For Quick Alerts
  ALLOW NOTIFICATIONS  
  For Daily Alerts

  'ಆ ದಿನಗಳು' ಚೇತನ್ ಹೊಸ ಸಿನಿಮಾಗೆ ಸಿಂಪಲ್ ಸುನಿ ನಿರ್ದೇಶನ

  |

  ನಿರ್ದೇಶಕ ಸಿಂಪಲ್ ಸುನಿ, ಆ ದಿನಗಳು ಖ್ಯಾತಿಯ ನಟ ಚೇತನ್ ಕುಮಾರ್ ಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಚೇತನ್ ಮತ್ತು ಸುನಿ ಇಬ್ಬರು ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ವರ್ಷಗಳ ಹಿಂದೆಯೆ ಮಾತುಕತೆಯಾಗಿತ್ತಂತೆ. ಆದರೀಗ ಈ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಸುನಿ ಜೊತೆ ಸಿನಿಮಾ ಮಾಡುವ ಬಗ್ಗೆ ನಟ ಚೇತನ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

  ಈಗಾಗಲೇ ಹೊಸ ಸಿನಿಮಾದ ಕಥೆ ಸಿದ್ಧವಾಗಿದ್ದು, ಕಲಾವಿದರ ಆಯ್ಕೆಯಲ್ಲಿ ಸಿನಿಮಾತಂಡ ನಿರವಾಗಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ಟೈಟಲ್, ಕಲಾವಿದರು ಮತ್ತು ತಂತ್ರಜ್ಞರು ಸೇರಿದಂತೆ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ಬಹಿರಂಗಪಡಿಸಲಿದೆ ಸಿನಿಮಾತಂಡ. ಮೂಲಗಳ ಪ್ರಕಾರ ಸಿನಿಮಾ ಮುಂದಿನ ವರ್ಷ ಸೆಟ್ಟೇರುವ ಸಾಧ್ಯತೆ ಇದೆ.

  'ನಂಗೆ ಹಿಂದಿ ಗೊತ್ತಿಲ್ಲ ಹೋಗ್ರೋ': ಕನ್ನಡ ಸ್ವಾಭಿಮಾನ ಪ್ರದರ್ಶಿಸಿದ ನಟರು'ನಂಗೆ ಹಿಂದಿ ಗೊತ್ತಿಲ್ಲ ಹೋಗ್ರೋ': ಕನ್ನಡ ಸ್ವಾಭಿಮಾನ ಪ್ರದರ್ಶಿಸಿದ ನಟರು

  ನಟ ಚೇತನ್ ಕೊನೆಯದಾಗಿ ಅತಿರಥ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ರಣಂ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಲಾಕ್ ಡೌನ್ ಬಳಿಕ ಚಿತ್ರಮಂದಿರಗಳು ಓಪನ್ ಆಗುತ್ತಿವೆ. ಸದ್ಯದಲ್ಲೇ ರಣಂ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ. ಇನ್ನೂ ಚೇತನ್ ಬಳಿ ಮೋಹನ್ ನಿರ್ದೇಶನದ 'ಮಾರ್ಗ' ಸಿನಿಮಾವಿದ್ದು, ಚಿತ್ರೀಕರಣ ಪ್ರಾರಂಭಿಸುವ ತಯಾರಿಯಲ್ಲಿದ್ದಾರೆ. ಸಿನಿಮಾ ಜೊತೆಗೆ ಚೇತನ್ ಸಾಮಾಜಿಕ ಹೋರಟದಲ್ಲೂ ಭಾಗಿಯಾಗುತ್ತಿದ್ದಾರೆ.

  Recommended Video

  ಕಂಗನಾ ಅಭಿನಯದ ಜಯಲಲಿತಾ ಬಯೋಪಿಕ್ ಗೆ ಎದುರಾಗಿದೆ ದೊಡ್ಡ ಕಂಟಕ | Filmibeat Kannada

  ನಿರ್ದೇಶಕ ಸಿಂಪಲ್ ಸುನಿ ಸದ್ಯ ನಟ ಶರಣ್ ನಟನೆಯ ಅವತಾರ್ ಪುರುಷ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ಬಳಿಕ ಸುನಿ ಮತ್ತೆ ಚಿತ್ರೀಕರಣ ಪ್ರಾರಂಭಮಾಡಿದ್ದು, ಭರ್ಜರಿಯಾಗಿ ಚಿತ್ರೀಕರಣ ನಡೆಯುತ್ತಿದೆ. ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮುಗಿಯುತಿದ್ದಂತೆ ಸುನಿ, ಗೋಲ್ಡನ್ ಗಣೇಶ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಸಖತ್ ಸಿನಿಮಾಗೆ ಪ್ರಾರಂಭ ಮಾಡಲಿದ್ದಾರೆ.

  English summary
  Actor Chetan Kumar And Director Simple Suni Are Set To Collaborate For A Project.
  Tuesday, October 13, 2020, 16:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X