For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಮನೆಗೆ ಸುಗ್ಗಿ ಹಬ್ಬಕ್ಕೆ ಬಂದ ವಿಶೇಷ ಅತಿಥಿ

  By Pavithra
  |

  ಹಬ್ಬಗಳು ಹಾಗೂ ಹುಟ್ಟುಹಬ್ಬಗಳು ಸಿನಿಮಾ ಸ್ಟಾರ್ ಗಳ ಜೀವನದಲ್ಲಿ ಸಾಕಷ್ಟು ಇಂಪಾರ್ಟೆಂಟ್ ಆಗಿರುತ್ತವೆ. ಹಬ್ಬಗಳ ದಿನ ಮತ್ತು ಬರ್ತಡೇ ದಿನ ಅವರುಗಳು ಅಭಿನಯಿಸುವ ಸಿನಿಮಾಗಳ ಮಹೂರ್ತ ಹಾಗೂ ಹಾಡುಗಳ ಬಿಡುಗಡೆ, ಹೊಸ ವಸ್ತುಗಳ ಖರೀದಿ ಹೀಗೆ ಸಾಕಷ್ಟು ಒಳ್ಳೆ ಕೆಲಸಗಳನ್ನ ಇಂತಹ ದಿನಗಳಲ್ಲಿ ಹೆಚ್ಚಾಗಿ ಮಾಡುತ್ತಾರೆ.

  ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿರುವ ದರ್ಶನ್ ಅಭಿಮಾನಿಗಳಿಗೆ ಇಂದು ಡಬಲ್ ಖುಷಿ ಕೊಟ್ಟಿದ್ದಾರೆ. ಒಂದು ಕಡೆ ದರ್ಶನ್ ಅಭಿನಯದ 51ನೇ ಚಿತ್ರದ ಮಹೂರ್ತ ನೆರವೇರಿದೆ ಮತ್ತೊಂದು ಕಡೆ ದರ್ಶನ್ ಫ್ಯಾಮಿಲಿಗೆ ಸ್ಪೆಷಲ್ ಅತಿಥಿ ಸೇರಿಕೊಂಡಿದ್ದಾರೆ.

  ಇತ್ತೀಚಿಗಷ್ಟೇ ಟೆಸ್ಟ್ ಡ್ರೈವ್ ನೋಡಿದ್ದ ಕಾರ್ ಅನ್ನು ದರ್ಶನ್ ಕೊಂಡುಕೊಂಡಿದ್ದಾರೆ. ಕಾರ್ ಜೊತೆಯಲ್ಲಿ ಚಾಲೆಂಜಿಂಗ್ ಸ್ಟಾರ್ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ ಜೋರಾಗಿ ಆಚರಣೆ ಮಾಡಲಾಗಿದೆ. ಹೇಗಿದೆ ಡಿ ಬಾಸ್ ಹೊಸ ಕಾರ್? ಸುಗ್ಗಿ ಹಬ್ಬಕ್ಕೆ ಏನೆಲ್ಲಾ ಮಾಡಿದ್ರು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

  ದರ್ಶನ್ ಕೊಂಡುಕೊಂಡರು ಹೊಸ ಕಾರ್

  ದರ್ಶನ್ ಕೊಂಡುಕೊಂಡರು ಹೊಸ ಕಾರ್

  ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ಮನೆಯ ಮುಂದೆ ಲಂಬೋರ್ಗಿನಿ ಕಾರ್ ನಿಂತಿರುವ ಪೋಟೋಗಳು ವೈರಲ್ ಆಗಿತ್ತು. ಟೆಸ್ಟ್ ಡ್ರೈವ್ ನೊಡಿದ್ದ ಡಿ ಬಾಸ್ ಹಬ್ಬಕ್ಕೆ ಕಾರ್ ಕೊಂಡುಕೊಂಡಿದ್ದಾರೆ. ಬಿಳಿ ಕುದುರೆಯ ಒಡೆಯರಾಗಿದ್ದ ದರ್ಶನ್ ಈಗ ಬಿಳಿ ಲಂಬೋರ್ಗಿನಿ ಕಾರ್ ಒಡೆಯರಾಗಿದ್ದಾರೆ.

