»   » ನೀವು ದರ್ಶನ್ ಫ್ಯಾನ್ ಆದ್ರೆ, ದರ್ಶನ್ ಯಾರ ಫ್ಯಾನ್.?

ನೀವು ದರ್ಶನ್ ಫ್ಯಾನ್ ಆದ್ರೆ, ದರ್ಶನ್ ಯಾರ ಫ್ಯಾನ್.?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅದೆಷ್ಟು ಲಕ್ಷ ಜನ ಫ್ಯಾನ್ಸ್ ಇರಬಹುದು ಹೇಳಿ. ಅವರೇನಾದ್ರೂ ರಸ್ತೆ ಬದಿಯಲ್ಲಿ ಅಥವಾ ಯಾವುದಾದ್ರೂ ಸಾರ್ವಜನಿಕ ಸಮಾರಂಭಗಳಲ್ಲಿ ಕಾಣಿಸಿಕೊಂಡರೆ ಬೆಲ್ಲಕ್ಕೆ ಇರುವೆ ಮುತ್ತಿಕೊಂಡಂತೆ ಅಭಿಮಾನಿಗಳು ದರ್ಶನ್ ಅವರನ್ನು ಮುತ್ತಿಕೊಳ್ಳುತ್ತಾರೆ.

ಅಂತಹ ಸ್ಟಾರ್ ನಟನೇ ಒಬ್ಬರಿಗೆ ಫ್ಯಾನ್ ಆಗಿದ್ದಾರೆ ಅಂದ್ರೆ ನೀವು ನಂಬ್ತೀರಾ?. ಅದೂ ಕೂಡ ಒಬ್ಬ ಕಿರುತೆರೆ ನಟಿಯ ಫ್ಯಾನ್ ದರ್ಶನ್ ಅವರು ಅಂದರೆ ಎಂತಹ ಆಶ್ಚರ್ಯಕರ ಸಂಗತಿ ಅಂತೀರಾ?.

ಹೌದು ಖಂಡಿತ ನೀವಿದನ್ನು ನಂಬಲೇಬೇಕು. ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ಅವರನ್ನು ತಮ್ಮ ಅಭಿಮಾನಿಯಾಗಿ ಸಂಪಾದಿಸಿರುವರು ಕಿರುತೆರೆ ನಟಿ ಅನುಷಾ ರಂಗನಾಥ್ ಅವರು.

ಮಹೇಶ್ ಬಾಬು ನಿರ್ದೇಶನದ 'ಕ್ರೇಜಿ ಬಾಯ್' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನವ ಪ್ರತಿಭೆಗಳಿಗೆ ಶುಭ ಹಾರೈಸಿ ಒಂದು ಸೀಕ್ರೇಟ್ ಬಿಚ್ಚಿಟ್ಟರು. ಜೊತೆಗೆ ಈ ಕಾರ್ಯಕ್ರಮಕ್ಕೆ ತಮಿಳು ಕಾಮಿಡಿ ನಟ ಸಂತಾನಂ ಅವರು ಇನ್ನೋರ್ವ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.[ಹೊಸ ಪ್ರತಿಭೆಗಳ ಗಾಡ್ ಫಾದರ್ ಮಹೇಶ್ ಬಾಬು]

ಅಷ್ಟಕ್ಕೂ ಈಗಷ್ಟೇ ಬಣ್ಣದ ಜಗತ್ತಿನಲ್ಲಿ ಅರಳುತ್ತಿರುವ ಪ್ರತಿಭೆಗೆ ದರ್ಶನ್ ಅವರು ಹೇಗೆ ಫ್ಯಾನ್ ಆದ್ರೂ ಅಂತ ನೀವು ಯೋಚನೆ ಮಾಡುತ್ತಿದ್ದೀರಾ?. ಹಾಗಿದ್ರೆ ಅದನ್ನು ತಿಳಿದುಕೊಳ್ಳುವ ಕುತೂಹಲಕ್ಕಾಗಿ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ಸೀಕ್ರೇಟ್ ಬಿಚ್ಚಿಟ್ಟ ದರ್ಶನ್

ಈಟಿವಿ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ 'ಗೋಕುಲದಲ್ಲಿ ಸೀತೆ' ಧಾರಾವಾಹಿ ನಟಿ ಅನುಷಾ ರಂಗನಾಥ್ ಅವರಿಗೆ ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ಅವರು ದೊಡ್ಡ ಫ್ಯಾನ್. ಈ ಸೀಕ್ರೇಟ್ ಅನ್ನು ಖುದ್ದು ದರ್ಶನ್ ಅವರು 'ಕ್ರೇಜಿ ಬಾಯ್' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.[ಇಲ್ಲ್ ಕೇಳಿ, 'ಇದು' ದರ್ಶನ್ ಅವರ ಆಜ್ಞೆ ಯಾರೂ ಮೀರಬೇಡಿ]

ಅನುಷಾ ಮುಗ್ದ ನಟನೆಗೆ ದರ್ಶನ್ ಫಿದಾ

'ಕ್ರೇಜಿ ಬಾಯ್' ಚಿತ್ರದ ನಾಯಕಿ ನಟಿಯಾಗಿ ಕಾಣಿಸಿಕೊಂಡಿರುವ ಅಶಿಕಾ ರಂಗನಾಥ್ ಅವರ ಸೋದರಿ ಅನುಷಾ ರಂಗನಾಥ್ ಅವರು 'ಗೋಕುಲದಲ್ಲಿ ಸೀತೆ' ಧಾರಾವಾಹಿಯಲ್ಲಿ ಮಾಡುತ್ತಿದ್ದ ಮುಗ್ದ ನಟನೆಯನ್ನು ದರ್ಶನ್ ಅವರು ಬಹಳ ಮೆಚ್ಚಿಕೊಂಡಿದ್ದರು.[ದರ್ಶನ್ ಗೆ ಅಭಿಮಾನಿಗಳಿಂದ ಜೋರಾದ ಚಪ್ಪಾಳೆ ಬರಲೇಬೇಕು.!]

