For Quick Alerts
  ALLOW NOTIFICATIONS  
  For Daily Alerts

  ಮದುವೆ ಯಾವಾಗ? ಡಾಲಿ ಧನಂಜಯ್ ಕೊಟ್ಟರು ಉತ್ತರ!

  |

  ಡಾಲಿ ಧನಂಜಯ್ ನಟನೆಯ ಹೊಸ ಸಿನಿಮಾ 'ಜಮಾಲಿಗುಡ್ಡ' ಇದೇ ಡಿಸೆಂಬರ್ 30 ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರ ಕಾರ್ಯದಲ್ಲಿ ಧನಂಜಯ್ ಪಾಲ್ಗೊಂಡಿದ್ದಾರೆ.

  ಇತ್ತೀಚೆಗೆ ನಡೆದ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಡಾಲಿ ಧನಂಜಯ್ ಸೇರಿದಂತೆ ಚಿತ್ರದ ತಾರಾಗಣ, ನಿರ್ದೇಶಕರು ಹಾಗೂ ಇತರೆ ತಾಂತ್ರಿಕವರ್ಗದವರು ವೇದಿಕೆ ಹಂಚಿಕೊಂಡು ಸಿನಿಮಾ ನೋಡುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡರು.

  ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಡಾಲಿ ಧನಂಜಯ್, ತಮ್ಮನ್ನು ಇಲ್ಲಿಯವರೆಗೆ ತಂದ ತಮ್ಮ ಅಭಿಮಾನಿಗಳಿಗೆ ಮತ್ತೊಮ್ಮೆ ಧನ್ಯವಾದ ಅರ್ಪಿಸಿದರು. ಜೊತೆಗೆ 'ಜಮಾಲಿಗುಡ್ಡ'ದಲ್ಲಿ ಹಿರೋಷಿಮಾ ಹೆಸರಿನ ಪಾತ್ರದಲ್ಲಿ ನಟಿಸಿದ್ದು, ಇದೊಂದ ಭಿನ್ನವಾದ ಸಿನಿಮಾ ಎಂದರು.

  ಮಂಕಿ ಸೀನ, ಡಾಲಿ, ರತ್ನಾಕರ, ಮಿಠಾಯಿ ಸೀನ ಹೀಗೆ ಮಾಡುವ ಪ್ರತಿ ಪಾತ್ರವೂ ಭಿನ್ನವಾಗಿರಬೇಕು ಎಂಬ ಆಸೆಯಿಂದಲೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾ ಬಂದಿದ್ದೇನೆ. ಹಾಗೆಯೇ 'ಜಮಾಲಿಗುಡ್ಡ' ಸಿನಿಮಾದ ಹಿರೋಷಿಮಾ ಪಾತ್ರವೂ ಜನರಿಗೆ ಇಷ್ಟವಾಗಲಿ ಎಂಬ ಆಸೆ ತಮ್ಮದು ಎಂದರು ಡಾಲಿ.

  ಕಾರ್ಯಕ್ರಮದ ನಿರೂಪಣೆ ಮಾಡಿದ ನಿರೂಪಕಿ ಅನುಶ್ರೀ, ''ನಿಮ್ಮ ಗೆಳೆಯ ಚಿಟ್ಟೆ, ಇತ್ತೀಚೆಗಷ್ಟೆ ಮದುವೆಯಾಗುತ್ತಿರುವುದಾಗಿ ಘೋಷಿಸಿದ್ದಾರೆ. ನೀವು ಯಾವಾಗ ಮದುವೆಯಾಗ್ತೀರ ಎಂದು ಎಲ್ಲರೂ ಕೇಳುತ್ತಿದ್ದಾರೆ'' ಎಂದರು.

  ಇದಕ್ಕೆ ಉತ್ತರಿಸಿದ ನಟ ಡಾಲಿ ಧನಂಜಯ್ ''ನಾನು ಮದುವೆ ಆಗ್ಬೇಕಾ? ಎಂದು ಅಭಿಮಾನಿಗಳನ್ನೇ ಕೇಳಿದರು. ಅಭಿಮಾನಿಗಳಲ್ಲಿ ಕೆಲವರು ಮದುವೆ ಆಗಿ ಎಂದರೆ ಕೆಲವರು ಬೇಡ ಎಂದರು. ಕೊನೆಗೆ ಡಾಲಿ, ''ಅನುಶ್ರೀ ಅವರು ಮದುವೆ ಆದ ಬಳಿಕ ನಾನು ಮದುವೆ ಆಗ್ತೀನಿ ಎಂದರು. ಅನುಶ್ರೀ ತಮ್ಮ ಮದುವೆ ಘೋಷಿಸಿದ ಕೂಡಲೇ ನಾನು ನನ್ನ ಮದುವೆ ಯಾವಾಗ ಎಂಬುದನ್ನು ಹೇಳ್ತೀನಿ'' ಎಂದರು.

  ಡಾಲಿಯ ಉತ್ತರ ಕೇಳಿ ಶಾಕ್ ಆದ ಅನುಶ್ರೀ, ''ಹಾಗಾದರೆ ನೀವು ಬಹಳ ಸಮಯ ಕಾಯಬೇಕಾಗುತ್ತದೆ'' ಎಂದು ಮಾತನ್ನು ಮತ್ತೆ 'ಜಮಾಲಿಗುಡ್ಡ' ಸಿನಿಮಾದ ಕಡೆಗೆ ತಿರುಗಿಸಿದರು.

  'ಜಮಾಲಿಗುಡ್ಡ' ಸಿನಿಮಾ ಡಿಸೆಂಬರ್ 30 ರಂದು ತೆರೆಗೆ ಬರಲಿದ್ದು, ಸಿನಿಮಾದಲ್ಲಿ ಅದಿತಿ ಪ್ರಭುದೇವ್ ನಾಯಕಿಯಾಗಿ ನಟಿಸಿದ್ದಾರೆ.

  English summary
  Actor Daali Dhananjay talked about his marriage. He said after Anushree he will marry someone. But Anushree said then he should wait for very long
  Monday, December 26, 2022, 23:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X