For Quick Alerts
  ALLOW NOTIFICATIONS  
  For Daily Alerts

  ಮಗುವಾಗಿ ನೀನು ನಮ್ಮ ಮಡಿಲಿಗೆ ಬಂದ್ಬಿಡು ಕಂದ: ಕುಟುಂಬಸ್ಥರಿಂದ ಚಿರುಗೆ ಭಾವನಾತ್ಮಕ ಪತ್ರ

  |

  ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಹಠಾತ್ ಅಗಲಿಕೆಯೆ ಆಘಾತದಿಂತ ಇಡೀ ಕುಟುಂಬ ಇನ್ನೂ ಹೊರಬಂಗದಿಲ್ಲ. ಚಿರು ಇನ್ನಿಲ್ಲ ಎನ್ನುವ ಸತ್ಯವನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಚಿರು ಕಳೆದುಕೊಂಡು ಇಡೀ ಕುಟುಂಬ ನೋವಿನಲ್ಲಿದೆ. ಚಿರು ನೆನಪು ಅವರನ್ನು ಪದೇ ಪದೇ ಕಾಡುತ್ತಿದೆ.

  ಚಿರು ಸಾವಿನ ಬಗ್ಗೆ ಕೊನೆಗೂ ಮೌನ ಮುರಿದ ಅರ್ಜುನ್ ಸರ್ಜಾ | Arjun Sarja emotional talk on Chiru

  ಚಿರು ನಿಧನಹೊಂದಿ 11 ದಿನ ಕಳೆದಿದೆ. ಇಂದು 11ನೇ ದಿನದ ಪುಣ್ಯ ತಿಥಿ ಮಾಡಲಾಗುತ್ತಿದೆ. ಚಿರು ಸರ್ಜಾ ಅಂತ್ಯಕ್ರಿಯೆ ನಡೆದ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಚಿರು ಸರ್ಜಾ ಪುಣ್ಯತಿಥಿ ನಡೆಯಲಿದೆ. ಚಿರು ಇಲ್ಲದೆ 11 ದಿನಗಳನ್ನು ಕಳೆದ ಸರ್ಜಾ ಕುಟುಂಬ ಚಿರು ಬಗ್ಗೆ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ. ಮುಂದೆ ಓದಿ..

  ಚಿರಂಜೀವಿ ಸರ್ಜಾ 11ನೇ ದಿನದ ಪುಣ್ಯತಿಥಿ: ಕುಟುಂಬದಿಂದ ಮಾಧ್ಯಮಗಳಿಗೆ ಮನವಿಚಿರಂಜೀವಿ ಸರ್ಜಾ 11ನೇ ದಿನದ ಪುಣ್ಯತಿಥಿ: ಕುಟುಂಬದಿಂದ ಮಾಧ್ಯಮಗಳಿಗೆ ಮನವಿ

  ಅರ್ಜುನ್ ಸರ್ಜಾ ಭಾವನಾತ್ಮಕ ಮಾತು

  ಅರ್ಜುನ್ ಸರ್ಜಾ ಭಾವನಾತ್ಮಕ ಮಾತು

  ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಮಾಡುವ ಜೊತೆಗೆ ಅರ್ಜುನ್ ಸರ್ಜಾ ಭಾವನಾತ್ಮಕ ಮಾತು ಕೇಳಿದ್ರೆ ಅಭಿಮಾನಿಗಳ ಕಣ್ಣು ಒದ್ದೆಯಾಗದೆ ಇರದು. ಕಣ್ಣು ಮುಚ್ಚಿದ್ರು ನೀನೆ, ಕಣ್ಣು ತೆರೆದ್ರು ನೀನೆ, ನಿನ್ನ ನಗು ಮುಖ ಸದಾ ಕಾಡುತ್ತೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

  ಮೇಘನಾ ರಾಜ್ ಭೇಟಿಯಾಗಿ ಧೈರ್ಯ ತುಂಬಿದ ರಾಘವೇಂದ್ರ ರಾಜ್ ಕುಮಾರ್ ಕುಟುಂಬಮೇಘನಾ ರಾಜ್ ಭೇಟಿಯಾಗಿ ಧೈರ್ಯ ತುಂಬಿದ ರಾಘವೇಂದ್ರ ರಾಜ್ ಕುಮಾರ್ ಕುಟುಂಬ

