For Quick Alerts
  ALLOW NOTIFICATIONS  
  For Daily Alerts

  ಶಿವಾಜಿ ಮಿಲಿಟರಿ ಹೋಟೆಲ್ ಊಟಕ್ಕೆ ಮನಸೋತ ನಟ ಆಶಿಷ್ ವಿದ್ಯಾರ್ಥಿ

  By ಫಿಲ್ಮಿಬೀಟ್ ಡೆಸ್ಕ್
  |

  ನಟ ಆಶಿಷ್ ವಿದ್ಯಾರ್ಥಿ ಭಾರತದ ಅತ್ಯುತ್ತಮ ಪೋಷಕರ ನಟರಲ್ಲೊಬ್ಬರು. ಸ್ಯಾಂಡಲ್ ವುಡ್ ನಿಂದ ಹಿಡಿದು, ಟಾಲಿವುಡ್, ಬಾಲಿವುಡ್, ಮಲಯಾಳಂ, ತಮಿಳು ಹೀಗೆ ಪ್ರತಿ ಭಾಷೆಯ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅಭಿನಯದ ಮೂಲಕ ಜನರ ಮನಗೆದ್ದ ನಟ ಆಶಿಷ್ ಅವರು ಆಹಾರ ಪ್ರಿಯರು ಕೂಡ ಹೌದು.

  ಆಶಿಷ್ ವಿದ್ಯಾರ್ಥಿ ಆಹಾರ ಪ್ರೀಯತೆಗೆ ಅವರು ತಮ್ಮ ಯೂಟ್ಯೂಬ್ ನಲ್ಲಿ ಹಂಚಿಕೊಳ್ಳುವ ಆಹಾರದ ವಿಡಿಯೋಗಳೇ ಸಾಕ್ಷಿ. ಬೆಂಗಳೂರು ಸೇರಿದಂತೆ ನಾನಾ ಕಡೆ ಪ್ರಯಾಣ ಮಾಡುವ ಆಶಿಷ್, ಅಲ್ಲಿನ ಪ್ರಸಿದ್ಧ ಸ್ವಾದಿಷ್ಟಕರ ಊಟ ಸವಿಯುವುದು ಮತ್ತು ಅದರ ವಿಡಿಯೋ ಮಾಡಿ ಸಾಮಾಜಿಕ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

  ಕಳೆದ ಬಾರಿ ಮುದ್ದೆ, ಮಟನ್ ಸಾರು ಊಟ ಮಾಡಿ ಬೆಂಗಳೂರಿನ 'ಗೌಡರ ಮುದ್ದೆ ಮನೆ'ಯ ಊಟದ ಪರಿಚಯ ಮಾಡಿಕೊಟ್ಟು ಸೂಪರ್ ಎಂದಿದ್ದ ಆಶಿಶ್ ಅವರು ಇದೀಗ ಸಂಪೂರ್ಣ ಮಾಂಸಾಹಾರ ಊಟದ ರುಚಿಯನ್ನು ಸವಿದು ತೃಪ್ತಿಪಟ್ಟಿರುವುದಲ್ಲದೇ ಆ ಸಂತಸವನ್ನು ಅಭಿಮಾನಿಗಳೊಟ್ಟಿಗೆ ಶೇರ್ ಮಾಡಿದ್ದಾರೆ. ಈ ಬಾರಿ ಅವರು ಬೆಂಗಳೂರಿನ ಶಿವಾಜಿ ಮಿಲ್ಟ್ರಿ ಹೋಟೆಲ್‌ಗೆ ಭೇಟಿ ನೀಡಿ ಅಲ್ಲಿನ ಆಹಾರದ ರುಚಿ, ವಿಶೇಷತೆಯನ್ನು ವಿವರಿಸಿದ್ದಾರೆ.


  ಬೆಂಗಳೂರಿನ ಜಯನಗರ ಎಂಟನೇ ಬ್ಲಾಕ್‌ನಲ್ಲಿರುವ ಶಿವಾಜಿ ಮಿಲಿಟರಿ ಹೋಟೆಲ್ ನಲ್ಲಿ ಆಹಾರ ಸವಿದ ಅವರು ಊಟ ಮಾಡುತ್ತಲೇ ಊಟ ಯಾವ ರೀತಿಯಲ್ಲಿ ಇದೆ ಎಂಬುದನ್ನು ವಿವರಿಸಿದ್ದಾರೆ. ಜನಪ್ರಿಯ ಶಿವಾಜಿ ಮಿಲಿಟರಿ ಹೋಟೆಲ್ ನಲ್ಲಿ ದೊನ್ನೆ ಬಿರಿಯಾನಿ, ಚಿಕನ್ ಕರಿ, ಮಟನ್ ಸುಕ್ಕಾ, ಪಾಯಾ ಸೂಪ್ ಹಲವು ಫುಡ್ ಸವಿದು ವಾವ್ ಎಂದಿದ್ದಾರೆ.

  ಶಿವಾಜಿ ಮಿಲ್ಟ್ರಿ ಹೋಟೆಲ್ ಒಂದು ಮಾತ್ರವಲ್ಲ, ಬೆಂಗಳೂರಿನ ಹಲವು ಹೋಟೆಲ್‌ಗಳಿಗೆ ಆಶಿಷ್ ವಿದ್ಯಾರ್ಥಿ ಇತ್ತೀಚಿನ ದಿನಗಳಲ್ಲಿ ಭೇಟಿ ನೀಡಿದ್ದು ಆಹಾರ ಸವಿದು ವಾವ್ ಎಂದಿದ್ದಾರೆ. ಬೆಂಗಳೂರು ಮೂಲದ ಮತ್ತೊಬ್ಬ ಆಹಾರ ಪ್ರಿಯ ಹಾಗೂ ಫ್ಲೂಡ್ ವ್ಲಾಗರ್ ಕೃಪಾಲ್ ಅಮಾನ್ ಜೊತೆ ಸೇರಿಯೂ ಕೆಲವು ಹೋಟೆಲ್‌ಗಳಿಗೆ ಆಶಿಷ್ ವಿದ್ಯಾರ್ಥಿ ಭೇಟಿ ನೀಡಿ ಆಹಾರ ಸವಿದಿದ್ದರು.

  ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಆಶಿಷ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಹುಭಾಷೆಗಳ ಚಿತ್ರರಂಗಗಳಲ್ಲಿ ಕೆಲಸ ಮಾಡಿರುವ ಆಶಿಷ್ ವಿದ್ಯಾರ್ಥಿ ಸುಮಾರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

  ಹಿಂದಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ ದೆಹಲಿ ಮೂಲದ ನಟ ಆಶಿಷ್ ವಿದ್ಯಾರ್ಥಿ ಬಳಿಕ ಕಾಣಿಸಿಕೊಂಡದ್ದು ತೆಲುಗು ಸಿನಿಮಾಗಳಲ್ಲಿ. ಸ್ಯಾಂಡಲ್ ವುಡ್ ಗೆ ಎಕೆ 47 ಸಿನಿಮಾ ಮೂಲಕ ಕನ್ನಡಾಭಿಮಾನಿಗಳ ಮೆಚ್ಚುಗೆ ಗಳಿಸಿದರು. ಈ ಸಿನಿಮಾದ ಬಳಿಕ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಅಭಿನಯ ಚತುರತೆ ಮೆರೆದರು. ಜೊತೆಗೆ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿಯೂ ಮಿಂಚಿದರು. ಇತ್ತೀಚೆಗೆ ಯಾವುದೇ ಕನ್ನಡದ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ ಎಂಬುದು ಕೊಂಚ ಬೇಸರದ ಸಂಗತಿ.

  English summary
  Famous actor Ashish Vidyarthi visited Shivaji Miltary hotel in Bengaluru. tasted their iconic Biriyani and other food items.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X