For Quick Alerts
  ALLOW NOTIFICATIONS  
  For Daily Alerts

  ಚಿರು ಜೊತೆಗಿನ ನೆನಪು ಮೆಲುಕು ಹಾಕಿ ಅರ್ಜುನ್ ಸರ್ಜಾ ಕುಟುಂಬಕ್ಕೆ ಸಾಂತ್ವನ ಹೇಳಿದ ಚೇತನ್

  |

  ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ನಿಧನ ಇಡೀ ಕರುನಾಡಿಗೆ ಆಘಾತವುಂಟು ಮಾಡಿದೆ. ಚಿರು ಇನ್ನಿಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಚಿರು ಸಾವಿಗೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ನಟ ಆದಿನಗಳು ಚೇತನ್ ಸಹ ಗೆಳೆಯ ಚಿರು ಸಾವಿಗೆ ಕಂಬನಿ ಮಿಡಿದಿದ್ದಾರೆ.

  Chiranjeevi Sarja : ಕನಕಪುರ ಬಳಿಯ ಬೃಂದಾವನ ಫಾರ್ಮ್ ಹೌಸ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ

  ಈ ಬಗ್ಗೆ ಟ್ವೀಟ್ ಮಾಡಿರುವ ಚೇತನ್ "ನನ್ನ ಸ್ನೇಹಿತ ಮತ್ತು ಸಹ ನಟ ಚಿರು ನಿಧನ ನಿಜಕ್ಕು ದುಃಖ ತಂದಿದೆ. ನಾವಿಬ್ಬರು ಸಿನಿಮಾ ಮಾಡುವ ಮೊದಲೆ ತಿಳಿದಿದ್ದವರು. ಯಾವಾಗಲು ಖುಷಿ ಮತ್ತು ಕಾಳಜಿಯುಳ್ಳ ವ್ಯಕ್ತಿಯಾಗಿದ್ದರು. ಇನ್ನೂ ರಿಲೀಸ್ ಆಗದ ರಣಂ ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದೆವು. ಅತೀ ಶೀಘ್ರದಲ್ಲಿಯೇ ಹೊರಟು ಹೋದ್ರಿ ಗೆಳೆಯ. ಮೇಘನಾ, ಧ್ರುವ, ಅರ್ಜುನ್ ಸರ್ ಮತ್ತು ಸರ್ಜಾ ಫ್ಯಾಮಿಲಿಗೆ ನನ್ನ ಸಾಂತ್ವನ" ಎಂದು ಹೇಳಿದ್ದಾರೆ.

  'ಲೈಫ್ ಈಸ್ ಶಾರ್ಟ್, ಆಲ್ವೇಸ್ ಬಿ ಹ್ಯಾಪಿ' ಎಂದಿದ್ದರು ಚಿರಂಜೀವಿ ಸರ್ಜಾ'ಲೈಫ್ ಈಸ್ ಶಾರ್ಟ್, ಆಲ್ವೇಸ್ ಬಿ ಹ್ಯಾಪಿ' ಎಂದಿದ್ದರು ಚಿರಂಜೀವಿ ಸರ್ಜಾ

  ಈ ಹಿಂದೆ ನಟಿ ಶ್ರುತಿ ಹರಿಹರನ್, ನಟ ಅರ್ಜುನ್ ಸರ್ಜಾ ವಿರುದ್ಧ ಮೀ ಟೂ ಆರೋಪ ಮಾಡಿದ್ದಾಗ, ನಟ ಚೇತನ್ ಶ್ರುತಿ ಹರಿಹರನ್ ಪರ ಮಾತನಾಡಿದ್ದರು. ಈ ಸಮಯದಲ್ಲಿ ಸರ್ಜಾ ಕುಟುಂಬ ಮತ್ತು ಚೇತನ್ ನಡುವೆ ವೈಮನಸ್ಸು ಉಂಟಾಗಿತ್ತು. ಆದರೀಗ ಇದನ್ನೆಲ್ಲ ಮರೆತು ಚೇತನ್ ಗೆಳೆಯ ಚಿರು ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಅರ್ಜುನ್ ಸರ್ಜಾ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

  ಇನ್ನೂ ಚೇತನ್ ಮತ್ತು ಚಿರಂಜೀವಿ ಸರ್ಜಾ ಇಬ್ಬರು 'ರಣಂ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಚಿತ್ರದಲ್ಲಿ ಚಿರು ಪೊಲೀಸ್ ಮಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ರಿಲೀಸ್ ಆಗುವ ಮೊದಲೆ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಚಿರು ಪಾರ್ಥಿವ ಶರೀರವನ್ನು ಬೃಂದಾವನ ಫಾರ್ಮ್ ಹೌಸ್ ಗೆ ಕರೆತರಲಾಗುತ್ತೆ. 4 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಹೇಳಲಾಗುತ್ತಿದೆ.

  English summary
  Actor Aadinagalu Chetan Kumar mourns to chiranjeevi Sarja's death. Chetan Condolences to Meghana, Dhruva, Arjun Sir, & Sarja family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X