Just In
Don't Miss!
- Automobiles
ಎಲೆಕ್ಟ್ರಿಕ್ ವಾಹನಗಳ ಖರೀದಿ ಹೆಚ್ಚಿಸಲು ಹೊಸ ಯೋಜನೆ ಚಾಲನೆ ನೀಡಿದ ಕ್ರೆಡರ್
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸುಮಲತಾ ಭರ್ಜರಿ ಗೆಲುವು : ದರ್ಶನ್ ಮನೆ ಮುಂದೆ ಅಭಿಮಾನಿಗಳ ಸಂಭ್ರಮ
ಮಂಡ್ಯದಲ್ಲಿ ಸುಮಲತಾ ಗೆಲುವು ಸಾಧಿಸುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮಟ್ಟಿದೆ. ಭಾರಿ ಕುತೂಹಲದ ಕ್ಷೇತ್ರವಾಗಿದ್ದ ಮಂಡ್ಯ ಲೋಕಸಭಾ ಚುನಾವಣೆಯ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ರಾಜ್ಯದ ಜನರ ಚಿತ್ತ ಸೆಳೆದಿದ್ದ ಮಂಡ್ಯ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಗೆಲುವಿನ ಜಯಭೇರಿ ಭಾರಿಸಿದ್ದಾರೆ.
ಸುಮಲತಾ ಗೆಲುವು ಸಾಧಿಸುತ್ತಿದ್ದಂತೆ ಜೋಡೆತ್ತುಗಳಾಗಿದ್ದ ದರ್ಶನ್ ಮತ್ತು ಯಶ್ ಅಭಿಮಾನಿಗಳ ಸಂಭ್ರಮ ಕೂಡ ಮುಗಿಲು ಮುಟ್ಟಿದೆ. ಮಂಡ್ಯದಲ್ಲಿ ಸುಮಲತಾ ಪರ ಅಭಿಮಾನಿಗಳು ಸಿಹಿ ಹಂಚಿ ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದಾರೆ.
ಮಂಡ್ಯದಲ್ಲಿ ಸುಮಲತಾ ಗೆದ್ದರೇ ಜೋಡೆತ್ತುಗಳಿಗಾಗುವ ಅನುಕೂಲವೇನು?
ಬೆಳಗ್ಗೆಯಿಂದನೂ ಸಂಜೆಯವರೆಗೂ ಭಾರಿ ರೋಚಕತೆಯ ಕ್ಷೇತ್ರವಾಗಿದ್ದ ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಗೆಲುವು ಸಾಧಿಸುತ್ತಿದ್ದಂತೆ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ಸುಮಲತಾ ಗೆಲುವಿನ ಸಂಭ್ರಮವನ್ನು ಡಿ ಬಾಸ್ ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ದಾರೆ. ಮುಂದೆ ಓದಿ..

ದರ್ಶನ್ ನಿವಾಸದ ಮುಂದೆ ಸಂಭ್ರಮ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮುಂದೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಸುಮಲತಾ ಗೆಲುವು ಸಾಧಿಸುತ್ತಿದ್ದಂತೆ ದರ್ಶನ್ ಮನೆ ಮುಂದೆ ಅಭಿಮಾನಿಗಳು ಪಟಾಕಿ ಸಿಡಿಸಿ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ. ಅಷ್ಟೆಯಲ್ಲ ಡಿ ಬಾಸ್ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿದೆ.

ಸುಮಲತಾಗೆ ಜೋಡೆತ್ತುಗಳ ಬೆಂಬಲ
ಸುಮಲತಾ ಗೆಲುವಿಗೆ ಪ್ರಮುಖ ಕಾರಣಗಳಲ್ಲಿ ಜೋಡೆತ್ತುಗಳ ಬೆಂಬಲ ಕೂಡ ಒಂದು. ದರ್ಶನ್ ಮತ್ತು ಯಶ್ ಇಬ್ಬರು ಸಮಲತಾ ಅವರನ್ನು ಹೇಗಾದರು ಮಾಡಿ ಗೆಲ್ಲಿಸಲೇ ಬೇಕೆಂದು ಪಣತೊಟ್ಟು ನಿಂತಿದ್ದರು. ಸುಮಲತಾ ಚುನಾವಣೆಗೆ ನಿಂತ ಕ್ಷಣದಿಂದನೂ ಕೊನೆಯವರೆಗೂ ಸಮಲತಾ ಬೆನ್ನಿಗೆ ನಿಂತು ಪ್ರತೀ ಹೆಜ್ಜೆಯಲ್ಲೂ ಸುಮಲತಾ ಜೊತೆಯಿದ್ದು ಸಹಾಯ ಮಾಡಿದ್ದರು ದಚ್ಚು ಮತ್ತ ಯಶ್. ವಿರೋಧ ಪಕ್ಷದಿಂದ ಬಂದ ಟೀಕೆಗಳನ್ನು ಸಮಾಧಾನವಾಗಿಯೆ ಸ್ವೀಕರಿಸಿ ಈಗ ಫಲಿತಾಂಶದ ಮೂಲಕ ಉತ್ತರ ನೀಡಿದ್ದಾರೆ.
ಮಂಡ್ಯದಲ್ಲಿ ಸುಮಲತಾ ಭರ್ಜರಿ ಗೆಲುವಿನ ಹಿಂದಿದೆ ಈ '10' ಅಸ್ತ್ರಗಳು

ಮಂಡ್ಯಾದಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ಬೆಳಗ್ಗೆಯಿಂದಲು ಹಾರ್ಟ್ ಬೀಟ್ ಹೆಚ್ಚಿಸಿಕೊಂಡು ಫಲಿತಾಂಶಕ್ಕಾಗಿ ಕಾದುಕೊಳಿತಿದ್ದರು ಸುಮಲತಾ ಬೆಂಬಲಿಗರು. ಅಂಬರೀಶ್ ಪತ್ನಿ ಗೆಲವು ಸಾಧಿಸುತ್ತಿದ್ದಂತೆ ಬೆಂಬಲಿಗರ ಹರ್ಷೋದ್ಗಾರ ಮುಗಿಲು ಮುಟ್ಟಿದೆ. ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯ ಬೆಂಬಲಿಗರು ಸುಮಲತಾ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ. ಸುಮಲತಾ ಪರ ಘೋಷಣೆಗಳನ್ನು ಕೂಗುತ್ತಾ ಕುಣಿದುಕುಪ್ಪಳಿಸುತ್ತಿದ್ದಾರೆ ಅಭಿಮಾನಿಗಳು.
ಅಂಬಿ ಹುಟ್ಟುಹಬ್ಬಕ್ಕೆ ಸುಮಲತಾ ನೀಡಿದ ಒಲವಿನ ಉಡುಗೊರೆ

ಸ್ವಾಭಿಮಾನದ ಗೆಲುವು
ಅಭೂತಪೂರ್ವ ಗೆಲುವು ಪಡೆದ ಸುಮಲತಾ ಅವರು ಮಂಡ್ಯ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಮೊದಲ ಬಾರಿಗೆ ಸುಮಲತಾ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಗೆಲವು ಸಾಧಿಸಿ ಸಂಸತ್ ಮೆಟ್ಟಿಲು ಹತ್ತುತ್ತಿದ್ದಾರೆ. ಇದೆ ಸಂತಸದಲ್ಲಿ ಸುಮಲತಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡುವ ಮೂಲಕ ಜನತೆಗೆ ಧನ್ಯವಾದ ಹೇಳಿದ್ದಾರೆ. "ಇದು ನನ್ನ ಗೆಲುವಲ್ಲ ಸ್ವಾಭಿಮಾನಿ ಮಂಡ್ಯ ಜನತೆಯ ಗೆಲುವು. ಅಂಬರೀಶ್ ಮೇಲಿನ ಪ್ರೀತಿ ನನ್ನನ್ನು ಜನ ಗೆಲ್ಲಿಸಿದ್ದಾರೆ" ಎಂದು ಹೇಳಿದ್ದಾರೆ.