»   » ಬಾಲಿವುಡ್ಡಿಗೆ ಹಾರಲಿದ್ದಾರೆ ಕನ್ನಡದ ಕುಡಿ ಅರ್ಜುನ್ ಸರ್ಜಾ

ಬಾಲಿವುಡ್ಡಿಗೆ ಹಾರಲಿದ್ದಾರೆ ಕನ್ನಡದ ಕುಡಿ ಅರ್ಜುನ್ ಸರ್ಜಾ

Posted By:
Subscribe to Filmibeat Kannada

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅಭಿನಯದ 'ಗೇಮ್' ಚಿತ್ರ ಮೊನ್ನೆಯಷ್ಟೇ ಸೆಟ್ಟೇರಿದೆ. ಸದಭಿರುಚಿಯ ಚಿತ್ರಗಳಿಂದ ಸ್ಯಾಂಡಲ್ ವುಡ್, ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಜನಪ್ರಿಯವಾಗಿರುವ ಅರ್ಜುನ್ ಸರ್ಜಾ ಇದೀಗ ತಮ್ಮ ವ್ಯಾಪ್ತಿಯನ್ನ ಬಾಲಿವುಡ್ ಗೂ ವಿಸ್ತರಿಸುವುದಕ್ಕೆ ಸಜ್ಜಾಗುತ್ತಿದ್ದಾರೆ.

ಮೂರು ದಶಕಗಳ ಕಾಲ ಮೂರು ಭಾಷೆಗಳಲ್ಲಿ ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ತಮ್ಮದೇ ಆದ ಛಾಪನ್ನ ಮೂಡಿಸಿರುವ ಅರ್ಜುನ್ ಸರ್ಜಾ, 'ದಿಸ್ ವೀಕೆಂಡ್' (ತಮಿಳಿನಲ್ಲಿ ಕಾಟ್ಟು ಪುಲಿ) ಸಿನಿಮಾ ಬಿಟ್ಟರೆ ಈವರೆಗೂ ಬಾಲಿವುಡ್ ಕಡೆ ಮುಖ ಮಾಡಿರಲಿಲ್ಲ.

ಅರ್ಜುನ್ ಸರ್ಜಾ ಅಭಿನಯದ ಸೂಪರ್ ಹಿಟ್ ಚಿತ್ರಗಳು ಹಿಂದಿಗೆ ಡಬ್ ಆಗಿ ಬಾಲಿವುಡ್ ನಲ್ಲಿ ಭರ್ಜರಿ ಪ್ರದರ್ಶನ ಕಂಡಿವೆ. ಇದೇ ನಂಬಿಕೆ ಮೇಲೆ, ಬಾಲಿವುಡ್ ಗೆ ಲಗ್ಗೆ ಹಾಕುವುದಕ್ಕೆ ಅರ್ಜುನ್ ಸರ್ಜಾ ಈಗ ನಿರ್ಧರಿಸಿದ್ದಾರೆ.

Actor Arjun Sarja to make Bollywood Debut

ಸದ್ಯದಲ್ಲೇ ಬಿಟೌನ್ ಗೆ ಕಾಲಿಡುವ ಬಗ್ಗೆ 'ಗೇಮ್' ಚಿತ್ರದ ಮುಹೂರ್ತ ಸಮಾರಂಭದಲ್ಲಿ ಅರ್ಜುನ್ ಸರ್ಜಾ ಸೂಚನೆ ನೀಡಿದ್ದಾರೆ. ತಮ್ಮ ಬಹುದಿನಗಳ ಬಾಲಿವುಡ್ ಕನಸನ್ನ ಇನ್ನು ಕೆಲವೇ ದಿನಗಳಲ್ಲಿ ನನಸಾಗಿಸಿಕೊಳ್ಳುವುದಾಗಿ ಅರ್ಜುನ್ ಸರ್ಜಾ ತಿಳಿಸಿದ್ದಾರೆ. [ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ 'ಗೇಮ್' ಶುರು]

ಬರೀ ನಟನೆ ಮಾತ್ರವಲ್ಲದೇ, ಹಿಂದಿ ಚಿತ್ರ ನಿರ್ಮಾಣ ಮತ್ತು ನಿರ್ದೇಶನ ಮಾಡುವುದಕ್ಕೆ ಅರ್ಜುನ್ ಸರ್ಜಾ ಉತ್ಸುಕರಾಗಿದ್ದಾರೆ. ಒಳ್ಳೆಯ ಕಥೆಗಾಗಿ ಈಗಾಗಲೇ ಹುಡುಕಾಟ ನಡೆಸುತ್ತಿದ್ದಾರಂತೆ. [ಕನ್ನಡ ಚಿತ್ರರಂಗಕ್ಕೆ ಅರ್ಜುನ್ ಸರ್ಜಾ ಪುತ್ರಿ ಎಂಟ್ರಿ]

ಎ.ಎಂ.ಆರ್.ರಮೇಶ್ ನಿರ್ದೇಶನದ 'ಗೇಮ್' ಚಿತ್ರ ಮುಗಿದ ಬಳಿಕ ಅರ್ಜುನ್ ಆಡಿದ ಮಾತಿನಂತೆ ಮಗಳು ಐಶ್ವರ್ಯ ಚಿತ್ರವನ್ನ ನಿರ್ದೇಶನ ಮಾಡಲಿದ್ದಾರೆ. ಅದು ಮುಗಿದ ಬಳಿಕ ಬಾಲಿವುಡ್ ಪ್ಲಾನ್ ಅಂತಾರೆ ಅರ್ಜುನ್ ಸರ್ಜಾ. ಅವರ ಈ ಹೊಸ ಕನಸಿಗೆ ನಾವೂ ಶುಭ ಹಾರೈಸೋಣ. (ಏಜೆನ್ಸೀಸ್)

English summary
Multilingual Actor Arjun Sarja is all set to make Bollywood Debut soon. The Actor has revealed his desire to make Bollywood Film recently during the launch of his new film 'Game'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada