For Quick Alerts
  ALLOW NOTIFICATIONS  
  For Daily Alerts

  ಒಡೆಯರ್, 'ನಟರಾಜ ಸರ್ವಿಸ್' ಸ್ಟೇಷನ್ ಗೆ, ವಿಲನ್ ಫಿಕ್ಸ್!

  By Suneetha
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅರ್ಪಿಸಲಿರುವ, ಎನ್ ಎಸ್ ರಾಜಕುಮಾರ್ ನಿರ್ಮಾಣದ, ನಿರ್ದೇಶಕ ಪವನ್ ಒಡೆಯರ್ ಅವರು ಆಕ್ಷನ್-ಕಟ್ ಹೇಳಿರುವ 'ನಟರಾಜ ಸರ್ವಿಸ್' ಚಿತ್ರಕ್ಕೆ ತಮಿಳು ನಟ ಸಿ.ಎಂ ಬಾಲ ಅವರು ಖಳನಟನಾಗಿ ಆಯ್ಕೆಯಾಗಿದ್ದಾರೆ.

  'ನನಗೆ ಜನಪ್ರಿಯ ನಟನ ಅವಶ್ಯಕತೆ ಇತ್ತು. ಇದೀಗ ಆ ಪಾತ್ರಕ್ಕೆ ನಟ ಬಾಲ ಅವರು ಸರಿಯಾಗಿ ಹೊಂದಾಣಿಕೆಯಾದರು' ಎಂದು ನಿರ್ದೇಶಕ ಪವನ್ ಒಡೆಯರ್ ಅವರು ನುಡಿಯುತ್ತಾರೆ.['ಜೆಸ್ಸಿ' ಮುಗೀತು, 'ನಟರಾಜ ಸರ್ವಿಸ್' ಸ್ಟೇಷನ್ ಓಪನ್ ಆಯ್ತು! ]

  ಇದೀಗ ನಟ ಶರಣ್ ಅವರಿಗೆ ಎದುರಾಗಿ ವಿಲನ್ ಪಾತ್ರದಲ್ಲಿ ಮಿಂಚಲಿರುವ ನಟ ಸಿ.ಎಂ ಬಾಲ ಅವರು ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಸಿದ್ದಿ ಪಡೆದ ನಟ. ತಮಿಳು ನಟ ರಾಘವ ಲಾರೆನ್ಸ್ ನಿರ್ದೇಶಿಸಿ ನಟಿಸಿದ್ದ 'ಕಾಂಚನಾ 2' ಚಿತ್ರದಲ್ಲಿ ಬಾಲ ಅವರ ಅಮೋಘ ನಟನೆ ಗಮನ ಸೆಳೆದಿತ್ತು.

  'ಕಾಂಚನಾ 2' ಚಿತ್ರದಲ್ಲಿ ನನ್ನ ನಟನೆಯನ್ನು ನೋಡಿ ನಿರ್ದೇಶಕ ಪವನ್ ಒಡೆಯರ್ ಅವರು 'ನಟರಾಜ ಸರ್ವಿಸ್' ಚಿತ್ರಕ್ಕೆ ಆಯ್ಕೆ ಮಾಡಿದ್ದಾರೆ. ಸ್ಯಾಂಡಲ್ ವುಡ್ ನ ಕಾಮಿಡಿ ನಟ ಶರಣ್ ಅವರ ಸಿನಿಮಾಗಳನ್ನು ಒಂದೆರಡು ಬಾರಿ ನೋಡಿದ್ದೇನೆ. ಶರಣ್ ಅವರು ಒಳ್ಳೆ ಮನರಂಜನೆ ನೀಡುವ ನಟ.

  ಕಾಮಿಡಿ ಟ್ರ್ಯಾಕ್ ಇರುವ ಸಿನಿಮಾದಲ್ಲಿ ಖಳನಟನಾಗಿ ಅಭಿನಯಿಸುವುದು ತುಂಬಾ ಸವಾಲು. ಕನ್ನಡ ಚಿತ್ರ 'ನಟರಾಜ ಸರ್ವಿಸ್'ನಲ್ಲಿ ನಟಿಸಲು ತುಂಬಾ ಕಾತರನಾಗಿದ್ದೇನೆ. ಎಂದು ಸಿ.ಎಂ ಬಾಲ ಅವರು ಹೇಳುತ್ತಾರೆ.['ನಟರಾಜ ಸರ್ವೀಸ್' ಸ್ಟೇಷನ್ ನಲ್ಲಿ ಶರಣ್ ಜೊತೆ ಮಯೂರಿ]

  ನಿರ್ದೇಶಕ ಬಾಲ ಅನಂತರಾಜು ಆಕ್ಷನ್-ಕಟ್ ಹೇಳಿರುವ, ರಿಯಲ್ ಸ್ಟಾರ್ ಉಪೇಂದ್ರ ಅವರ 'ಕಲ್ಪನಾ 2' ಚಿತ್ರದಲ್ಲೂ ಬಾಲ ಅವರು ಕಾಣಿಸಿಕೊಳ್ಳಲಿದ್ದು, ತಮಿಳು 'ಕಾಂಚನಾ 2' ಚಿತ್ರದ ರಿಮೇಕ್ ಆಗಿದೆ. ಈ ಚಿತ್ರದಲ್ಲಿ ತಮಿಳು ಮೂಲದಲ್ಲಿ ನಟಿಸಿದ್ದ ಪಾತ್ರವನ್ನೇ ಕನ್ನಡದಲ್ಲೂ ಬಾಲ ಅವರು ನಿರ್ವಹಿಸಲಿದ್ದಾರೆ.

  ಅಂದಹಾಗೆ ಕಾಮಿಡಿ ಕಿಂಗ್ ಶರಣ್, 'ಅಶ್ವಿನಿ ನಕ್ಷತ್ರ' ಖ್ಯಾತಿಯ ನಟಿ ಮಯೂರಿ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ನಟರಾಜ ಸರ್ವಿಸ್' ಚಿತ್ರದ ಚಿತ್ರೀಕರಣ ನವೆಂಬರ್ 20 ರಿಂದ ಪ್ರಾರಂಭವಾಗಲಿದೆ.

  English summary
  Director Pavan Wadeyar has finalised C M Bala as the antagonist for his upcoming kannada movie 'Nataraja Service', presented by Puneeth Rajkumar and produced by NS Rajkumar. Bala will be seen opposite Sharan who plays the lead in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X