For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಮಾರ್ ಬಗ್ಗೆ ಬಾಲಯ್ಯನ ಈ ಆಸೆ ಈಡೇರುತ್ತಾ?

  |

  ನಟ ಬಾಲಕೃಷ್ಣ ಇಂದು ಬೆಂಗಳೂರಿಗೆ ಬಂದಿದ್ದರು. ತಮ್ಮ ಮುಂದಿನ ಸಿನಿಮಾ 'ಎನ್ ಟಿ ಆರ್' ಚಿತ್ರದ ಪ್ರಮೋಷನ್ ಗಾಗಿ ಆಗಮಿಸಿದ್ದ ಅವರು ಅನೇಕ ವಿಚಾರಗಳ ಬಗ್ಗೆ ಮಾತನಾಡಿದರು.

  ಬಾಲಕೃಷ್ಣ ಅವರು ಕರ್ನಾಟಕಕ್ಕೆ ಬಂದಾಗ ಪ್ರತಿ ಬಾರಿಯೂ ರಾಜ್ ಕುಮಾರ್ ಅವರ ಬಗ್ಗೆ ಮಾತನಾಡುತ್ತಾರೆ. ರಾಜ್ ಕುಮಾರ್ ನಮ್ಮ ಚಿಕ್ಕಪ್ಪನ ರೀತಿ ಎಂದು ಸಹ ಹೇಳಿದ್ದಾರೆ. ಎಲ್ಲದಕ್ಕೂ ಹೆಚ್ಚಾಗಿ ರಾಜ್ ಕುಟುಂಬ ಹಾಗೂ ಎನ್ ಟಿ ಆರ್ ಕುಟುಂಬ ಹಿಂದಿನಿಂದ ಒಳ್ಳೆಯ ಸ್ನೇಹ ಹೊಂದಿದೆ.

  ಬೆಂಗಳೂರಿನಲ್ಲಿ ಬಾಲಯ್ಯ: ಪವರ್ ಸ್ಟಾರ್, ರಾಕಿಂಗ್ ಸ್ಟಾರ್ ಸಾಥ್

  ಹೀಗಿರುವಾಗ, ರಾಜ್ ಕುಮಾರ್ ಅವರ ಬಗ್ಗೆ ಬಾಲಕೃಷ್ಣಗೆ ಒಂದು ಆಸೆ ಇದೆಯಂತೆ. ತಮ್ಮ ಮನಸ್ಸಿನ ಬಯಕೆಯನ್ನು ಅವರು ಇದೀಗ ಹಂಚಿಕೊಂಡಿದ್ದಾರೆ. ಏನದು? ಮುಂದಿದೆ ಓದಿ....

  ರಾಜ್ ಕುಮಾರ್ ಬಯೋಪಿಕ್

  ರಾಜ್ ಕುಮಾರ್ ಬಯೋಪಿಕ್

  ರಾಜ್ ಕುಮಾರ್ ಹಾಗೂ ಎನ್ ಟಿ ರಾಮರಾವ್ ದಕ್ಷಿಣ ಭಾರತದ ಮಹಾನ್ ನಟರು. ಈ ಶ್ರೇಷ್ಟ ನಟರ ಪೈಕಿ ಟಾಲಿವುಡ್ ನಲ್ಲಿ ಈಗ 'ಎನ್ ಟಿ ಆರ್' ಅವರ ಜೀವನಾಧಾರಿತ ಸಿನಿಮಾ ತಯಾರಾಗಿದೆ. ಅದೇ ರೀತಿ ಕನ್ನಡದಲ್ಲಿಯೂ ರಾಜ್ ಕುಮಾರ್ ಬಯೋಪಿಕ್ ಸಿನಿಮಾ ಬರಬೇಕು ಎನ್ನುವುದು ಬಾಲಯ್ಯರ ಆಸೆ.

  ಬಯಕೆ ಹೇಳಿದ ಬಾಲಯ್ಯ

  ಬಯಕೆ ಹೇಳಿದ ಬಾಲಯ್ಯ

  ಇಂದು ಬೆಂಗಳೂರಿನಲ್ಲಿ 'ಎನ್ ಟಿ ಆರ್' ಚಿತ್ರದ ಪತ್ರಿಕಾಗೋಷ್ಠಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಬಾಲಕೃಷ್ಣ ತಮ್ಮ ಬಯಕೆ ಹಂಚಿಕೊಂಡರು. ತಮ್ಮ ತಂದೆ 'ಎನ್ ಟಿ ಆರ್' ರೀತಿ ರಾಜ್ ಕುಮಾರ್ ಅವರ ಬಗ್ಗೆ ಕೂಡ ಸಿನಿಮಾ ಬರಬೇಕು ಎಂದು ಹೇಳಿದರು.

  ಶಿವರಾಜ್ ಕುಮಾರ್ ಮನೆಗೆ ಭೇಟಿ ಕೊಟ್ಟ ತೆಲುಗು ನಟ ಬಾಲಕೃಷ್ಣ

  ಪುನೀತ್ ಮಂದಹಾಸ

  ಬಾಲಕೃಷ್ಣ ಮಾತನಾಡುವ ವೇಳೆ ನಟ ಪುನೀತ್ ರಾಜ್ ಕುಮಾರ್ ಕೂಡ ವೇದಿಕೆ ಇದ್ದರು. ರಾಜ್ ಬಗ್ಗೆ ಸಿನಿಮಾ ಮಾಡಿ ಎಂದು ಕೇಳಿಕೊಂಡಾದ ಪುನೀತ್ ಮಂದಹಾಸ ಬೀರಿದರು. ಜೊತೆ ಜೊತೆಗೆ ಕಾರ್ಯಕ್ರಮದಲ್ಲಿ ಅಣ್ಣಾವ್ರ ಗುಣವನ್ನು ಬಾಲಯ್ಯ ನೆನೆದರು.

  ರಾಜ್ ಬಗ್ಗೆ ಸಿನಿಮಾ ಬರುತ್ತಾ?

  ತೆಲುಗು ಜನರು 'ಎನ್ ಟಿ ಆರ್' ಅವರ ಸಿನಿಮಾ ನೋಡಿದ ರೀತಿ ಕನ್ನಡಿಗರು ರಾಜ್ ಕುಮಾರ್ ಅವರ ಸಿನಿಮಾ ನೋಡುವ ಬಯಕೆ ಇಟ್ಟುಕೊಂಡಿದ್ದಾರೆ. ಆದರೆ, ಆ ಆಸೆ ಯಾವಾಗ ಈಡೇರುತ್ತದೆ? ಆ ಸಿನಿಮಾ ಯಾವಾಗ ಬರುತ್ತದೆ? ಸದ್ಯಕ್ಕೆ ಉತ್ತರವಿಲ್ಲ.

  English summary
  Telugu actor Balakrishna want to see DR Rajkumar biopic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X