  ಕಣ್ಣು ಮುಚ್ಚಿದ್ರು ನೀನೆ, ಕಣ್ಣು ತೆರೆದ್ರು ನೀನೆ

  ಕಣ್ಣು ಮುಚ್ಚಿದ್ರು ನೀನೆ, ಕಣ್ಣು ತೆರೆದ್ರು ನೀನೆ

  "ನಿನ್ನ ಮನಸ್ಸಿಗೆ ಯಾರಾದ್ರು ಬೇಜಾರು ಮಾಡಿದ್ರೆ, ನೀನು ಕೊಪ ಮಾಡ್ಕೊಂಡು ಸ್ವಲ್ಪ ಮಾತಾದಡ್ಡಿದ್ರು, ನಮ್ಮನ್ನು ಬೈಕೊಂಡಿದ್ರು, ನಮ್ಗೆ ಹೇಳ್ದೆ ಯಾವ್ದಾರು ಊರಿಗೆ ಹೋಗಿ ಬಂದಿದ್ರು ಪರವಾಗಿರ್ತಿರ್ರಿಲ್ಲ. ಆದರೆ ವಾಪಸ್ಸೇ ಬರಕ್ಕಾಗ್ದಿರೊ ಅಂತ ಊರಿಗೆ ಹೋಗಿ ನಮ್ಗೆಲ್ಲಾ ಇಂತ ಶಿಕ್ಷೆ ಕೊಟ್ಟಲ್ಲಪ್ಪ. ಕಣ್ಣು ಮುಚ್ಚಿದ್ರು ನೀನೆ, ಕಣ್ಣು ತೆರೆದ್ರು ನೀನೆ, ನಿನ್ನ ನಗು ಮುಖ, ಸರಿ ಸ್ವಲ್ಪ ದಿನ ಆದ್ಮೇಲೆ ಮರ್ತುಬಿಡ್ತಾರೆ ಅಂತ ನೀನು ತಿಳ್ಕೊಂಡಿದ್ರೆ ಅದು ಸುಳ್ಳು, ನಮ್ಮೆಲ್ಲರಿಗೂ ಇದು ದೊಡ್ಡ ಗಾಯ, ಆದರೆ ಇರೊ ಅಂತ ಗಾಯ. ಯಾವಾಗ್ಲೂ ನೀನು ನಮ್ಮ ಮನಸ್ಸಲ್ಲಿ, ಹೃದಯದಲ್ಲೇ ಇರ್ತಿಯ ಕಂದ" ಎಂದು ಬರೆದಿದ್ದಾರೆ.

  ಮಗುವಾಗಿ ನಮ್ಮ ಮಡಿಲಿಗೆ ಬಂದ್ಬಿಡು ಕಂದ

  ಮಗುವಾಗಿ ನಮ್ಮ ಮಡಿಲಿಗೆ ಬಂದ್ಬಿಡು ಕಂದ

  "ನಿನ್ನ ತಾತ ನಿಂಗೆ ಚಿರಂಜೀವಿ ಅಂತ ಹೆಸರಿಟ್ರು ಅದ್ಯಾವತ್ತು ಸುಳ್ಳಾಗಲಿಲ್ಲ. ನಿನ್ನ ಮಾತು, ನಿನ್ನ ಚಿರುನಗು, ನಿನ್ನ ನೆನಪು, ನಮ್ಮ ಸಂಬಂಧ ಯಾವಾಗ್ಲೂ ಚಿರಂಜೀವಿಯಾಗೇ ಇರುತ್ತೆ ಬಂಗಾರ. ಚಿರು ಎಲ್ರು ಹೇಳ್ತಾರೆ ಈ ನೋವನ್ನ ತಡ್ಕೊಳ್ಳೊ ಶಕ್ತಿ ಆ ದೇವರು ನಿಮ್ಮ ಇಡೀ ಕುಟುಂಬಕ್ಕೆ ಕೊಡ್ಬೇಕು ಅಂತ. ಆದರೆ ಅದು ನಿನ್ನ ಕೈಯ್ಯಲ್ಲೇ ಇದೆ ಹೇಗೆ ಅಂದ್ರೆ, ನೀನೆ ನಿನ್ನ ಮಗುವಾಗಿ ನಮ್ಮ ಮಡಿಲಿಗೆ ಬಂದ್ಬಿಡು ಕಂದ. ಆ ಮಗು ನಗುವಿನಲ್ಲೆ ನಿನ್ನ ನೋಡ್ತೀವಿ ದಯವಿಟ್ಟು"

  11ನೇ ದಿನದ ಪುಣ್ಯತಿಥಿ

  11ನೇ ದಿನದ ಪುಣ್ಯತಿಥಿ

  ಚಿರು ಸರ್ಜಾ ನಿಧನಹೊಂದಿ 11 ದಿನದಗಳು ಕಳೆದಿವೆ. ಇಂದು ಕುಟುಂಬದವರು ಪುಣ್ಯತಿಥಿ ಕಾರ್ಯ ಮಾಡುತ್ತಿದ್ದಾರೆ. ಖಾಸಗಿ ಕಾರ್ಯಕ್ರಮವಾದ್ದರಿಂದ ಮಾಧ್ಯಮಗಳವರು ಕ್ಯಾಮೆರಾ ತರಬಾರದು ಎಂದು ಮನವಿ ಮಾಡಲಾಗಿದೆ. ಕ್ಯಾಮೆರಾ ಇಲ್ಲದೆ ಹಾಗೆಯೇ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ.

  English summary
  Actor Arjun Sarja emotional post about Chiranjeevi Sarja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X