»   » 'ನಾನು ಹಾಸ್ಯನಟ ಆಗುತ್ತೇನೆಂದು ಅಂದುಕೊಂಡಿರಲಿಲ್ಲ': ಚಿಕ್ಕಣ್ಣ

'ನಾನು ಹಾಸ್ಯನಟ ಆಗುತ್ತೇನೆಂದು ಅಂದುಕೊಂಡಿರಲಿಲ್ಲ': ಚಿಕ್ಕಣ್ಣ

Posted By:
Subscribe to Filmibeat Kannada

ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಮೂಡಿಬರುತ್ತಿರುವ 'ಜಿಗರ್ ಥಂಡ' ಚಿತ್ರ ಗಾಂಧಿನಗರದಲ್ಲಿ ಹವಾ ಸೃಷ್ಟಿ ಮಾಡಿದ್ದು, ಸಿನಿಮಾ ಹಿಟ್ ಆಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.

ಚಿತ್ರದಲ್ಲಿ ರಾಹುಲ್, ರವಿಶಂಕರ್, ಚಿಕ್ಕಣ್ಣ ಮತ್ತು ಸಂಯುಕ್ತಾ ಬೆಳವಾಡಿ ಅವರು ಪ್ರಮುಖ ಪಾತ್ರ ವಹಿಸಿದ್ದು, ಇದೇ ಶುಕ್ರವಾರ (ಜೂನ್ 24) ದಂದು ಇಡೀ ಕರ್ನಾಟಕದಾದ್ಯಂತ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ.[ಮುಂದಿನ ವಾರ ಚಿತ್ರಮಂದಿರಗಳಲ್ಲಿ 'ಜಿಗರ್ ಥಂಡ' ಹವಾ]


Actor Chikkanna speaks about Kannada movie 'Jigarthanda'

ಅಂದಹಾಗೆ ಕಾಮಿಡಿ ನಟ ಚಿಕ್ಕಣ್ಣ ಅವರು ಈ ಚಿತ್ರದಲ್ಲಿ ನಾಯಕ ನಟ ರಾಹುಲ್ ಅವರ ಗೆಳೆಯನ ಪಾತ್ರ ವಹಿಸಿದ್ದಾರೆ. ನಟ ಚಿಕ್ಕಣ್ಣ ಅವರು ಚಿತ್ರದ ಬಗ್ಗೆ ಕೆಲವು ಕುತೂಹಲಕಾರಿ ವಿಚಾರಗಳನ್ನು ಹೊರ ಹಾಕಿದ್ದಾರೆ.


"ನಾನು ರೀಮೇಕ್ ಚಿತ್ರ ಮಾಡುತ್ತೇನೆಂದು ತಿಳಿದ ಮೇಲೆ ಮೂಲ ಸಿನಿಮಾ (ತಮಿಳು 'ಜಿಗರ್ ಥಂಡ') ವನ್ನು ನೋಡಲಿಲ್ಲ. ಏಕೆಂದರೆ ಮೂಲ ಚಿತ್ರದಿಂದ ಹಾಸ್ಯವನ್ನು ನಕಲು ಮಾಡಲು ಸಾಧ್ಯವಿಲ್ಲ".[ಸಮಾಜ ಬದಲಾಗಲು ಕೊಬ್ರಿ ಮಂಜು ಸಿನಿಮಾ ಮಾಡಲ್ವಂತೆ.!]


Actor Chikkanna speaks about Kannada movie 'Jigarthanda'

"ನಾನು ನಿರ್ದೇಶಕರಿಂದ ಕಥೆ ಕೇಳಿ ನನ್ನ ಪಾತ್ರವನ್ನು ನನ್ನದೇ ಶೈಲಿಯಲ್ಲಿ ನಟಿಸಿದ್ದೇನೆ. ಮತ್ತೊಬ್ಬ ನಟನ ಪಾತ್ರದಿಂದ ಸ್ಫೂರ್ತಿ ಪಡೆಯುವುದು ನನಗೆ ಇಷ್ಟವಿಲ್ಲ. ಆದ್ದರಿಂದ ಮೂಲ ಸಿನಿಮಾ ನೋಡಲಿಲ್ಲ" ಎನ್ನುತ್ತಾರೆ ಚಿಕ್ಕಣ್ಣ.


"ಕಾಮಿಡಿ ಮಾಡೋದು ನನಗೆ ಹೇಗೆ ಸ್ಫೂರ್ತಿ ನೀಡಿತು ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ದೊರೆತಿಲ್ಲ. ನಾನು ನಟನಾಗುತ್ತೇನೆ ಅನ್ನೋ ಕಲ್ಪನೆ ಕೂಡ ಇರಲಿಲ್ಲ. ಆದ್ರಿಂದ ನಾನು ಯಾರ ನಟನಾ ಶೈಲಿಯನ್ನು ಕೂಡ ಅನುಕರಣೆ ಮಾಡಲಿಲ್ಲ' ಎಂದಿದ್ದಾರೆ ನಟ ಚಿಕ್ಕಣ್ಣ ಅವರು.['ಜಿಗರ್ ಥಂಡ' ಚಿತ್ರಕ್ಕೆ ಎಡಿಟಿಂಗ್ ಟಚ್ ಕೊಟ್ಟ ಕಿಚ್ಚ ಸುದೀಪ್]


Actor Chikkanna speaks about Kannada movie 'Jigarthanda'

ಈಗಾಗಲೇ ಸುಮಾರು 85 ಸಿನಿಮಾಗಳಲ್ಲಿ ನಟಿಸಿರುವ ಹಾಸ್ಯ ನಟ ಚಿಕ್ಕಣ್ಣ ಅವರು ಹಾಸ್ಯದ ಮೂಲಕವೇ ಕನ್ನಡ ಚಿತ್ರ ಪ್ರೇಮಿಗಳ ಮನಗೆದ್ದ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ.


'ಜಿಗರ್ ಥಂಡ' ಚಿತ್ರದಲ್ಲಿ ವಿಭಿನ್ನ ಶೈಲಿಯಲ್ಲಿ ಕಾಮಿಡಿ ಮಾಡಿರುವ ನಟ ಚಿಕ್ಕಣ್ಣ ಅವರು ಚಿತ್ರ ಬಿಡುಗಡೆಗೆ ಕಾತರದಿಂದ ಕಾದಿದ್ದಾರೆ. (ಚಿಕ್ಕಣ್ಣ ಅವರು 'ಜಿಗರ್ ಥಂಡ' ಡೈಲಾಗ್ ಅನ್ನು ಡಬ್ ಸ್ಮಾಷ್ ಮಾಡಿದ್ದು, ವಿಡಿಯೋ ಇಲ್ಲಿದೆ ನೋಡಿ)English summary
Actor Chikkanna spokes about Kannada movie 'Jigarthanda'. Kannada Actor P. Ravi Shankar, Kannada Actor Rahul, Kannada Actress Samyukta Belavadi in the lead role. The movie is directed by Shiva Ganesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada