For Quick Alerts
  ALLOW NOTIFICATIONS  
  For Daily Alerts

  'ವಿಕ್ರಾಂತ್ ರೋಣ' ಚಿತ್ರದ ವಿರುದ್ಧ ಕಿಡಿಕಾರಿದ ನಟ ಚೇತನ್!

  |

  ನಟ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಜುಲೈ 28ಕ್ಕೆ ರಿಲೀಸ್ ಆಗಿದೆ. ಸಿನಿಮಾ ನೋಡಿದ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ದೊರೆತಿದೆ.‌ ಕೆಲವರೂ ಸಿನಿಮಾ ಸೂಪರ್ ಎಂದರೇ ಮತ್ತೇ ಕೆಲವರೂ ಅಷ್ಟಕ್ಕಷ್ಟೇ ಎನ್ನುತ್ತಿದ್ದಾರೆ.

  ಅದೇನೇ ಇದ್ದರೂ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸದ್ದು ಮಾಡಿದ ಕನ್ನಡ ಸಿನಿಮಾ ಎನಿಸಿಕೊಂಡಿದೆ. ಕನ್ನಡ ಬಾಕ್ಸಾಫೀಸ್ ನಲ್ಲಿ ಸದ್ದು ‌ಮಾಡಿದ ವಿಕ್ರಾಂತ್ ರೋಣ, ಬಾಲಿವುಡ್ ನಲ್ಲೂ ಕಮಾಲ್ ಮಾಡಿದ್ದು, ಚಿತ್ರ ಒಂದು ಮಟ್ಟಿಗೆ ಸದ್ದು ಮಾಡಿದೆ. ಇನ್ನು ಸಿನಿಮಾದ ಬಗ್ಗೆ ಹಲವು ಸಿನಿಮಾ ತಾರೆಯರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‌

  ಜಪಾನ್‌ ದೇಶಕ್ಕೆ 'ವಿಕ್ರಾಂತ್ ರೋಣ': ಸಿನಿಮಾ ನೋಡಲು 300 ಕಿ.ಮೀ ಪ್ರಯಾಣಿಸಿದ್ಯಾರು?ಜಪಾನ್‌ ದೇಶಕ್ಕೆ 'ವಿಕ್ರಾಂತ್ ರೋಣ': ಸಿನಿಮಾ ನೋಡಲು 300 ಕಿ.ಮೀ ಪ್ರಯಾಣಿಸಿದ್ಯಾರು?

  ವಿಕ್ರಾಂತ್ ರೋಣ ಚಿತ್ರವನ್ನು ನೋಡಿದ ನಟ ಆ ದಿನಗಳು ಚೇತನ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಟ್ವಿಟರ್ ನಲ್ಲಿ ಸಿನಿಮಾದ ಬಗ್ಗೆ ‌ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ‌.

  ವಿಕ್ರಾಂತ್ ರೋಣ ಮೆಚ್ಚಿದ ಚೇತನ್!

  ಕ್ರಾಂತ್ ರೋಣ ಚಿತ್ರ ನೋಡಿ ನಟ ಚೇತನ್ ಮೆಚ್ಚಿಕೊಂಡಿದ್ದಾರೆ. ಚಿತ್ರದಲ್ಲಿನ ಅಭಿನಯ ಮತ್ತು ತಾಂತ್ರಿಕವಾಗಿ ಸಿನಿಮಾ ಮೂಡಿಬಂದಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ವಿಕ್ರಾಂತ್ ರೋಣ- ತಾಂತ್ರಿಕವಾಗಿ ಮತ್ತು ಅಭಿನಯದ ದೃಷ್ಟಿಯಿಂದ ನೋಡಿದರೆ ಉತ್ತಮವಾಗಿದೆ." ಎಂದು ಮೊದಲ ಸಾಲಿನಲ್ಲಿ ಬರೆದುಕೊಂಡಿದ್ದಾರೆ.

  ಬಹುಜನರನ್ನು ದುಷ್ಟರಂತೆ ತೋರಿಸಿದ್ದಾರೆ- ಚೇತನ್!