  ಹೆಚ್ಚಾಯ್ತು ದರ್ಶನ್ ಕಾರ್ ಕಲೆಕ್ಷನ್ಸ್

  ಹೆಚ್ಚಾಯ್ತು ದರ್ಶನ್ ಕಾರ್ ಕಲೆಕ್ಷನ್ಸ್

  ಈಗಾಗಲೇ ಐದಾರು ಕಾರುಗಳ ಒಡೆಯನಾಗಿರುವ ದರ್ಶನ್ ಕಾರ್ ಕಲೆಕ್ಷನ್ಸ್ ನಲ್ಲಿ ಮತ್ತೊಂದು ಹೊಸ ಕಾರ್ ಸೇರಿಕೊಂಡಿದೆ. ಸಿನಿಮಾ ಮಹೂರ್ತ ಮುಗಿಸಿ ಬಂದ ನಂತರ ಹೊಸ ಕಾರ್ ಗೆ ಪೂಜೆ ಸಲ್ಲಿಸಿದ್ದಾರೆ ದರ್ಶನ್.

  ಗೋ ಪೂಜೆ ಮಾಡಿದ ವಿಜಯಲಕ್ಷ್ಮಿ ದರ್ಶನ್

  ಗೋ ಪೂಜೆ ಮಾಡಿದ ವಿಜಯಲಕ್ಷ್ಮಿ ದರ್ಶನ್

  ಸಂಕ್ರಾಂತಿ ಹಬ್ಬ ವರ್ಷದ ಮೊದಲ ಹಬ್ಬ. ಪ್ರತಿಯೊಬ್ಬರು ಭೂಮಿತಾಯಿ ಹಾಗೂ ಗೋ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಪ್ರಕೃತಿ ಮಾತೆಗೆ ಧನ್ಯವಾದ ಅರ್ಪಿಸುತ್ತಾರೆ. ಅದೇ ರೀತಿಯಲ್ಲಿ ದರ್ಶನ್ ಅವರ ಮನೆಯಲ್ಲಿ ಪತ್ನಿ ವಿಜಯಲಕ್ಷ್ಮಿ ಕಂಚಿನ ಗೋವುಗಳಿವೆ ಪೂಜೆ ಸಲ್ಲಿಸಿದ್ದಾರೆ.

  ಫೆಬ್ರವರಿಯಿಂದ ಚಿತ್ರೀಕರಣ ಶುರು

  ಫೆಬ್ರವರಿಯಿಂದ ಚಿತ್ರೀಕರಣ ಶುರು

  ದರ್ಶನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರದ ಮಹೂರ್ತ ಮುಗಿಸಿರುವ ಸಿನಿಮಾತಂಡ ಫೆಬ್ರವರಿಯಲ್ಲಿ ಚಿತ್ರೀಕರಣ ಶುರು ಮಾಡಲಿದೆ. ಒಂದೇ ಶೆಡ್ಯೂಲ್ ನಲ್ಲಿ ಶೂಟಿಂಗ್ ಪ್ಲಾನ್ ಮಾಡಲಿದ್ದು ದರ್ಶನ್ ಅಭಿನಯದ ಮತ್ತೊಂದು ಕಮರ್ಷಿಯಲ್ ಚಿತ್ರದ ಇದಾಗಲಿದೆ. ಪಿ ಕುಮಾರ್ ಚಿತ್ರವನ್ನ ನಿರ್ದೇಶನ ಮಾಡಲಿದ್ದಾರೆ.

  English summary
  There is a saying, 'Work until you feel Lamborghini is cheap!' Of course, for a workaholic Kannada actor like Challenging Star Darshan it is not a big deal. Lamborghini car has come to Darshan's home to enhance Sankranti festival delight. Congratulations Darshan Thoogudeepa and Happy Makara Sankranti.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X