For Quick Alerts
  ALLOW NOTIFICATIONS  
  For Daily Alerts

  ಪುನೀತ್‌ ಅಂತಿಮ ನಮನ ಪಡೆದು ಕಣ್ಣೀರು ಹಾಕಿದ ನಂದಮೂರಿ ಬಾಲಕೃಷ್ಣ!

  |

  ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಠಾತ್ ನಿಧನ ಇಂಡಸ್ಟ್ರಿಗೆ ಆಘಾತವನ್ನುಂಟುಮಾಡಿದೆ. ಸಿನಿಮಾ ತಾರೆಯರು ಪುನೀತ್‌ ಅವರಿಗೆ ತಮ್ಮ ಸಂತಾಪ ಸೂಚಿಸುತ್ತಿದ್ದಾರೆ. ನಟ ಪುನೀತ್ ರಾಜಕುಮಾರ್ ವ್ಯಾಯಾಮ ಮಾಡುವಾಗ ಹೃದಯಾಘಾತಕ್ಕೆ ಒಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯ ಉಸಿರೆಳಿದ್ದಾರೆ. 46ನೇ ವಯಸ್ಸಿನಲ್ಲಿ ಅಪ್ಪು ತಮ್ಮ ಜೀವನದ ಪಯಣ ಮುಗಿಸಿದ್ದಾರೆ.

  ಪುನೀತ್‌ ರಾಜ್‌ಕುಮಾರ್‌ ನಿಧನಕ್ಕೆ ಹಲವಾರು ಬಾಲಿವುಡ್ ತಾರೆಯರು ಕೂಡ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ದುಃಖವನ್ನು ಹೊರಹಾಕಿದ್ದಾರೆ. ಪುನೀತ್ ರಾಜಕುಮಾರ್ ಅವರ ಹಠಾತ್ ನಿಧನದಿಂದ ದೇಶದಾದ್ಯಂತ ಕಂಬನಿ ಮಿಡಿಯುವಂತೆ ಮಾಡಿದೆ. ಅಪ್ಪು ಅಂತಿಮ ದರ್ಶನ ಪಡೆಯಲು ಹೊರ ರಾಜ್ಯದ ಸ್ಟಾರ್‌ ನಟರು ಆಮಿಸುತ್ತಿದ್ದಾರೆ. ಪುನೀತ್‌ರನ್ನ ಹತ್ತಿರದಿಂದ ಬಲ್ಲವರು ಅಪ್ಪು ಅವರನ್ನು ಒಮ್ಮೆ ಆದರೂ ನೋಡಲೇ ಬೇಕು ಅಂತ ಬೆಂಗಳೂರಿನತ್ತ ಬರುತ್ತಿದ್ದಾರೆ. ಸದ್ಯ ತೆಲುಗಿನ ನಟ ನಂದಮೂರಿ ಬಾಲಕೃಷ್ಣ ಮತ್ತು ಪ್ರಭುದೇವ ಬಂದು ಅಪ್ಪು ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.

  ತಮ್ಮನನ್ನೇ ಕಳೆದುಕೊಂಡೆ ಎಂದ ಬಾಲಣ್ಣ!

  "ತಮ್ಮನ ಹಾಗಿದ್ದ ಪುನೀತ್ ನನ್ನು ಕಳೆದು ಕೊಂಡಿರುವುದು ತೀವ್ರ ದುಃಖ ತಂದಿದೆ. ತನ್ನದೇ ಆದ ಪರಿಶ್ರಮದಿಂದ ಮೇಲಕ್ಕೆ ಬಂದಿದ್ದರು ಪುನೀತ್. ನಮ್ಮ ತಂದೆ ಕಾಲದಿಂದಲೂ, ನಮ್ಮ ಮತ್ತು ರಾಜ್ ಕುಮಾರ್ ಕುಟುಂಬದೊಂದಿಗೆ ಉತ್ತಮ ಸಂಬಂಧವಿದೆ. ಅವರ ಸಾವನ್ನು ಈಗಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇವರು ಅವರನ್ನ ಇಷ್ಟು ಬೇಗ ಕರೆಸಿ ಕೊಂಡಿರುವುದು ನಂಬಲು ಸಾಧ್ಯವಾಗುತ್ತಿಲ್ಲ. ನೆಚ್ಚಿನ ತಮ್ಮನ ಹಾಗೆ ಇದ್ದ ಪುನೀತ್. ಭೇಟಿಯಾದಾಗ ಉತ್ತಮವಾಗಿ ಮಾತನಾಡಿಸುತ್ತಿದ್ದ. ಪುನೀತ್ ಅಗಲಿಕೆ ಭಾರತ ಚಿತ್ರರಂಗಕ್ಕೆ ಅಪಾರ ನಷ್ಟವಾಗಿದೆ. ಪ್ರತಿ ವರ್ಷ ಲೇಪಾಕ್ಷಿ ಉತ್ಸವ ನಡೆದಾಗಲೆಲ್ಲ ಅವರನ್ನು ಕರೆಯುತ್ತಿದ್ದೆ. ಅವರು ಸಹ ಸಂತೋಷದಿಂದ ಬರುತ್ತಿದ್ದರು. ಪುನೀತ್ ಹಠಾತ್ ಸಾವು ನಿಜಕ್ಕೂ ನಂಬಲು ಸಾಧ್ಯವಾಗುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ" ಎಂದು ಬಾಲಣ್ಣ ಭಾವನಾತ್ಮಕ ಮಾತನಾಡಿದ್ದಾರೆ.

  ತೆಲುಗು ನಾಡಿನಿಂದ ಬಂದ ಬಾಲಣ್ಣ ಅಪ್ಪು ಪಾರ್ಥೀವ ಶರೀರ ನೋಡಿ ಕಣ್ಣೀರಾದರು. ಕೆಲಕಾಲ ಅಲ್ಲೇ ನಿಂತು ಮೌನ ವಹಿಸಿ ದುಃಖ ತಪ್ತರಾಗಿದ್ದರು. ನಟ ಶಿವರಾಜ್‌ಕುಮಾರ್‌ ಅವರಿಗೆ ಸಮಾಧಾನ ಮಾಡುವ ಪ್ರಯತ್ನವನ್ನೂ ಮಾಡಿದರು. ಬಾಲಣ್ಣ ಜೊತೆಗೆ ಶಿವಣ್ಣ ಕೂಡ ನೋವುನುಂಗಿ ನಿಂತಿದ್ದು ಕಂಡು ಬಂತು. ಬಾಲಣ್ಣ ಜೊತೆಗೆ ಪ್ರಭುದೇವ ಕೂಡ ಪುನೀತ್‌ ಅವರ ಅಂತಿಮ ದರ್ಶನ ಪಡೆದರು. ಇನ್ನೂ ನಟ ಚಿರಂಜೀವಿ, ಜೂನಿಯರ್‌ ಎನ್‌ಟಿಆರ್, ಮಹೇಶ್‌ ಬಾಬು ಕೂಡ ಪುನೀತ್‌ ರಾಜ್‌ಕುಮಾರ್‌ ಅವರ ಅಂತಿಮ ದರ್ಶನ ಪಡೆದು ಕೊಳ್ಳಲು ಬೆಂಗಳೂರಿಗೆ ಬರುವ ಸಾಧ್ಯತೆ ಇದೆ.

  English summary
  Actor Balakrisha Eyes Wet For Puneeth Rajkumar,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X