಸುಮಲತಾ ವಿಡಿಯೋ ಟ್ರೋಲ್!ಅಜ್ಜಿ ಕಾಲಿಗೆ ಬಿದ್ದರೇನು? ಕರಗಲಿಲ್ಲ ಗತ್ತು: ಸಂಸದೆ ಸುಮಲತಾ ವಿಡಿಯೋ ಟ್ರೋಲ್!

    'ಬ್ರ್ಯಾಂಡ್ ಬೆಂಗಳೂರು' ಉಳಿಸುವ ಬಗ್ಗೆ ಪತ್ರದಲ್ಲಿ ನಮೂದಿಸಿದ್ದಾರೆ. ಪತ್ರ ಬರೆದಿರುವ ಬಗ್ಗೆ ಅನಿರುದ್ಧ ತಮ್ಮ ಸಾಮಾಜಿಕ ಜಾಲತಣದಲ್ಲಿ ಹಂಚಿಕೊಂಡಿದ್ದಾರೆ.

    'ಬ್ರ್ಯಾಂಡ್ ಬೆಂಗಳೂರು' ಹೆಸರು ಉಳಿಸಿ!

    'ಬ್ರ್ಯಾಂಡ್ ಬೆಂಗಳೂರಿನ' ಹೆಸರನ್ನು ಉಳಿಸಿ ಎಂದು ಸ್ಯಾಂಡಲ್‍ವುಡ್ ನಟ ಅನಿರುದ್ಧ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಐಟಿ ಹಬ್, ಗ್ರೀನ್ ಸಿಟಿ ಹೀಗೆ ಇಡೀ ವಿಶ್ವದಲ್ಲಿಯೇ ಗಮನ ಸೆಳೆದ ಬೆಂಗಳೂರು ಇತ್ತೀಚೆಗೆ ಅವ್ಯವಸ್ಥೆಗಳ ಕೂಪವಾಗುತ್ತಿದೆ. ಬೆಂಗಳೂರಿನ ಸಮಸ್ಯೆಯನ್ನು ಆಲಿಸಲು ಪ್ರತ್ಯೇಕವಾಗಿರುವ ಇಲಾಖೆಯನ್ನು ರಚಿಸಬೇಕು ಎಂದು ಪತ್ರದಲ್ಲಿ ನಮೂದಿಸಿದ್ದಾರೆ.

    ಪ್ರಶಾಂತ್ ನೀಲ್‌ಗೆ ತೆಲುಗಿನಲ್ಲಿ ಭಾರಿ ಬೇಡಿಕೆ: ಮತ್ತೊಬ್ಬ ಹೀರೋ ಫಿಕ್ಸ್!ಪ್ರಶಾಂತ್ ನೀಲ್‌ಗೆ ತೆಲುಗಿನಲ್ಲಿ ಭಾರಿ ಬೇಡಿಕೆ: ಮತ್ತೊಬ್ಬ ಹೀರೋ ಫಿಕ್ಸ್!

    ರಾಜ್ಯ ಸರ್ಕಾರಕ್ಕೆ ಕೇಂದ್ರ ಕಿವಿ ಹಿಂಡಬೇಕು!

    ರಾಜ್ಯ ಸರ್ಕಾರಕ್ಕೆ ಕೇಂದ್ರ ಕಿವಿ ಹಿಂಡಬೇಕು!

    ಕೇಂದ್ರ ಸರ್ಕಾರ ರಾಜ್ಯಕ್ಕೆ ಕಿವಿ ಹಿಂಡುವ ಕೆಲಸ ಮಾಡಬೇಕು. ಇಲ್ಲಿನ ಜನಪ್ರತಿನಿಧಿಗಳು ಇಚ್ಛಾ ಶಕ್ತಿ ಪ್ರದರ್ಶಿಸಿದರೆ ಸ್ವಚ್ಛ ನಗರಿ ಬೆಂಗಳೂರು ಆಗಬಹುದು ಅಂತ ಪ್ರಧಾನಿಗೆ ಪತ್ರದ ಮೂಲಕ ಅನಿರುದ್ಧ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕ್ರಮ ಕೈಗೊಳ್ಳಲು ಸ್ಥಳಿಯ ಸರ್ಕಾರ ವಿಫಲವಾಗಿದೆ ಎಂದು ಬರೆದಿದ್ದಾರೆ.

    ಪ್ರಧಾನಿಗೆ ಸಮಸ್ಯೆಗಳ ಪಟ್ಟಿ!

    ಪ್ರಧಾನಿಗೆ ಸಮಸ್ಯೆಗಳ ಪಟ್ಟಿ!

