twitter
    For Quick Alerts
    ALLOW NOTIFICATIONS  
    For Daily Alerts

    ಪತ್ನಿಯಿಂದ ದೂರು, ವಿಚಾರಣೆಗೆ ಪೊಲೀಸ್ ಠಾಣೆಗೆ ಬಂದ ದರ್ಶನ್

    By Harshitha
    |

    ಎರಡು ದಿನಗಳ ಹೈಡ್ರಾಮಾ ನಂತರ ಪೊಲೀಸ್ ವಿಚಾರಣೆಗೆ ನಟ ದರ್ಶನ್ ಎಸಿಪಿ ಕಛೇರಿಗೆ ಹಾಜರ್ ಆಗಿದ್ದಾರೆ.

    ಮೈಸೂರಿನಲ್ಲಿ ತಂಗಿದ್ದ ದರ್ಶನ್ ಇಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಬೆಂಗಳೂರಿನ ತ್ಯಾಗರಾಜನಗರದಲ್ಲಿರುವ ಎಸಿಪಿ ಕಛೇರಿಗೆ ತಮ್ಮ ಆಪ್ತರೊಂದಿಗೆ ಆಗಮಿಸಿದರು. [ದರ್ಶನ್ ಕೌಟುಂಬಕ ಕಲಹದ ಎಲ್ಲಾ ವರದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ]

    actor-darshan-appears-before-bengaluru-police-for-interrogation

    ಬೆಂಗಳೂರಿನ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಕುಮಾರ್ ನೇತೃತ್ವದಲ್ಲಿ ಇಂದು ವಿಚಾರಣೆ ನಡೆಯಲಿದೆ. ಹೊಸಕೆರೆಹಳ್ಳಿಯಲ್ಲಿರುವ ಪ್ರೆಸ್ಟೀಜ್ ಸೌತ್ ರಿಡ್ಜ್ ಅಪಾರ್ಟ್ ಮೆಂಟ್ ನಲ್ಲಾದ ಗಲಾಟೆ ಬಗ್ಗೆ ಪೊಲೀಸರು ದರ್ಶನ್ ರವರಿಂದ ವಿವರಣೆ ಪಡೆಯಲಿದ್ದಾರೆ. [ವಿಜಯಲಕ್ಷ್ಮಿ-ದರ್ಶನ್ ಕೇಸನ್ನು ಕೈಗೆತ್ತಿಕೊಂಡ ಮಹಿಳಾ ಆಯೋಗ]

    ಮಾರ್ಚ್ 9 ರಂದು ಪ್ರೆಸ್ಟೀಜ್ ಸೌತ್ ರಿಡ್ಜ್ ಅಪಾರ್ಟ್ ಮೆಂಟ್ ಗೆ ಪಾನಮತ್ತರಾಗಿ ಬಂದು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಅಂತ ಅಲ್ಲಿನ ಭದ್ರತಾ ಸಿಬ್ಬಂದಿ ಬಿ.ಎಸ್.ದೇವರಾಜ್ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದರು. [ನಟ ದರ್ಶನ್-ವಿಜಯಲಕ್ಷ್ಮಿ ಸಂಸಾರದಲ್ಲಿ ಮತ್ತೆ ಸುಂಟರಗಾಳಿ]

    'ಅಪಾರ್ಟ್ ಮೆಂಟ್ ನಲ್ಲಿ ದಾಂಧಲೆ ಮಾಡಿರುವ ಬಗ್ಗೆ ದರ್ಶನ್ ರನ್ನ ಕರೆದು ವಾರ್ನ್ ಮಾಡಿ' ಅಂತ ಪತ್ನಿ ವಿಜಯಲಕ್ಷ್ಮಿ ಕೂಡ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ಮನವಿ ಪತ್ರ ಬರೆದಿದ್ದರು. [ನಟ ದರ್ಶನ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪತ್ನಿ ವಿಜಯಲಕ್ಷ್ಮಿ]

    ಇದನ್ನ ಆಧರಿಸಿ ಡಿ.ಸಿ.ಪಿ ಲೋಕೇಶ್ ಕುಮಾರ್, ವಿಚಾರಣೆಗೆ ಹಾಜರಾಗುವಂತೆ ದರ್ಶನ್ ಗೆ ಸೂಚಿಸಿದ್ದರು. ಎರಡು ದಿನ ಮೈಸೂರಿನಲ್ಲಿ ತಂಗಿದ್ದ ದರ್ಶನ್ ಇಂದು ಡಿ.ಸಿ.ಪಿ ಕಛೇರಿಗೆ ಬಂದಿದ್ದಾರೆ. ಸದ್ಯಕ್ಕೆ ದರ್ಶನ್ ರವರ ವಿಚಾರಣೆ ನಡೆಯುತ್ತಿದೆ. ಹೆಚ್ಚಿನ ಅಪ್ ಡೇಟ್ಸ್ ಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ...[ಸಂಥಿಂಗ್ ವಿತ್ ಶಾಮ್ ನಲ್ಲಿ ಮಲ್ಯ, ದರ್ಶನ್ ಬಗ್ಗೆ, ಕ್ಲಿಕ್ ಮಾಡಿ]

    English summary
    Following harassment complaint from wife Vijayalakshmi and the security staff at Prestige South Ridge apartment, the Kannada actor Darshan appears before Tyagarajanagar police station for interrogation. Follow live updates for latest news from Filmibeat.kannada.com, Bengaluru
    Sunday, March 13, 2016, 13:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X