»   » ಕನ್ನಡದ ಯಾವ 'ಸ್ಟಾರ್'ಗೂ 'ಲಕ್ಷ್ಮಣ' ಅನೂಪ್ ಕಮ್ಮಿ ಇಲ್ಲ ಬಿಡಿ.!

ಕನ್ನಡದ ಯಾವ 'ಸ್ಟಾರ್'ಗೂ 'ಲಕ್ಷ್ಮಣ' ಅನೂಪ್ ಕಮ್ಮಿ ಇಲ್ಲ ಬಿಡಿ.!

Posted By:
Subscribe to Filmibeat Kannada

ನಟ ಅನೂಪ್ ರೇವಣ್ಣ ಅವರು ಚೊಚ್ಚಲ ಸಿನಿಮಾ 'ಲಕ್ಷ್ಮಣ' ಮೂಲಕ ಬೆಳ್ಳಿತೆರೆಯ ಮೇಲೆ ಗ್ರ್ಯಾಂಡ್ ಎಂಟ್ರಿ ಕೊಡಲು ದಿನಗಣನೆ ಶುರುವಾಗಿದೆ. ಮುಂದಿನ ವಾರ (ಜೂನ್ 24 ರಂದು) ಬಹು ನಿರೀಕ್ಷಿತ 'ಲಕ್ಷ್ಮಣ' ಚಿತ್ರ ತೆರೆ ಕಾಣುವುದು ಕನ್ಫರ್ಮ್ ಆಗಿದೆ.

'ಲಕ್ಷ್ಮಣ'....ಅನೂಪ್ ರೇವಣ್ಣ ಅಭಿನಯದ ಮೊದಲ ಸಿನಿಮಾ ಇರಬಹುದು. ಆದ್ರೆ, ಸ್ಟಾರ್ ಸಿನಿಮಾಗಳಿಗೆ ಇರಬಹುದಾದ ಹಲವಾರು ವಿಶೇಷತೆಗಳನ್ನ 'ಲಕ್ಷ್ಮಣ' ಚಿತ್ರ ಒಳಗೊಂಡಿದೆ.


ಬಣ್ಣ ಹಚ್ಚುವ ಮುನ್ನ ಡ್ಯಾನ್ಸ್, ಸ್ಟಂಟ್ಸ್ ಹಾಗೂ ಡೈಲಾಗ್ ಡೆಲಿವರಿಯಲ್ಲಿ ಸಕಲ ತಯಾರಿ ಮಾಡಿಕೊಂಡಿದ್ದ ನಟ ಅನೂಪ್, ಲಕ್ಷ್ಮಣ' ಚಿತ್ರದ ಮೂಲಕ ಆರ್.ಚಂದ್ರು ಮಾರ್ಗದರ್ಶನದಲ್ಲಿ ಅಕ್ಷರಶಃ 'ಆಕ್ಷನ್ ಹೀರೋ' ಆಗಿದ್ದಾರೆ.[ಚಂದ್ರು-ಅನೂಪ್ 'ಲಕ್ಷ್ಮಣ' ಹವಾ ಹೆಂಗಿದೆ ಗುರು? ಅಂದ್ರೆ ನೀವೂ ದಂಗಾಗ್ತೀರಾ.!]


ಈಗಾಗಲೇ ಟ್ರೈಲರ್ ನಲ್ಲಿ ನೀವೆಲ್ಲರೂ ನೋಡಿರುವಂತೆ ನಟ ಅನೂಪ್ ಮಾಡಿರುವ ಸಾಹಸ ದೃಶ್ಯಗಳು ಮೈನವಿರೇಳಿಸುತ್ತದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಲವ್ಲಿ ಸ್ಟಾರ್ ಪ್ರೇಮ್, ರಿಯಲ್ ಸ್ಟಾರ್ ಉಪೇಂದ್ರ ರಂತಹ ಸ್ಟಾರ್ ಹೀರೋಗಳ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಆರ್.ಚಂದ್ರು, ಅನೂಪ್ ರೇವಣ್ಣಗೆ 'ಮಾಸ್ ಹೀರೋ' ಇಮೇಜ್ ನೀಡುವುದರ ಜೊತೆ ಸ್ಯಾಂಡಲ್ ವುಡ್ ನಲ್ಲಿ ನೆಲೆಯೂರಲು ಗಟ್ಟಿ ತಳಪಾಯ ಹಾಕಿಕೊಟ್ಟಿದ್ದಾರೆ. ಮುಂದೆ ಓದಿ....


