For Quick Alerts
  ALLOW NOTIFICATIONS  
  For Daily Alerts

  ಮಗಳಿಗಾಗಿ ಸುಂದರ 'ಪ್ರೇಮ ಬರಹ' ಬರೆಯುತ್ತಿರುವ ಅರ್ಜುನ್ ಸರ್ಜಾ

  By Suneetha
  |

  ದಕ್ಷಿಣ ಭಾರತದ ಖ್ಯಾತ ನಟ ಕಮ್ ನಿರ್ದೇಶಕ ಅರ್ಜುನ್ ಸರ್ಜಾ ಅವರು ತಮ್ಮ ಪ್ರೀತಿಯ ಪುತ್ರಿ ನಟಿ ಐಶ್ವರ್ಯ ಸರ್ಜಾ ಅವರಿಗಾಗಿ ಕನ್ನಡದಲ್ಲಿ ಒಂದು ಸಿನಿಮಾ ಮಾಡುತ್ತಿರುವ ಬಗ್ಗೆ ನಾವು ನಿಮಗೆ ಈ ಮೊದಲು ಇದೇ ಫಿಲ್ಮಿಬೀಟಲ್ಲಿ ತಿಳಿಸಿದ್ವಿ.

  ಇದೀಗ ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಿರುವ ಅರ್ಜುನ್ ಸರ್ಜಾ ಅವರು ಸದ್ಯದಲ್ಲೇ ಚಿತ್ರೀಕರಣ ಶುರು ಮಾಡಲಿದ್ದಾರಂತೆ. ಹೌದು ಅರ್ಜುನ್ ಸರ್ಜಾ ಅವರು ತಮ್ಮ ನಿರ್ದೇಶನದ ಹೊಸ ಚಿತ್ರಕ್ಕೆ 'ಪ್ರೇಮ ಬರಹ' ಎಂದು ಹೆಸರಿಟ್ಟಿದ್ದಾರೆ.[ಅಪ್ಪನ ಲವ್ ಸ್ಟೋರಿಗೆ, ಮಗಳು ನಾಯಕಿ..!]

  ಈ ಚಿತ್ರ ತಮಿಳು ಮತ್ತು ಕನ್ನಡ ಭಾಷೆಯಲ್ಲಿ ತಯಾರಾಗುತ್ತಿದ್ದು, ಕನ್ನಡದಲ್ಲಿ 'ಪ್ರೇಮ ಬರಹ' ಎಂದು ಹೆಸರಿಡಲಾಗಿದ್ದು, ತಮಿಳಿನಲ್ಲಿ ಇನ್ನೂ ಟೈಟಲ್ ಇಟ್ಟಿಲ್ಲ. ಈಗಾಗಲೇ ಚಿತ್ರದ ಪ್ರೀ-ಪ್ರೊಡಕ್ಷನ್ಸ್ ಕೆಲಸಗಳು ಆರಂಭವಾಗಿದೆ.

  ಅರ್ಜುನ್ ಸರ್ಜಾ ಅವರ ಕನ್ನಡ ಸಿನಿಮಾ 'ಪ್ರತಾಪ್' ಚಿತ್ರದ 'ಪ್ರೇಮ ಬರಹ ಕೋಟಿ ತರಹ ಬರೆದರೆ ಮುಗಿಯದ ಕಾವ್ಯ ಇದು' ಎಂಬ ಹಾಡು ಅರ್ಜುನ್ ಸರ್ಜಾ ಅವರ ಮೆಚ್ಚಿನ ಹಾಡು. ಹಾಗಾಗಿ ಮಗಳ ಚಿತ್ರಕ್ಕೆ ಹಾಡಿನ ಮೊದಲೆರಡು ಪದಗಳನ್ನು ಶೀರ್ಷಿಕೆಯಾಗಿ ಇಟ್ಟಿದ್ದಾರೆ.['ಅಭಿಮನ್ಯು' ಡಬ್ಬಿಂಗ್ ಅಂದವರಿಗೆ ಅರ್ಜುನ್ ಸರ್ಜಾ ತಿರುಗೇಟು]

  ಅಂದಹಾಗೆ ಈ ಮೊದಲು ಚಿತ್ರಕ್ಕೆ ನಾಯಕನಾಗಿ 'ಆ ದಿನಗಳು', 'ಮೈನಾ' ಖ್ಯಾತಿಯ ನಟ ಚೇತನ್ ಅವರು ಆಯ್ಕೆಯಾಗಿದ್ದರು. ಆದರೆ ಕೆಲವು ಬದಲಾವಣೆಗಳಿಂದ ಇದೀಗ ಚಿತ್ರಕ್ಕೆ 'ಬಿಗ್ ಬಾಸ್' ಖ್ಯಾತಿಯ ಚೆಂದದ ನಟ ಚಂದನ್ ಅವರು ನಾಯಕ ನಟನಾಗಿ ಆಯ್ಕೆಯಾಗಿದ್ದಾರೆ.[ಬಿಗ್ ಬಾಸ್ ಮನೆಯಿಂದ ಹೊರಬಂದ ಚಂದನ್ ಈಗೇನ್ಮಾಡ್ತಿದ್ದಾರೆ]

  ಧಾರಾವಾಹಿಯಿಂದ ಬೆಳ್ಳಿಪರದೆ ಮೇಲೆ ಜಿಗಿದಿದ್ದ ನಟ ಚಂದನ್ ಅವರು ಎರಡು ಮೂರು ಸಿನಿಮಾಗಳಲ್ಲಿ ಮಿಂಚಿದ್ದರು. ಆದರೆ ಯಾವ ಸಿನಿಮಾಗಳು ಕೂಡ ಅಷ್ಟಾಗಿ ಯಶಸ್ಸು ಕೊಡಲಿಲ್ಲ. ಇದೀಗ ಅರ್ಜುನ್ ಸರ್ಜಾ ಅವರೊಂದಿಗೆ ಕೈ ಜೋಡಿಸಿದ್ದು, ಒಂದೊಳ್ಳೆ ಬ್ರೇಕ್ ಗಾಗಿ ಕಾಯುತ್ತಿದ್ದಾರೆ.

  ಈ ಚಿತ್ರದ ಮೂಲಕ ನಟ ಚಂದನ್ ಅವರು ಮೊಟ್ಟ ಮೊದಲ ಬಾರಿಗೆ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರೆ, ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಅವರು 'ಪ್ರೇಮ ಬರಹ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ.['ಗೇಮ್' ವಿಮರ್ಶೆ; ಕುಡಿದು ಗಾಡಿ ಓಡಿಸುವ ಎಲ್ರೂ ನೋಡ್ಲೇಬೇಕ್!]

  ಖುದ್ದು ಅರ್ಜುನ್ ಸರ್ಜಾ ಅವರೇ ಈ ಚಿತ್ರವನ್ನು ನಿರ್ದೇಶಿಸಿ ಬಂಡವಾಳ ಹೂಡುತ್ತಿದ್ದು, ಅರ್ಜುನ್ ಸರ್ಜಾ ಅವರ ಸ್ವಂತ ಬ್ಯಾನರ್ ಶ್ರೀರಾಮ್ ಇಂಟರ್ ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.

  English summary
  Tamil Actor-director Arjun Sarja has finally finished the pre-production of his latest film which stars his daughter Aishwarya. The film is titled as 'Prema Baraha'. Kannada actor Chandan has been roped into play the hero in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X