ನಟನಾ ವೈಖರಿಗೆ ಜಾರಿ ಬಿದ್ದ ದರ್ಶನ್

ನಟಿ ಅನುಷಾ ಅವರು 'ಗೋಕುಲದಲ್ಲಿ ಸೀತೆ' ಧಾರಾವಾಹಿಯಲ್ಲಿ ಹೊಡಿಯುತ್ತಿದ್ದ ಡೈಲಾಗ್ ಮತ್ತು ಹಳ್ಳಿ ಭಾಷೆಯನ್ನು ಬಹಳ ಮುದ್ದು-ಮುದ್ದಾಗಿ ಮಾತನಾಡುತ್ತಾ ನಟಿಸುತ್ತಿದ್ದ ನಟನಾ ವೈಖರಿಗೆ ಮನ ಸೋತ ದರ್ಶನ್ ಅವರು ಜಾರಿ ಬಿದ್ದಿದ್ದಾರೆ. ಒಮ್ಮೊಮ್ಮೆ ಎಷ್ಟೇ ಕೆಲಸ ಇದ್ದರೂ ಕೂಡ ತರಾತುರಿಯಲ್ಲಿ ಬಂದು ಅನುಷಾ ಅವರಿಗೋಸ್ಕರ ದರ್ಶನ್ ಅವರು ಟಿವಿಯ ಎದುರು ಕುಳಿತಿದ್ದುಂಟು.

ಸೃಜನ್ ಗೂ ಹೇಳಿದ್ದ ದರ್ಶನ್

ಕಿರುತೆರೆ ನಟಿಗೆ ತಾನು ದೊಡ್ಡ ಅಭಿಮಾನಿ ಅನ್ನೋ ವಿಚಾರವನ್ನು ದರ್ಶನ್ ಅವರು ತಮ್ಮ ಕುಚಿಕು ಗೆಳೆಯ ಸೃಜನ್ ಲೋಕೇಶ್ ಅವರಿಗೂ ಹೇಳಿದ್ದರು. 'ದ ಗ್ರೇಟ್ ಸ್ಟೋರಿ ಆಫ್ ಸೋಡಾ ಬುಡ್ಡಿ' ಸಿನಿಮಾದ ಪ್ರಮೋಷನ್ ಗೆ ಅಂತ 'ಮಜಾ ಟಾಕೀಸ್' ಗೆ ಅನುಷಾ ರಂಗನಾಥ್ ಬಂದಿದ್ದಾಗ ಸೃಜನ್ ಅವರಿಗೆ ದರ್ಶನ್ ಈ ಗುಟ್ಟು ಹೇಳಿದ್ದರು. ಮಾತ್ರವಲ್ಲದೇ ತಾನು 'ಅವರನ್ನು ಕೇಳಿದೆ ಅಂತ ಹೇಳು' ಎಂದಿದ್ದರಂತೆ ದರ್ಶನ್.

ಅನುಷಾ ಮನದಾಳದ ಮಾತು

"ದರ್ಶನ್ ಅವರು ನನ್ನ ಫ್ಯಾನ್ ಅಂತ ಹೇಳುತ್ತಿದ್ದಂತೆ ನನ್ನ ಕಣ್ಣಲ್ಲಿ ನೀರು ಬಂತು. ವೇದಿಕೆ ಮೇಲೆ ಹೋದ ಮೇಲೆ ಏನು ಮಾತಾಡೋದು ಅಂತ ಗೊತ್ತಾಗಲಿಲ್ಲ. ಅನಿರೀಕ್ಷಿತವಾಗಿ ಒಬ್ಬ ಸ್ಟಾರ್ ನಟ ನನ್ನನ್ನು ಮೆಚ್ಚಿಕೊಂಡು ಫ್ಯಾನ್ ಅಂದಾಗ ಏನಂತ ಮಾತನಾಡಲಿ?. ಚಿತ್ರರಂಗಕ್ಕೆ ಕಾಲಿಟ್ಟಿದ್ದಕ್ಕೆ ನನ್ನ ಜನ್ಮ ಸಾರ್ಥಕ ಆದಂತಾಯಿತು" ಎಂದು ಅನುಷಾ ರಂಗನಾಥ್ ನುಡಿದಿದ್ದಾರೆ.

ಬೆಳ್ಳಿತೆರೆಯಲ್ಲಿ ಈಗಷ್ಟೇ ಅರಳುವ ಕುಸುಮ

ನಟಿ ಅನುಷಾ ಅವರು ಇತ್ತೀಚೆಗೆ ಬಿಡುಗಡೆ ಆದ 'ದ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ' ಚಿತ್ರದಲ್ಲಿ ನಾಯಕಿ ನಟಿಯಾಗಿ ಮಿಂಚುವ ಮೂಲಕ ಮೊದಲ ಬಾರಿಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದರು. ತಮ್ಮ ನಟನೆಯಿಂದಲೇ ಇದೀಗ ಸ್ಟಾರ್ ನಟನನ್ನು ಅಭಿಮಾನಿಯಾಗಿ ಸಂಪಾದಿಸಿರುವ ಅನುಷಾ ಅವರು 'ದ ಗ್ರೇಟ್ ಅನುಷಾ ರಂಗನಾಥ್' ಆಗಿದ್ದಾರೆ.

English summary
Kannada Actor Challenging star Darshan Big Fan of 'Gokuladalli Seethe' fame Serial Actress Anusha Ranganath. Here is the details check out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada