»   » ಚಿರಂಜೀವಿ ಸರ್ಜಾ ಇನ್ ಲವ್, ಹುಡುಗಿ ಯಾರು?

ಚಿರಂಜೀವಿ ಸರ್ಜಾ ಇನ್ ಲವ್, ಹುಡುಗಿ ಯಾರು?

Posted By:
Subscribe to Filmibeat Kannada

ಇದು ಗಾಸಿಪ್ ಅಲ್ಲ ನಿಜ. ಸ್ವತಃ ಚಿರಂಜೀವಿ ಸರ್ಜಾ ಅವರೇ ತಮ್ಮ ಹೃದಯದ ಗೂಡಿನಲ್ಲಿ ಬಚ್ಚಿಟ್ಟುಕೊಂಡಿರುವ ಒಂದು ಸತ್ಯವನ್ನು ಹೊರಹಾಕಿದ್ದಾರೆ. ಪ್ರೀತಿ ಪ್ರೇಮವನ್ನು ಎಷ್ಟು ದಿನ ಮುಚ್ಚಿಟ್ಟುಕೊಳ್ಳಲು ಸಾಧ್ಯ? ಅದನ್ನು ಮುಚ್ಚಿಟ್ಟುಕೊಂಡಷ್ಟೂ ತಳಮಳ ಹೆಚ್ಚು ತಾನೆ. ಈಗವರು ತಮ್ಮ ಮನದಾಳದ ಪ್ರೀತಿಯನ್ನು ಹೊರಹಾಕಿ ಸ್ವಲ್ಪ ಹಗುರಾಗಿದ್ದಾರೆ.

ತಾನೊಬ್ಬ ಹುಡುಗಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಆ ಹುಡುಗಿ ಹೆಸರನ್ನು ಮಾತ್ರ ಬಹಿರಂಗಪಡಿಸಿಲ್ಲ. ಅವರ ಮಾನದಾಳದ ಮಾತುಗಳ ಅಕ್ಷರ ರೂಪ ಇಲ್ಲಿದೆ ನೋಡಿ, "Hi guys i would love to share this movement with u all is that "IM IN LOVE" i never knew that ill fall in love... Wish me luck..." [ಸದ್ಯಕ್ಕೆ ಕನ್ನಡದಲ್ಲಿ ಬಿಜಿಯೆಸ್ಟ್ ಹೀರೋ ಯಾರು?]

Chiranjeevi Sarja

ಇದು ನಿಜಕ್ಕೂ ಪ್ರೀತಿನೋ ಅಥವಾ ಅವರ ಮುಂಬರುವ ಚಿತ್ರದ ಹೆಸರೋ ಏನೋ ಗೊತ್ತಿಲ್ಲ. "IM IN LOVE" ಎಂಬುದನ್ನು ಬೋಲ್ಡ್ ಆಗಿ ಹಾಕಿರುವುದು, ಎಲ್ಲವನ್ನೂ ಒಗಟೊಗಟಾಗಿ ಹೇಳಿರುವುದು ಅವರ ಅಭಿಮಾನಿಗಳು ತಲೆಕೆರೆದುಕೊಳ್ಳುವಂತಾಗಿದೆ.

ಚಿರು ಅಭಿಮಾನಿಗಳು ಸಾಕಷ್ಟು ಮಂದಿ ಅತ್ತಿಗೆ ಹೆಸರು ಹೇಳಿ ಅಣ್ಣ ಎಂದು ಕೇಳಿದ್ದಾರೆ. ಆದರೂ ಚಿರು ಅವರದು ಮಾತ್ರ ಮೌನವೇ ಉತ್ತರ. ಅವರ ಫೇಸ್ ಬುಕ್ ಗೆ ಒಮ್ಮೆ ಭೇಟಿ ನೀಡಿ ನಿಮಗೂ ಪ್ರೀತಿಯ ಸಿಂಚನವಾಗುತ್ತದೆ. [ಮೇಘನಾ, ಚಿರಂಜೀವಿ ಸರ್ಜಾ ಮದುವೆ ನಿಜವೇ?]

ಅಂದಹಾಗೆ ಈ ಹಿಂದೆ ಚಿರಂಜೀವಿ ಸರ್ಜಾ ಅವರು ಮೇಘನಾ ರಾಜ್ ಅವರ ಕೈಹಿಡಿಯುತ್ತಾರೆ ಎಂಬ ಸುದ್ದಿ ಸ್ಫೋಟಗೊಂಡಿತ್ತು. ಬಳಿಕ ಮೇಘನಾ ಅವರ ತಂದೆ ಸುಂದರ್ ರಾಜ್ ಅವರು ಚಿರು ಜೊತೆಗಿನ ತಮ್ಮ ಪುತ್ರಿಯ ವಿವಾಹದ ಸುದ್ದಿಯನ್ನು ತಳ್ಳಿಹಾಕಿ ವಿವಾದಕ್ಕೆ ತೆರೆ ಎಳೆದಿದ್ದರು. (ಒನ್ಇಂಡಿಯಾ ಕನ್ನಡ)

English summary
Kannada actor Chiranjeevi Sarja is in love! The actor officially announced his love and saying, "Hi guys i would love to share this movement with u all is that "IM IN LOVE" i never knew that ill fall in love... Wish me luck..."
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada