For Quick Alerts
  ALLOW NOTIFICATIONS  
  For Daily Alerts

  'ಡಿ-ಬಾಸ್' ದರ್ಶನ್ ದಂಪತಿಗಿಂದು ಖುಷಿಯ ವಿಚಾರ

  By Bharath Kumar
  |
  ದರ್ಶನ್ ದಂಪತಿಯಿಂದ ಬಂತು ಒಂದೊಳ್ಳೆ ಸುದ್ದಿ | FIlmibeat Kannada

  ಒಂದು ಕಡೆ ಪೌರಾಣಿಕ ಸಿನಿಮಾ ಕುರುಕ್ಷೇತ್ರದಲ್ಲಿ ದುರ್ಯೋಧನ ಪಾತ್ರದಲ್ಲಿ ಅಭಿನಯಿಸಿರುವ ಸಂತಸ. ಮತ್ತೊಂದೆಡೆ ಯಜಮಾನ ಚಿತ್ರದಲ್ಲಿ ಅಭಿನಯಿಸುತ್ತಿರುವ ಸಂತಸ. ಇವರೆಡು ಖುಷಿಯಲ್ಲಿರುವ ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಸಂತೋಷ ಸುದ್ದಿ ಒದಗಿದೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮರೆಯಲಾಗದ ದಿನ. ಅದೇ ರೀತಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿಗೂ ಇದು ಮರೆಯಲಾಗದ ದಿನ. ಹೌದು, ಮೇ 19 ದರ್ಶನ್ ದಂಪತಿಗೆ ವಿಶೇಷ ದಿನ. ಯಾಕಂದ್ರೆ, ಇದು ಇವರಿಬ್ಬರು ಮದುವೆಯಾದ ಶುಭ ದಿನ.

  ದರ್ಶನ್ ಮತ್ತು ವಿಜಯಲಕ್ಷ್ಮಿ ಇಬ್ಬರು ಪರಸ್ಪರ ಪ್ರೀತಿಸಿ, ಮನೆಯವರ ಸಮ್ಮುಖದಲ್ಲಿ ಮದುವೆ ಆಗಿದ್ದರು. ಈ ನಡುವೆ ಸಾಕಷ್ಟು ಏಳು-ಬೀಳುಗಳು ಇವರ ಜೀವನದಲ್ಲಿ ನಡೆದಿದೆ. ಮುಂದೆ ಓದಿ.....

  18ನೇ ವರ್ಷದ ಸಂಭ್ರಮ

  18ನೇ ವರ್ಷದ ಸಂಭ್ರಮ

  ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿ ಮದುವೆಯಾಗಿ ಇಂದಿಗೆ 17 ವರ್ಷ ಕಂಪ್ಲೀಟ್ ಆಗಿದ್ದು, 18ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮೇ 19, 2000ನೇ ಇಸವಿಯಲ್ಲಿ ಇವರಿಬ್ಬರ ವಿವಾಹ ನಡೆದಿತ್ತು.

  ಧರ್ಮಸ್ಥಳದಲ್ಲಿ ಮದುವೆ ಆಗಿದ್ದರು

  ಧರ್ಮಸ್ಥಳದಲ್ಲಿ ಮದುವೆ ಆಗಿದ್ದರು

  ಅಂದ್ಹಾಗೆ, ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ಮದುವೆ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತ್ತು. ಕುಟುಂಬಸ್ಥರು, ಚಿತ್ರತಾರೆಯರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು.

  ದರ್ಶನ್ ಅವರ ಮಗ ವಿನೀಶ್

  ದರ್ಶನ್ ಅವರ ಮಗ ವಿನೀಶ್

  ನಟ ದರ್ಶನ್ ದಂಪತಿಗೆ ವಿನೀಶ್ ಎಂಬ ಒಬ್ಬ ಮಗ ಇದ್ದಾರೆ. ವಿನೀಶ್ ದರ್ಶನ್ ಅಭಿನಯದ 'ಐರಾವತ' ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಅಭಿನಯಿಸಿದ್ದರು.

  ಅಭಿಮಾನಿಗಳಿಂದ ಶುಭಾಶಯ

  ಅಭಿಮಾನಿಗಳಿಂದ ಶುಭಾಶಯ

  ತಮ್ಮ ನೆಚ್ಚಿನ ನಟನ ವಿವಾಹ ಮಹೋತ್ಸವಕ್ಕೆ ಅಭಿಮಾನಿಗಳು ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಶುಭ ಕೋರಿದ್ದಾರೆ. ಎನಿ ವೇ ನಮ್ಮ ಕಡೆಯಿಂದಲೂ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯ.

  English summary
  Challenging Star Darshan and his wife Vijayalakshmi Celebrated their 18th Anniversary Today. They tied the knot in 2000. They have one child named Vineesh

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X