  ಇನ್ನು ಸಿನಿಮಾದ ಬಗ್ಗೆ ಟ್ವೀಟ್ ನಲ್ಲಿ ಹೆಚ್ಚಿದನ್ನು ಬರೆದು ಕೊಂಡಿದ್ದಾರೆ. "ಆದರೆ ದಲಿತರನ್ನು- ಬಹುಜನರನ್ನು ದಷ್ಟ, ಪೈಶಾಚಿಕರಂತೆ ಬಿಂಬಿಸಿ, ಮುಸ್ಲಿಮರನ್ನು ಸ್ಟೀರಿಯೋಟೈಪ್ ಮಾಡಿದ್ದಾರೆ. ಈ ಸೂಕ್ಷ್ಮ ವಿಲ್ಲದ ಚಿತ್ರಣದಿಂದ ನಾನು ನಿರಾಶೆಗೊಂಡಿದ್ದೇನೆ." ಎಂದು ಚೇತನ್ ಬರೆದುಕೊಂಡಿದ್ದಾರೆ. ಈ ಮೂಲಕ ಚಿತ್ರದ ಬಗ್ಗೆ ಒಂದಷ್ಟು ವಿಚಾರಗಳನ್ನು ಎತ್ತಿ ಹಿಡಿದಿದ್ದಾರೆ.

  ಲಾಭಕ್ಕಾಗಿ ಜಾತಿ ಬಳಕೆ!

  ಲಾಭಕ್ಕಾಗಿ ಜಾತಿ ಬಳಕೆ!

  ಇನ್ನು ಸಿನಿಮಾಗಳಲ್ಲಿ ಜಾತಿ, ಧರ್ಮಗಳನ್ನು ಲಾಭಕ್ಕಾಗಿ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದೂ ಬರೆದುಕೊಂಡಿದ್ದಾರೆ. "ಚಲನಚಿತ್ರ‌ ನಿರ್ಮಾಣ ಮಾಡುವವರು‌ ಐತಿಹಾಸಿಕ ಅನ್ಯಾಯಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ‌‌ ಕೇವಲ ಲಾಭಕ್ಕಾಗಿ ‌ಜಾತಿ, ಧರ್ಮವನ್ನು ತಮ್ಮ ಚಿತ್ರಗಳಲ್ಲಿ‌ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು." ಎಂದು ಚೇತನ್ ತಮ್ಮ ಟ್ವೀಟ್ ನಲ್ಲಿ ಬರೆದು ಕೊಂಡಿದ್ದಾರೆ.

  ಸಕ್ಸಸ್ ಪಾರ್ಟಿ ಮಾಡಿದ ಚಿತ್ರತಂಡ!

  ಸಕ್ಸಸ್ ಪಾರ್ಟಿ ಮಾಡಿದ ಚಿತ್ರತಂಡ!

  ವಿಕ್ರಾಂತ್ ರೋಣ ‌ಚಿತ್ರ ಗಳಿಕೆಯ ವಿಚಾರದಲ್ಲಿ ಸಾಕಷ್ಟು ಗೊಂದಲುಗಳು ಕೂಡ ಸೃಷ್ಟಿಯಾಗಿದ್ದವು. ಈ ಗೊಂದಲಗಳಿಗೆ ಉತ್ತರ ಕೊಟ್ಟ ನಿರ್ಮಾಪಕ ಮಂಜುನಾಥ್, ಸಿನಿಮಾ ಗೆದ್ದಿದೆ, ಸಕ್ಸಸ್ ಕಂಡಿದೆ ಎಂದು ಘೋಷಣೆ ಮಾಡಿದರು. ಆದರೆ ಕಲೆಕ್ಷನ್ ಎಷ್ಟು ಎನ್ನುವ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರ ಹಾಕಿಲ್ಲ. ಬದಲಿಗೆ "ಸಿನಿಮಾ ಗೆದ್ದಿದೆ, ನಿರ್ಮಾಪಕನಾಗಿ ಇಂತಹ ‌ಸಿನಿಮಾ ಮಾಡಲು ನಾನು ಅದೃಷ್ಟ ಮಾಡಿದ್ದೆ" ಎಂದು ಹೇಳಿಕೊಂಡಿದ್ದಾರೆ. ಹೈದ್ರಾಬಾದ್ ನಲ್ಲಿ ಸಿನಿಮಾತಂಡ ಸಕ್ಸಸ್ ಬಗ್ಗೆ ಪ್ರೆಸ್ ಮೀಟ್ ಕೂಡ ಮಾಡಿದೆ.

  Recommended Video

  Vikrant Rona | ವಿಕ್ರಾಂತ ರೋಣ ಸಿನಿಮಾ ನೋಡುವಾಗ ಹಲ್ಲೆ | *Sandalwood
  English summary
  Actor Chethan Get Upset With Vikrant Rona Film Content Which Shows Dalits As Villains, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X