For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ವಿತರಕರ ಮೇಲೆ ಫುಲ್ ಗರಂ ಆದ ನಟ ದರ್ಶನ್

  |

  'ರಾಬರ್ಟ್' ಸಿನಿಮಾ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರು ಸಿನಿಮಾ ವಿತರಕರ ಮೇಲೆ ಗರಂ ಆದರು.

  ನಿರ್ಮಾಪಕರಿಗೆ ಎಚ್ಚರಿಕೆ ಕೊಟ್ಟು ಸಿನಿಮಾ ವಿತರಕರ ವಿರುದ್ಧ ಗರಂ ಆದ ದರ್ಶನ್ | Filmibeat Kannada

  ಸಿನಿಮಾ ವಿತರಕರು ಸಿನಿಮಾದ ಲಾಭದ ಬಹುಭಾಗವನ್ನು ಪಡೆದುಕೊಳ್ಳುತ್ತಿದ್ದಾರೆ. ಸಿನಿಮಾ ಮಾಡಿದ ನಿರ್ಮಾಪಕನಿಗೆ, ಚಿತ್ರಮಂದಿರ ಕಟ್ಟಿದ ಮಾಲೀಕರಿಗೆ ಮತ್ತು ಪ್ರೇಕ್ಷಕನಿಗೆ ದೊರಕಬೇಕಾದ ಲಾಭ ವಿತರಕರ ಜೇಬು ಸೇರುತ್ತಿದೆ ಎಂದರು ದರ್ಶನ್.

  ತಮ್ಮ ಸಿನಿಮಾ ಮಾಡಲು ಬರುವ ನಿರ್ಮಾಪಕರಿಗೆ ಷರತ್ತು ಹಾಕಿದ ದರ್ಶನ್

  ''ನಮ್ಮ 'ಒಡೆಯ' ಸಿನಿಮಾದ ನಾಲ್ಕು ಕೋಟಿ ಈಗಲೂ ಬಾಕಿ ಇದೆ. ಒಬ್ಬ ಪ್ರಖ್ಯಾತ ವಿತರಕ ಈಗಲೂ ನಾಲ್ಕು ಕೋಟಿ ಹಣ ನೀಡಬೇಕು. ನಮ್ಮ ನಿರ್ಮಾಪಕ ಸಂದೇಶ್ ನಾಗರಾಜ್‌ಗೆ ಅದನ್ನು ವಾಪಸ್ ಪಡೆಯಲು ಆಗಿಲ್ಲ. 'ಒಡೆಯ'ಗೆ ಒಳ್ಳೆ ರೇಟು ಬಂದಿತ್ತು, ನಾನು ಸಂದೇಶ್‌ಗೆ ಹೇಳಿದೆ ಕೊಟ್ಟುಬಿಡು ಎಂದು ಅವನು ಅವರ ತಂದೆ ಮಾತು ಕೇಳಿದ' ಎಂದರು ದರ್ಶನ್.

  'ಇಲ್ಲಿರುವ ಡಿಸ್ಟ್ರಿಬ್ಯೂಟರ್‌ಗಳಿಂದ ನಮಗೆ ಹಣ ವಾಪಸ್ಸು ಪಡೆಯುವುದು ಬರುವುದಿಲ್ಲ. ಕೇಸಿಗೆ, ಬೆದರಿಕೆಗೆ ಅವರು ಬಗ್ಗುವುದಿಲ್ಲ. ಅವರು ಎಲ್ಲೋ ಕೂತಿರ್ತಾರೆ, ನಾವು ಸಿನಿಮಾ ಘೋಷಣೆ ಮಾಡ್ತೀವಿ. ಬರ್ತಾರೆ ಏನೋ ಮಾತಾಡ್ತಾರೆ ಸಿನಿಮಾ ತಗೋಂಡು ಹೋಗ್ತಾರೆ' ಎಂದರು ದರ್ಶನ್.

  'ಒಡೆಯ ಸಿನಿಮಾ ಒಂದರಿಂದಲೇ ನಾಲ್ಕು ಕೋಟಿ ಬರಬೇಕು. 'ಯಜಮಾನ' ಸಿನಿಮಾದಲ್ಲಿ ನಮ್ಮನ್ನು ಎಷ್ಟು ಯೇಮಾರಿಸಿದ್ದಾರೆ ಎಂಬುದು ಗೊತ್ತಿದೆ. ಪುಗಸಟ್ಟೆ ಯಾರೂ ವಿತರಣೆ ಮಾಡುವುದಿಲ್ಲ. ಅದಕ್ಕೆ ಕಮೀಷನ್ ಇದೆ. ನಾವು ಇಲ್ಲಿ ಒದ್ದಾಡುತ್ತಿರುತ್ತೀವಿ. ಆದರೆ ಅವರು ಕೋಟಿಗಟ್ಟಲೆ ಹೊಡೆದುಕೊಂಡು ಹೋಗ್ತಾರೆ ನಮಗೆ ಗೊತ್ತೇ ಆಗೊಲ್ಲ' ಎಂದರು ದರ್ಶನ್.

  'ಚಿತ್ರಮಂದಿರದವರ ಬಳಿ ಹತ್ತು ರೂಪಾಯಿ ಬಾಡಿಗೆ ಮಾತನಾಡಿ, ನಮ್ಮ ಬಳಿ ಇಪ್ಪತ್ತು ರೂಪಾಯಿ ಬಾಡಿಗೆ ಎಂದು ಲೆಕ್ಕ ಹೇಳುತ್ತಾರೆ. ಮಧ್ಯದಲ್ಲಿ ಅವರು ಹತ್ತು ರೂಪಾಯಿ ಹೊಡೆಯುತ್ತಾರೆ. 'ರಾಬರ್ಟ್' ಸಿನಿಮಾವನ್ನು ನಾವು ನೇರವಾಗಿ ಚಿತ್ರಮಂದಿರದವರ ಬಳಿ ಮಾತನಾಡಿ ಪ್ರದರ್ಶನ ಮಾಡಿದ್ದರಿಂದ ಹಣ ಉಳಿಯಿತು' ಎಂದರು ದರ್ಶನ್.

  English summary
  Actor Darshan angry on movie distributors. He said distributors take away most the profit of a movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X