ಅನೂಪ್ ರೇವಣ್ಣ ಸದ್ಯ ಬಿಜಿ ಇರುವುದೇ ಸಾಕ್ಷಿ.!

'ಲಕ್ಷ್ಮಣ' ಬಿಡುಗಡೆ ಆಗುವ ಮುನ್ನವೇ 'ಪಂಟ' ಚಿತ್ರಕ್ಕೆ ಅನೂಪ್ ರೇವಣ್ಣ ಸೆಲೆಕ್ಟ್ ಆಗಿದ್ದಾರೆ. ಈಗಾಗಲೇ 'ಪಂಟ' ಶೂಟಿಂಗ್ ಶುರುವಾಗಿದೆ. ಇದರ ಜೊತೆಗೆ ಅನೂಪ್ ರೇವಣ್ಣ ಕಾಲ್ ಶೀಟ್ ಪಡೆಯಲು ನಿರ್ಮಾಪಕರು ಕಾಯುತ್ತಿದ್ದಾರೆ ಅಂದ್ರೆ ನೀವೇ ಊಹಿಸಿ, ಅನೂಪ್ 'ಹವಾ' ಸದ್ಯ ಹೇಗಿದೆ ಅಂತ.


ಸೂಪರ್-ಡ್ಯೂಪರ್ ಡ್ಯಾನ್ಸರ್

ಈಗಾಗಲೇ 'ಲಕ್ಷ್ಮಣ' ಚಿತ್ರದ 'ರಾವೇ ರಾವೇ ಸುಬ್ಬಲಕ್ಷ್ಮಿ ಸುಬ್ಬರಾವ್' ವಿಡಿಯೋ ಸಾಂಗ್ ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ. ಅನೂಪ್ ಸೂಪರ್ ಡ್ಯಾನ್ಸರ್ ಎನ್ನುವುದಕ್ಕೆ ಈ ಹಾಡೇ ಸಾಕ್ಷಿ. ಸಲೀಸಾಗಿ ಮತ್ತು ಸೂಪರ್ ಆಗಿ ಮೈ ಕುಲುಕಿಸಿರುವ ನಟ ಅನೂಪ್ ಅವರು ಡ್ಯಾನ್ಸ್ ನಲ್ಲೂ ಕೂಡ ಯಾವ ಸ್ಟಾರ್ ನಟನಿಗೂ ಕಮ್ಮಿ ಇಲ್ಲ. ಬೇಕಾದ್ರೆ ನೀವೂ ಒಮ್ಮೆ ಹಾಡನ್ನ ನೋಡಿಕೊಂಡು ಬನ್ನಿ....


ಆಕ್ಷನ್ ಹೀರೋ.!

ಈಗಾಗಲೇ ಬಿಡುಗಡೆ ಆಗಿರುವ 'ಲಕ್ಷ್ಮಣ' ಟ್ರೈಲರ್ ನೋಡಿದ್ರೆ, ಇದು 'ಆಕ್ಷನ್' ಸಿನಿಮಾ ಅನ್ನೋದು ಪಕ್ಕಾ. ಚಿತ್ರಕಥೆಗೆ ತಕ್ಕಂತೆ ನಿರ್ದೇಶಕ ಆರ್.ಚಂದ್ರು ಅನೂಪ್ ರೇವಣ್ಣ ರವರಿಗೆ 'ಆಕ್ಷನ್ ಹೀರೋ' ಇಮೇಜ್ ಕೊಟ್ಟಿದ್ದಾರೆ. ಅನೂಪ್ ಕೂಡ 'ನಿರ್ದೇಶಕನ ನಟನಾಗಿ' ಭರ್ಜರಿ ಪರ್ಫಾಮೆನ್ಸ್ ಮಾಡಿದ್ದಾರೆ. ಟ್ರೈಲರ್ ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ...