    ಇನ್ನು ಅನಿರುದ್ಧ ಅವರು ತಮ್ಮ ಪತ್ರದಲ್ಲಿ ಬೆಂಗಳೂರಿನಲ್ಲಿ ಆಗುತ್ತಿರುವ ಪ್ರಮುಖ ಸಮಸ್ಯೆಗಳ ಪಟ್ಟಿಯನ್ನು ಮಾಡಿ ಕಳುಹಿಸಿದ್ದಾರೆ. ಅವರು ಶುರು ಮಾಡಿದ್ದ 'ಸ್ವಚ್ಛತೆಯಲ್ಲಿ ನಾನು ಸಹಭಾಗಿ' ಅಭಿಯಾನದಡಿ ಜನರು ಅನಿರುದ್ಧ ಅವರಿಗೆ ಹೇಳಿಕೊಂಡ ಸಮಸ್ಯೆಗಳನ್ನು ಪ್ರಧಾನಿ ಮುಂದೆ ಇಟ್ಟಿದ್ದಾರೆ ಅನಿರುದ್ಧ. ಘನ ತ್ಯಾಜ್ಯ ನಿರ್ವಹಣೆ ವಿಫಲ್, ಹೂಳು ತುಂಬಿದ ಕೆರೆಗಳು, ಮರಗಳಲ್ಲಿ ವಿದ್ಯುತ್ ತಂತಿಗಳು, ಎಲ್ಲೆಂದರಲ್ಲಿ ಪೇಪರ್ ಅಂಟಿಸುವುದು, ಹಾಳಾದ ಫುಟ್ ಪಾತ್. ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಪತ್ರದಲ್ಲಿ ಬರೆದಿದ್ದಾರೆ.

    ಬ್ರ್ಯಾಂಡ್ ಬೆಂಗಳೂರು ಬಗ್ಗೆ ಎಸ್.ಎಂ ಕೃಷ್ಣ ಮಾತು!

    ಬ್ರ್ಯಾಂಡ್ ಬೆಂಗಳೂರು ಬಗ್ಗೆ ಎಸ್.ಎಂ ಕೃಷ್ಣ ಮಾತು!

    ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಿರಂತರ ಮುಂಗಾರು ಪೂರ್ವ ಮಳೆಯಾಗುತ್ತಿದ್ದು ಇದರಿಂದ ಹಲವು ಅವಾಂತರಗಳು ಘಟಿಸಿ ಜನಜೀವನಕ್ಕೆ ತೀವ್ರ ತೊಂದರೆಯನ್ನು ಉಂಟುಮಾಡಿದೆ. ಅದರಲ್ಲೂ ವಿಶ್ವದಲ್ಲಿನ ವೇಗದ ಬೆಳವಣಿಗೆಗಳ ನಗರಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ನಗರದಲ್ಲಿನ ಮಳೆ ಅನಾಹುತಗಳು ಆತಂಕ ಹುಟ್ಟಿಸಿದೆ. ಇದು 'ಬ್ರ್ಯಾಂಡ್ ಬೆಂಗಳೂರು' ಹೆಸರಿಗೆ ಆತಂಕ ಸೃಷ್ಟಿಸಿದ್ದು, ಭವಿಷ್ಯತ್ತಿನಲ್ಲಿ ಇದರಿಂದ ಕೈಗಾರಿಕೆಗಳ ಸ್ಥಾಪನೆ ಮತ್ತು ರಾಜ್ಯಕ್ಕೆ ಬಂಡವಾಳ ಹೂಡುವ ಹೂಡಿಕೆದಾರರಿಗೆ ತಪ್ಪು ಸಂದೇಶ ರವಾನೆಯಾಗಲಿದೆ. ಅದರಿಂದ ಇಲ್ಲಿ ಪ್ರತಿಷ್ಟಾಪನೆಗೊಳ್ಳಬಹುದಾದ ಕೈಗಾರಿಕಾ ವಸಹಾತುಗಳು ಬೇರೆ ರಾಜ್ಯಗಳ ಪಾಲಗಿ ನಮ್ಮ ರಾಜ್ಯದ ಅಭಿವೃದ್ಧಿಗೆ ತೊಡಕಾಗಲಿದೆ ಎಂದು ಎಸ್.ಎಂ. ಕೃಷ್ಣ ಅವರು ಪತ್ರದಲ್ಲಿ ಕಳವಳವನ್ನು ವ್ಯಕ್ತಪಡಿಸಿದ್ದರು.

    English summary
    Actor Anirudh Has Written Letter To Prime Minister Narendra Modi On Save Banalore,
    Tuesday, May 24, 2022, 11:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X