ಡ್ರಗ್ಸ್ ವಿವಾದದ ನಡುವೆ 'ಕನ್ನಡ ಸ್ಟಾರ್ಸ್'ಗಳ ಮೇಲೆ ಮತ್ತೊಂದು ಆರೋಪ ಮಾಡಿದ ಚೇತನ್
ಸ್ಯಾಂಡಲ್‌ವುಡ್ನ ನಟ-ನಟಿಯರು-ತಂತ್ರಜ್ಞರು ಡ್ರಗ್ಸ್ ಸೇವಿಸುತ್ತಾರೆ, ಡೀಲರ್‌ಗಳ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಆರೋಪಿಸಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಈಗಾಗಲೇ ಸಿಸಿಬಿ ಪೊಲೀಸರಿಗೆ ತಮ್ಮ ಬಳಿಯಿದ್ದ ಎಲ್ಲ ವಿವರ, ಸಾಕ್ಷ್ಯಗಳನ್ನು ನೀಡಿದ್ದಾರೆ.
Recommended Video
ಇದು ಕೆಲವು ಚಿತ್ರತಾರೆ ಹಾಗೂ ಕಿರುತೆರೆ ಕಲಾವಿದರಿಗೆ ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ 'ಆ ದಿನಗಳು' ಖ್ಯಾತಿಯ ನಟ ಚೇತನ್ ಕನ್ನಡದ ಕೆಲವು ಕಲಾವಿದರ ಮೇಲೆ ಮತ್ತೊಂದು ಆರೋಪ ಮಾಡಿದ್ದಾರೆ. ಡ್ರಗ್ಸ್ ವಿಚಾರದ ಬೆನ್ನಲ್ಲೆ ಈ ಆರೋಪವೂ ಗಂಭೀರ ಚರ್ಚೆಗೆ ಕಾರಣವಾಗಿದೆ. ಏನದು? ಮುಂದೆ ಓದಿ....

ಸಾಮಾಜಿಕ ದುಷ್ಕೃತ್ಯಗಳ ರಾಯಭಾರಿಗಳಲ್ಲವೇ?
ಪ್ರಸ್ತುತವಾಗಿ ಎಲ್ಲದ ಗಮನ ಮಾದಕವಸ್ತುಗಳನ್ನು ಖಾಸಗಿಯಾಗಿ ಬಳಸುವ ಸಿನಿಮಾ ಸ್ಟಾರ್ಸ್ ಮತ್ತು ಪ್ರಮುಖ ನಟ-ನಟಿಯರ ಹೆಸರು ಬಹಿರಂಗಪಡಿಸುವುದರ ಮೇಲಿದೆ. ಆದರೆ, ಸಾಮಾಜಿಕ ದುಷ್ಕೃತ್ಯಗಳ ರಾಯಭಾರಿಗಳನ್ನು ಮಾತ್ರ ಯಾರೂ ಬೆರಳು ಮಾಡಿ ತೋರಿಸುತ್ತಿಲ್ಲ ಏಕೆ ಎಂದು ನಟ ಚೇತನ್ ಪ್ರಶ್ನಿಸಿದ್ದಾರೆ.

ಕೇವಲ ಹಣಕ್ಕಾಗಿ ಜಾಹೀರಾತು
ಕೇವಲ ಹಣಕ್ಕಾಗಿ ಮದ್ಯ (ಸೋಡ), ಗುಟ್ಕಾ/ಪಾನ್ ಮಸಲಾ, ಜೂಜು (ರಮ್ಮಿ) ಇನ್ನು ಇತ್ಯಾದಿಗಳ ಬಗ್ಗೆ ಮುಕ್ತವಾಗಿ ಜಾಹೀರಾತು ನೀಡುವ ಸ್ಟಾರ್ಸ್‌ಗಳ ಮೇಲೆ ಬೆರಳು ತೋರಿಸದಿರುವುದು ಮೋಸವಲ್ಲವೇ? ಎಂದು ನಟ ಚೇತನ್ ಟ್ವಿಟ್ಟರ್ ಮೂಲಕ ಕೇಳಿದ್ದಾರೆ.

ಸರ್ಕಾರಕ್ಕೆ ಕೇಳಬೇಕಾದ ಪ್ರಶ್ನೆ?
ಗುಟ್ಕಾ, ಸೋಡಾ, ಮದ್ಯ ಮಾರಾಟಕ್ಕೆ ಸರ್ಕಾರನೇ ಅನುಮತಿ ಕೊಟ್ಟಿದೆ. ಜಾಹೀರಾತುಗಳು ಕಾನೂನುಬದ್ದವಾಗಿರುತ್ತವೇ. ನೀವು ಸರ್ಕಾರನ ಪ್ರಶ್ನೆ ಮಾಡಬೇಕು ಅಥವಾ ಗುಟ್ಕಾ, ಸೋಡಾ, ಮದ್ಯ ತಯಾರಿಕೆ ಘಟಕಗಳನ್ನು ಮುಚ್ಚಿಕೊಂಡು ಹೋಗಲು ಹೇಳಿ ಎಂದು ನೆಟ್ಟಿಗರು ಚೇತನ್ ಅವರಿಗೆ ತಿಳಿಸಿದ್ದಾರೆ.

ಇಂತಹ ಜಾಹೀರಾತಿನಿಂದ ಸ್ಟಾರ್ಸ್ ಹಿಂದೆ ಸರಿಯಬೇಕು
ಸಮಾಜಕ್ಕೆ ಸಿನಿಮಾದವರು ಮಾದರಿಯಾಗಬೇಕೆ ವಿನಹ ಸಮಾಜವನ್ನು ಹಾಳುಮಾಡುವ ಸಮಾಜಕಂಟಕರಾಗಬಾರದು ಎಂದು ಮತ್ತಷ್ಟು ಜನರು ಸಿನಿಮಾ ತಾರೆಯರು ಇಂತಹ ಜಾಹೀರಾತಿನಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದ್ದಾರೆ.


Click it and Unblock the Notifications