ಡೆಡಿಕೇಟೆಡ್ ನಟ ಅನೂಪ್ ರೇವಣ್ಣ

ಸಾಮಾನ್ಯವಾಗಿ ಯಾವುದೇ ಸಾಹಸ ದೃಶ್ಯಗಳಲ್ಲಿ ನಾಯಕರು ಹೆಚ್ಚಾಗಿ ಡ್ಯೂಪ್ ಬಳಸುತ್ತಾರೆ. ಆದರೆ 'ಲಕ್ಷ್ಮಣ' ಚಿತ್ರದಲ್ಲಿ ಅನೂಪ್ ಅವರು ಯಾವುದೇ ಡ್ಯೂಪ್ ಬಳಸದೇ ಧೈರ್ಯವಾಗಿ ಬೆನ್ನಿಗೆ ಬೆಂಕಿ ಹಚ್ಚಿಕೊಂಡು ಸಾಹಸ ಮಾಡಿದ್ದಾರೆ. ಇದರಲ್ಲೇ ಗೊತ್ತಾಗುತ್ತೆ, ಅನೂಪ್ ಅವರು ತಮ್ಮ ಕೆಲಸದ ಮೇಲೆ ಎಷ್ಟೊಂದು ಡೆಡಿಕೇಶನ್ ಇಟ್ಟುಕೊಂಡಿದ್ದಾರೆ ಅಂತ.[ಬೆಂಕಿ ಜೊತೆ ಸರಸವಾಡಿದ 'ಲಕ್ಷ್ಮಣ' ಹೀರೋ ಅನೂಪ್]


ರವಿಚಂದ್ರನ್ ಮತ್ತೊಂದು ಅಟ್ರ್ಯಾಕ್ಷನ್.!

ಯಾವಾಗಲೂ ರೋಮ್ಯಾಂಟಿಕ್ ಮೂಡ್ ನಲ್ಲಿರುವ ಕ್ರೇಜಿಸ್ಟಾರ್ ರವಿಚಂದ್ರನ್ 'ಲಕ್ಷ್ಮಣ' ಚಿತ್ರದಲ್ಲಿ ಅನೂಪ್ ಅವರ ತಂದೆಯ ಪಾತ್ರ ವಹಿಸಿರೋದು ಮಾತ್ರವಲ್ಲದೇ, ಖಡಕ್ ಎಸಿಪಿ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ. ಸುಮಾರು ವರ್ಷಗಳ ಗ್ಯಾಪ್ ನಂತರ ಮತ್ತೆ ರವಿಮಾಮನನ್ನು ಖಾಕಿ ಡ್ರೆಸ್ಸ್ ನಲ್ಲಿ ನೋಡಬೇಕೆಂದರೆ ನೀವು ಖಂಡಿತವಾಗಲೂ 'ಲಕ್ಷ್ಮಣ' ಸಿನಿಮಾ ನೋಡಲೇಬೇಕು.[ಖಾಕಿ ತೊಟ್ಟು ಖಡಕ್ ಎಸಿಪಿ ಆದ ರವಿಚಂದ್ರನ್]


ಮೇಘನಾ ಜೊತೆ ಅನೂಪ್

ನಟಿ ಮೇಘನಾ ಮತ್ತು ಅನೂಪ್ ಅವರ ಅನ್ ಸ್ಕ್ರೀನ್ ಕೆಮಿಸ್ಟ್ರಿ ಕೂಡ 'ಲಕ್ಷ್ಮಣ' ಚಿತ್ರದ ಅಟ್ರ್ಯಾಕ್ಷನ್.


English summary
Kannada Actor Anoop revanna has action hero in Kannada movie 'Lakshmana'. Kannada Actress Meghana Raj, Kannada Actor Ravichandran in the lead role. The movie is directed by R Chandru.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada